

ಲಖನೌ: ಪ್ರಿಯಕರನಿಗಾಗಿ ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿರುವ ಪಾಕಿಸ್ತಾನದ ಪ್ರಜೆ ಸೀಮಾ ಹೈದರ್ ರಕ್ಷಾ ಬಂಧನದ ಅಂಗವಾಗಿ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಸೇರಿದಂತೆ ದೇಶದ ಪ್ರಮುಖ ನಾಯಕರಿಗೆ ರಾಖಿಯನ್ನು ಕಳಿಸಿಕೊಟ್ಟಿರುವುದಾಗಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸೀಮಾ ಹೈದರ್ ರಕ್ಷಾ ಬಂಧನದ ಪ್ರಯುಕ್ತ ದೇಶದ ಪ್ರಮುಖ ನಾಯಕರಿಗೆ ರಾಖಿಯನ್ನು ಕಳುಹಿಸಿಕೊಟ್ಟಿರುವುದಾಗಿ ಹೇಳುತ್ತಿರುವುದು ಕಂಡು ಬರುತ್ತದೆ. ಆಗಸ್ಟ್ 30ರಂದು ದೇಶಾದ್ಯಂತ ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ.
ದೇಶದ ಜವಾಬ್ದಾರಿ ಹೊತ್ತಿರುವ ನನ್ನ ಸಹೋದರರಿಗೆ ರಕ್ಷಾ ಬಂಧನದ ದಿನದಂದೇ ಈ ರಾಖಿಗಳು ತಲುಪಲೆಂದು ಮುಂಚಿತವಾಗಿಯೇ ಕಳುಹಿಸುತ್ತಿದ್ದೇನೆ. ಜೈಶ್ರೀರಾಮ್, ಜೈ ಹಿಂದ್, ಹಿಂದೂಸ್ತಾನ್ ಜಿಂದಾಬಾದ್ ಎಂದು ಹೇಳುತ್ತಿರುವುದು ಕಂಡು ಬರುತ್ತದೆ. ಮತ್ತೊಂದು ವಿಡಿಯೋದಲ್ಲಿ ಸೀಮಾ ತನ್ನ ಮಕ್ಕಳೊಂದಿಗೆ ರಾಖಿ ಸಿದ್ದಪಡಿಸುತ್ತಿರುವುದು ಎಲ್ಲೆಡೆ ವೈರಲ್ ಆಗಿದೆ.
ದೇಶದ ಪ್ರಮುಖ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಹಲವರಿಗೆ ರಕ್ಷಾ ಬಂಧನದ ಪ್ರಯುಕ್ತ ಸೀಮಾ ರಾಖಿ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.