Ahmedabad Plane Crash : ಗುಜರಾತಿನ ಅಹಮದಾಬಾದ್‌ನಲ್ಲಿ ಭೀಕರ ವಿಮಾನ ಅಪಘಾತ ಸಂಭವಿಸಿದೆ. ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಪತನಗೊಂಡಿದೆ. ಬೋಯಿಂಗ್ 787-8 ಡ್ರೀಮ್‌ಲೈನರ್ ಹೆಸರಿನ ವಿಮಾನವು 230 ಪ್ರಯಾಣಿಕರು ಮತ್ತು 12 ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತೊಯ್ಯುತ್ತಿತ್ತು. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಈ ದುರ್ಘಟನೆ ಸಂಭವಿಸಿದೆ. ಈ ವಿಮಾನ ಅಪಘಾತ ಹೇಗೆ ಸಂಭವಿಸಿತು ಮತ್ತು ಏಕೆ ಸಂಭವಿಸಿತು? ನಿಜಕ್ಕೂ ಅಲ್ಲಿ ಏನಾಯಿತು? ಈ ಅಪಘಾತಕ್ಕೆ ಕಾರಣಗಳೇನು? ಎಂಬ ಪ್ರಶ್ನೆ ಮೂಡುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ವಿಮಾನ ಅಪಘಾತದ ಕಾರಣಗಳ ಬಗ್ಗೆ ಮಾಜಿ ಐಎಎಫ್ ಕ್ಯಾಪ್ಟನ್ ಸುರೇಶ್ ರೆಡ್ಡಿ ಎಂಬುವರು ಮಾಹಿತಿ ಬಹಿರಂಗಪಡಿಸಿದ್ದಾರೆ. ಮಾನವ ದೋಷ, ತಾಂತ್ರಿಕ ದೋಷಗಳು, ಹವಾಮಾನ ಮತ್ತು ಎಟಿಸಿ (ಏರ್ ಟ್ರಾಫಿಕ್ ಕಂಟ್ರೋಲರ್) ಸಮಸ್ಯೆಗಳು ವಿಮಾನ ಅಪಘಾತಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಹೇಳಿದ್ದಾರೆ. ಪೈಲಟ್‌ಗಳು ಅಥವಾ ಸಿಬ್ಬಂದಿ ನಡುವಿನ ಸಂವಹನ ದೋಷಗಳು ಮತ್ತು ಸಂಚರಣೆ ಸಮಸ್ಯೆಗಳಿಂದ ಅಪಘಾತ ಸಂಭವಿಸಿರಬಹುದು ಎಂದಿದ್ದಾರೆ.
ನಿರ್ವಹಣಾ ದೋಷಗಳಿಂದಾಗಿ ವಿಮಾನದ ಇಂಜಿನ್‌ಗಳು ಅಸಮರ್ಪಕವಾಗಿ ಕಾರ್ಯನಿರ್ವಹಿಸುತ್ತವೆ. ಇದು ಕೂಡ ಅಪಘಾತಕ್ಕೆ ಕಾರಣವಾಗುತ್ತದೆ ಎಂದು ಸುರೇಶ್ ರೆಡ್ಡಿ ಹೇಳಿದ್ದಾರೆ. ಕೆಲವೊಮ್ಮೆ ಪಕ್ಷಿ ಡಿಕ್ಕಿ ಮತ್ತು ವಿಮಾನದ ಮುರಿದ ಭಾಗಗಳು ಸಹ ಅಪಘಾತಕ್ಕೆ ಕಾರಣವಾಗಬಹುದು. ಪೈಲಟ್ ದೋಷದಿಂದಲೂ ಅಪಘಾತ ಸಂಭವಿಸಿರಬಹುದು. ಅಲ್ಲದೆ, ಹೊರಗಿನಿಂದ ಯಾರಾದರೂ ಡಿಕ್ಕಿ ಹೊಡೆದಿದ್ದರೂ ಸಹ ಪತನ ಸಂಭವಿಸಿರಬಹುದು ಎಂದು ರೆಡ್ಡಿ ಹೇಳಿದರು. ಇಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪೈಲಟ್ ಹೇಳಿದ್ದಾರೆ ಎಂಬ ವರದಿಗಳಿವೆ. ಕಪ್ಪು ಪೆಟ್ಟಿಗೆ ಪತ್ತೆಯಾದರೆ ಮಾತ್ರ ವಿಮಾನ ಅಪಘಾತಕ್ಕೆ ನಿಜವಾದ ಕಾರಣ ತಿಳಿಯುತ್ತದೆ ಎಂದು ಸುರೇಶ್ ರೆಡ್ಡಿ ಹೇಳಿದರು.
ವಿಮಾನ ಅಪಘಾತಗಳಿಗೆ ಕಾರಣಗಳೇನು?
* ನಿಯಮಿತ ನಿಗದಿತ ನಿರ್ವಹಣೆ
* ಹಾರಾಟದ ಸಮಯಕ್ಕೆ ಅನುಗುಣವಾಗಿ ನಿರ್ವಹಣೆ
* ವಿಮಾನ ಭಾಗಗಳ ಜೀವಿತಾವಧಿಗೆ ಅನುಗುಣವಾಗಿ ನಿರ್ವಹಣೆ
* ಹಾರಾಟ ನಡೆಸುವ ಮೊದಲು ಹಲವು ಪರಿಶೀಲನೆಗಳಿವೆ
* ಅಪಘಾತಕ್ಕೆ ತಾಂತ್ರಿಕ ಕಾರಣಗಳಿರಬಹುದು
* ಅನುಚಿತ ನಿರ್ವಹಣೆಯೂ ಇರಬಹುದು
* ಹಕ್ಕಿ ಡಿಕ್ಕಿ ಹೊಡೆದರೂ ಸಹ ಅಪಘಾತ ಸಂಭವಿಸುತ್ತೆ
* ಇಂಜಿನ್ ಬೆಂಕಿಗೆ ಆಹುತಿಯಾಗಬಹುದು
* ನೀವು ಹವಾಮಾನ ಪರಿಸ್ಥಿತಿಗಳನ್ನು ಸಹ ಪರಿಶೀಲಿಸಬೇಕು
* ಮೋಡಗಳನ್ನು ಪ್ರವೇಶಿಸಿದಾಗಲೂ ಅಪಾಯವಿದೆ
* ಪೈಲಟ್ ದೋಷದಿಂದಲೂ ಅಪಘಾತ ಸಂಭವಿಸಬಹುದು
* ಯಾರಾದರೂ ಹೊರಗಿನಿಂದ ಡಿಕ್ಕಿ ಹೊಡೆದರೂ ಸಹ ಇದು ಸಂಭವಿಸಬಹುದು
* ಅಂತಿಮವಾಗಿ ಕಪ್ಪು ಪೆಟ್ಟಿಗೆ ಕಂಡುಬಂದರೆ ನಿಖರ ಕಾರಣ ತಿಳಿಯುತ್ತದೆ.
ಅಂದಹಾಗೆ, ಆನ್‌ಲೈನ್ ಫ್ಲೈಟ್ ಟ್ರ್ಯಾಕರ್‌ನಲ್ಲಿ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣದ ಕಡೆಗೆ ಮಧ್ಯಾಹ್ನ 1.38ಕ್ಕೆ ಟೇಕಾಫ್ ಆಯಿತು. ಇದಾದ 5 ನಿಮಿಷದಲ್ಲಿ ವಿಮಾನ ಪತನಗೊಂಡಿದೆ ಎಂದು ವರದಿಯಾಗಿದೆ. ವಿಡಿಯೋವೊಂದು ವೈರಲ್ ಆಗಿದ್ದು, ವಿಮಾನ ಟೇಕಾಫ್ ಆಗಿ ಕೆಲವೇ ದೂರ ಸಾಗಿದ ಕೂಡಲೇ ನೆಲಕ್ಕೆ ಅಪ್ಪಳಿಸಿದೆ. ತಕ್ಷಣ ಬೆಂಕಿಯ ಜ್ವಾಲೆ ಹರಡಿದ ದೃಶ್ಯ ವೈರಲ್ ವಿಡಿಯೋದಲ್ಲಿದೆ.
ವಿಮಾನವು ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರ ನೇತೃತ್ವದಲ್ಲಿ ಪ್ರಥಮ ಅಧಿಕಾರಿ ಕ್ಲೈವ್ ಕುಂದರ್ ಅವರ ನೇತೃತ್ವದಲ್ಲಿ ಪ್ರಯಾಣ ಬೆಳೆಸಿತ್ತು. ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರಿಗೆ 8200 ಗಂಟೆಗಳ ಹಾರಾಟದ ಅನುಭವ ಹೊಂದಿದ್ದರು. ಸಹ ಪೈಲಟ್‌ಗೆ 1100 ಗಂಟೆಗಳ ಹಾರಾಟದ ಅನುಭವವಿತ್ತು. ವಿಮಾನ ಪತನದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಗುಜರಾತ್ ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಪೊಲೀಸ್ ಆಯುಕ್ತರೊಂದಿಗೆ ಮಾತನಾಡಿದ್ದಾರೆ. ಕೇಂದ್ರ ಸರ್ಕಾರದ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. (ಏಜೆನ್ಸೀಸ್)
ಏರ್ ಇಂಡಿಯಾ ವಿಮಾನ ಪತನದ ಭೀಕರ ದೃಶ್ಯ ಸೆರೆ: ಎದೆ ಝಲ್ ಎನಿಸುವ ವಿಡಿಯೋ ವೈರಲ್… Plane Crash
ನನ್ನ ಮಗ ಹಾಸ್ಟೆಲ್ ಕಟ್ಟಡದ 2ನೇ ಮಹಡಿಯಿಂದ ಜಿಗಿದು ಜೀವ ಉಳಿಸಿಕೊಂಡ: ಗುಜರಾತ್ ಮಹಿಳೆಯ ಹೇಳಿಕೆ | Plane Crash