More

    6 ವರ್ಷಗಳ ಬಳಿಕ ಈ ದಂಪತಿ…! ಸುದ್ದಿ ಕೇಳಿ ನಾವೇ ನಕ್ಕಿದ್ದೇವೆ, ಕಡೆಗೂ ಸ್ಪಷ್ಟನೆ ಕೊಟ್ಟ ಬಿಗ್ ಬಾಸ್​ ವಿಜೇತ

    ಸಿನಿಮಾ ತಾರೆಯರು ಅಥವಾ ಸೆಲೆಬ್ರಿಟಿಗಳು ಅಂದಮೇಲೆ ಒಂದಲ್ಲ ಒಂದು ವಿಷಯಗಳಿಗೆ ಟ್ರೋಲ್ ಆಗುತ್ತಿರುತ್ತಾರೆ. ಕೆಲವೊಂದಿಷ್ಟು ಒಳ್ಳೆಯ ವಿಚಾರಗಳಿಗೆ ಮೀಮ್​ ಆದ್ರೆ, ಇನ್ನೂ ಕೆಲವು ತಾವು ಮಾಡಿಕೊಂಡ ಎಡವಟ್ಟಿಗೆ ಇರುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ನಡೆದುಕೊಳ್ಳುವ ರೀತಿ ಹಾಗೂ ಮಾತನಾಡುವ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಹೇಗೆ ಬೇಕಾದರೂ ಬದಲಾಗಬಹುದು. ಸ್ಟಾರ್​ ಸೆಲೆಬ್ರಿಟಿಗಳ ದಾಂಪತ್ಯ ಜೀವನದ ಬಗ್ಗೆ ಹೆಚ್ಚು ಕುತೂಹಲ ವ್ಯಕ್ತಪಡಿಸುವ ಅನೇಕರು, ದಂಪತಿಗಳಿಗೆ ಇಲ್ಲದ ಮಗುವಿನ ನಿರೀಕ್ಷೆ ಬಗ್ಗೆ ತಮಗೆ ಗೊತ್ತಿರುವಂತೆ ಅಭಿಪ್ರಾಯಗಳನ್ನು ಹೊರಹಾಕಿರುತ್ತಾರೆ.

    ಇದನ್ನೂ ಓದಿ: ಆಸೆ-ಆಮಿಷವೊಡ್ಡುವುದು ಬಿಜೆಪಿ ಜಾಯಮಾನವಲ್ಲ: ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್

    ಸದ್ಯ ಈ ಬಿಸಿ ಇದೀಗ ಬಿಗ್​ ಬಾಸ್​ ವಿಜೇತನಿಗೆ ತಟ್ಟಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟು ಆರು ವರ್ಷಗಳು ಕಳೆದರೂ ಮೊದಲ ಮಗುವಿನ ಬಗ್ಗೆ ಧ್ವನಿ ಎತ್ತದ ನಟನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವದಂತಿ ಹಬ್ಬಿಸಿದ ನೆಟ್ಟಿಗರು, ಈ ದಂಪತಿಗಳು ಈಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಚರ್ಚಿಸಿದ್ದಾರೆ. ಸದ್ಯ ಈ ಬಗ್ಗೆ ಮಾಹಿತಿ ಪಡೆದ ದಂಪತಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದು, ತದನಂತರ ಸ್ಪಷ್ಟನೆ ಸಹ ನೀಡಿದ್ದಾರೆ.

    ಹಿಂದಿ ಬಿಗ್ ಬಾಸ್ ಸೀಸನ್​ 9ರ ವಿನ್ನರ್ ಪ್ರಿನ್ಸ್ ನರುಲಾ ಮತ್ತು ಅವರ ಪತ್ನಿ ಯುವಿಕಾ ಚೌಧರಿ ಮದುವೆಯಾಗಿ ಆರು ವರ್ಷಗಳು ಕಳೆದಿದೆ. ತಮ್ಮ ಮೊದಲ ಮಗುವನ್ನು ಒಟ್ಟಿಗೆ ನಿರೀಕ್ಷಿಸುತ್ತಿದ್ದಾರೆ ಎಂಬ ಸುದ್ದಿಯು ವ್ಯಾಪಕವಾಗಿ ಹರಿದಾಡಿತ್ತು. ವದಂತಿಗಳನ್ನು ತಳ್ಳಿಹಾಕಿದ ಪ್ರಿನ್ಸ್, ಈ ರೀತಿಯ ವದಂತಿಗಳು ಎಲ್ಲಿಂದ ಹೊರಹೊಮ್ಮುತ್ತವೆ ಎಂಬುದು ನನಗೆ ಗೊತ್ತಿಲ್ಲ. ನಾವು ಸುದ್ದಿಯನ್ನು ಓದಿದಾಗ, ಮೊದಲು ನಕ್ಕಿದ್ದೇವೆ ಎಂದರು.

    ಇದನ್ನೂ ಓದಿ: ಆಕೆಗೋಸ್ಕರ ಖರೀದಿಸಿದ್ದು 2 ಬೈಕ್, ಒಂದು ಸ್ಕೂಟರ್​! ಮದುವೆ ಆದ ಮೇಲೂ ಮುಗಿಯಲಿಲ್ಲ…

    ಯುವಿಕಾ ಇನ್ನೂ ಗರ್ಭಿಣಿಯಾಗಿಲ್ಲ. ಈ ವದಂತಿಗಳು ಸೃಷ್ಟಿಯಾಗಲು ಬಹುಶಃ ನಾನು ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ನೀಡಿದ ಹೇಳಿಕೆ ಇರಬಹುದು ಎಂದು ತಿಳಿಸಿದ್ದಾರೆ,(ಏಜೆನ್ಸೀಸ್).

    “ಹಾರ್ದಿಕ್ ನಾಯಕತ್ವ ಹೀಗೆ ಮುಂದುವರಿದರೆ…” ಪಾಂಡ್ಯ ಕ್ಯಾಪ್ಟನ್ಸಿ ಬಗ್ಗೆ ಭವಿಷ್ಯ ನುಡಿದ ಮನೋಜ್ ತಿವಾರಿ!

    4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts