More

    ಅಹಾನ ಡಿಯೋಲ್​​​​​ರನ್ನು ಹುಚ್ಚನಂತೆ ಪ್ರೀತಿಸಿದ್ದರು ಬಿ-ಟೌನ್‌ನ ಇಬ್ಬರು ಸೂಪರ್ ಸ್ಟಾರ್​ಗಳು!

    ಮುಂಬೈ: ಇತ್ತೀಚಿನ ದಿನಗಳಲ್ಲಿ ಡಿಯೋಲ್ ಫ್ಯಾಮಿಲಿ ಬಗ್ಗೆ ಬಿ-ಟೌನ್‌ನಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಧರ್ಮೇಂದ್ರ-ಹೇಮಾ ಮಾಲಿನಿ ಅವರ ಹಿರಿಯ ಮಗಳು ಇಶಾ ಡಿಯೋಲ್ ಮತ್ತು ಭರತ್ ತಖ್ತಾನಿ ಬೇರೆಯಾಗುವುದಾಗಿ ಘೋಷಿಸಿದಾಗಿನಿಂದ ಎಲ್ಲೆಡೆ ಅವರ ಬಗ್ಗೆಯೇ ಮಾತನಾಡಲಾಗುತ್ತಿದೆ. ಈ ವಿಚಾರದಲ್ಲಿ ಅಹಾನ ಡಿಯೋಲ್ ತನ್ನ ಸಹೋದರಿಗೆ ಹೆಚ್ಚು ಸಪೋರ್ಟ್ ಮಾಡುತ್ತಿರುವುದು ಕಂಡುಬಂದಿದೆ. ಹೀಗಾಗಿ ಆಕೆ ಕೂಡ ಹೆಚ್ಚು ಸುದ್ದಿಯಲ್ಲಿದ್ದಾಳೆ.
    ಅಹಾನಾ ಸಿನಿಮಾಗಳಿಂದ ದೂರವಿದ್ದರೂ ಬಿ-ಟೌನ್‌ನ ಇಬ್ಬರು ಹ್ಯಾಂಡ್​​​ಸಮ್ ಹೀರೋಗಳು ಅಹಾನಾ ಅವರನ್ನು ಬಹಳ ಪ್ರೀತಿಸುತ್ತಿದ್ದ ಸಮಯವಿತ್ತು ಎಂಬುದು ಕೆಲವೇ ಜನರಿಗೆ ಮಾತ್ರ ತಿಳಿದಿದೆ. ಒಂದು ವೇಳೆ ಅಹಾನಾ ಅವರಿಗೆ ಒಪ್ಪಿಗೆ ಕೊಟ್ಟಿದ್ದರೆ ಧರ್ಮೇಂದ್ರ ಅವರ ಅಳಿಯ ಆಗುತ್ತಿದ್ದ ಆ ನಟರು ಯಾರಿರಬಹುದು ಎಂದು ತಿಳಿಯೋಣ?

    ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಅವರ ಕಿರಿಯ ಮಗಳು ಚಲನಚಿತ್ರಗಳಿಂದ ದೂರ ಇರಬಹುದು. ಆದರೆ ಇಬ್ಬರು ಬಾಲಿವುಡ್ ಹೀರೋಗಳು ಅಹಾನಾರನ್ನು ಹುಚ್ಚನ್ನಂತೆ ಪ್ರೀತಿ ಮಾಡುತ್ತಿದ್ದರು. ಆ ಹೀರೋಗಳು ಬೇರಾರೂ ಅಲ್ಲ, ರಣವೀರ್ ಸಿಂಗ್ ಮತ್ತು ಆದಿತ್ಯ ರಾಯ್ ಕಪೂರ್. ಹೌದು, ಒಂದು ಕಾಲದಲ್ಲಿ ಅಹಾನಾರನ್ನು ಹುಚ್ಚರಂತೆ ಪ್ರೀತಿಸಿದ ನಟರು ಇವರೇ. ವರದಿಗಳ ಪ್ರಕಾರ ಅಹಾನಾ ಮತ್ತು ರಣವೀರ್ ಸಿಂಗ್ ಪರಸ್ಪರ 5 ವರ್ಷಗಳ ಕಾಲ ಡೇಟಿಂಗ್ ಮಾಡಿದರು, ಆದರೆ ನಂತರ ಆದಿತ್ಯ ರಾಯ್ ಕಪೂರ್ ಈ ಪ್ರೇಮಕಥೆಗೆ ಪ್ರವೇಶಿಸಿದಾಗ ಎಲ್ಲವೂ ಬದಲಾಯಿತು.

    ಆದಿತ್ಯಗಾಗಿ ಅಹಾನಾ ರಣವೀರ್ ಕಪೂರ್ ಅವರನ್ನು ಕೈಬಿಟ್ಟರು. ರಣವೀರ್ ಕೂಡ ಒಮ್ಮೆ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದರು. ಐದು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಹುಡುಗಿ ಇದ್ದಕ್ಕಿದ್ದಂತೆ ತನ್ನಿಂದ ದೂರವಾದ ಬಗ್ಗೆ ರಣವೀರ್ ಹೇಳಿದ್ದರು. ರಣವೀರ್ ತನ್ನ ಸಂಬಂಧದ ಬಗ್ಗೆ ತುಂಬಾ ಗಂಭೀರವಾಗಿದ್ದರೂ ಆದಿತ್ಯ ರಾಯ್ ಕಪೂರ್ ಕಾರಣ, ಅಹಾನಾ ರಣವೀರ್​​​​ನಿಂದ ದೂರವಾದರು.

    4 ವರ್ಷ ಡೇಟಿಂಗ್ 
    ಹೌದು ಇಂದಿನ ಸೂಪರ್ ಸ್ಟಾರ್ ರಣವೀರ್ ಸಿಂಗ್ ಅವರನ್ನು ಆದಿತ್ಯ ರಾಯ್ ಕಪೂರ್ ಕಾರಣದಿಂದ ಅಹಾನಾ ಡಿಯೋಲ್ ತಿರಸ್ಕರಿಸಿದ್ದರು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಗುಜಾರಿಷ್ ಚಿತ್ರದಲ್ಲಿ ಅಹಾನಾ ಮತ್ತು ಆದಿತ್ಯರ ಆಪ್ತತೆ ಹೆಚ್ಚಾಯಿತು. ಈ ಸಮಯದಲ್ಲಿ, ರಣವೀರ್ ತನ್ನ ಅಧ್ಯಯನಕ್ಕಾಗಿ ಅಮೆರಿಕಕ್ಕೆ ಹೋದರು. ಅಹಾನಾ ಮತ್ತು ಆದಿತ್ಯ ಸುಮಾರು ನಾಲ್ಕು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿ, ನಂತರ ಇಬ್ಬರೂ ಬೇರೆಯಾದರು. ಆದಿತ್ಯ 2012 ರ ಚಿತ್ರ ‘ಆಶಿಕಿ 2’ ನಲ್ಲಿ ಶ್ರದ್ಧಾ ಕಪೂರ್ ಜೊತೆ ಕೆಲಸ ಮಾಡಿದರು ಮತ್ತು ಈ ಚಿತ್ರದ ಸೆಟ್‌ಗಳಲ್ಲಿ ಇಬ್ಬರೂ ಪರಸ್ಪರ ಹತ್ತಿರವಾಗಿದ್ದರು. ನಂತರ, 2014 ರಲ್ಲಿ, ಅಹಾನಾ ದೆಹಲಿಯ ಉದ್ಯಮಿಯನ್ನು ವಿವಾಹವಾದರು.

    ಇಶಾ ಡಿಯೋಲ್ ಸಾಂಸಾರಿಕ ಜೀವನದಲ್ಲಿ ಬಿರುಕಿಗೆ ಕಾರಣವಾದ ಆ ಯುವತಿ; ಧರ್ಮೇಂದ್ರರ ಅಳಿಯನ ವಿವಾಹೇತರ ಸಂಬಂಧವೇ ಇಷ್ಟಕ್ಕೆಲ್ಲ ಕಾರಣ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts