More

    ಕೊನೆಗೂ 20 ವರ್ಷಗಳ ಬಳಿಕ ಜೈಲಿನಿಂದ ಬಿಡುಗಡೆ ಆದ; ವಾಪಸ್ ಬರುವಷ್ಟರಲ್ಲಿ ಹೆಂಡ್ತಿ, ಮಗ, ಅಮ್ಮ, ಇಬ್ಬರು ಸೋದರರೂ ಇರಲಿಲ್ಲ!

    ನವದೆಹಲಿ: ಒಂದು ಸಣ್ಣ ಅಪರಾಧ ಮಾಡಿದ್ದಕ್ಕೆ ಜೈಲು ಸೇರಿದ ಈತ ಅಲ್ಲಿಂದ ಬಿಡುಗಡೆ ಆಗಿದ್ದು ಬರೋಬ್ಬರಿ 20 ವರ್ಷಗಳ ಬಳಿಕ. ದುರಂತವೆಂದರೆ ಈತ ಜೈಲಿನಿಂದ ವಾಪಸ್ ಬರುವಷ್ಟರಲ್ಲಿ ಹೆಂಡತಿ, ಮಗ, ಅಮ್ಮ ಮಾತ್ರವಲ್ಲದೆ ಇಬ್ಬರು ಸೋದರರನ್ನೂ ಕಳೆದುಕೊಂಡಿದ್ದ. ಅಷ್ಟಕ್ಕೂ 20 ವರ್ಷಗಳ ಶಿಕ್ಷೆ ಆಗಲು ಈತ ಮಾಡಿದ್ದ ಅಪರಾಧ ಏನು ಎಂದು ಹೇಳಿದರೆ ಅಳುವುದೋ ನಗುವುದೋ ಎಂಬ ದ್ವಂದ್ವ ಕಾಡಿದರೂ ಅಚ್ಚರಿ ಏನಲ್ಲ.

    67 ವರ್ಷದ ಈತ 20 ವರ್ಷಗಳ ಹಿಂದೆ ಮಾಡಿದ್ದ ಒಂದು ಸಣ್ಣ ಅಪರಾಧಕ್ಕೆ ಜೈಲಿಗೆ ತಳ್ಳಲ್ಪಟ್ಟಿದ್ದ. ಕೊನೆಗೂ ದ ಇನ್ನೋಸೆನ್ಸ್​ ಪ್ರಾಜೆಕ್ಟ್​ ನ್ಯೂ ಆರ್ಲಿಯನ್ಸ್​ ಅವರ ಅಭಿಯಾನದ ಪರಿಣಾಮವಾಗಿ ಬಿಡುಗಡೆಗೊಂಡಿದ್ದಾನೆ. 2000ನೇ ಇಸವಿಯ ಸೆಪ್ಟೆಂಬರ್​ನಲ್ಲಿ ಬರೀ ಎರಡು ಶರ್ಟ್ ಕದ್ದ ಪ್ರಕರಣದಲ್ಲಿ ಈತನ ಮೇಲೆ ಕೇಸು ದಾಖಲಾಗಿತ್ತು. ಅದೂ ಆ ಅಂಗಿಗಳ ಮೌಲ್ಯ 500 ಡಾಲರ್ ಆಗಿತ್ತು. ಆದರೆ ಈತನಿಗೆ ವಿಧಿಸಿದ್ದು ಮಾತ್ರ 23 ವರ್ಷಗಳ ಜೈಲು ಶಿಕ್ಷೆ. ಕಟುವಾದ ಶಿಕ್ಷೆಗೆ ಅವಕಾಶ ಇರುವ ಲೂಸಿಯಾನದ ಕಾಂಟ್ರೊವರ್ಷಿಯಲ್ ಹ್ಯಾಬಿಚುವಲ್ ಒಫೆಂಡರ್ ಲಾ ಅನ್ವಯ ಈತನಿಗೆ ಸುದೀರ್ಘ ಶಿಕ್ಷೆ ವಿಧಿಸಲಾಗಿತ್ತು. ಆದರೆ ಇದಕ್ಕೂ ಮೊದಲು ಈತ​ 36 ಸಲ ಕದ್ದು ಸಿಕ್ಕಿಬಿದ್ದಿದ್ದು, ಬಂಧನಕ್ಕೆ ಒಳಗಾಗಿ ಬಿಡುಗಡೆ ಹೊಂದಿದ್ದ. ಹೀಗಾಗಿ ಕಳ್ಳತನವನ್ನೇ ಚಾಳಿ ಆಗಿಸಿಕೊಂಡಿದ್ದ ಈತನಿಗೆ ಈ ಸುದೀರ್ಘ ಶಿಕ್ಷೆ ವಿಧಿಸಲಾಗಿತ್ತು ಎನ್ನಲಾಗಿದೆ.

    ಇದನ್ನೂ ಓದಿ: ರುಂಡ-ಮುಂಡ ಬೇರೆ ಮಾಡಿ ಸೇಡು ತೀರಿಸಿಕೊಂಡರು; ಚಿಕ್ಕಪ್ಪನ ಮೇಲಿನ ದ್ವೇಷಕ್ಕೆ ಮಗನ ಕೊಲೆ

    ಬರೀ ಎರಡು ಶರ್ಟ್ ಕದ್ದಿದ್ದಕ್ಕೆ ಹೀಗೆ ದೊಡ್ಡ ಶಿಕ್ಷೆ ನೀಡಲು ವರ್ಣಭೇದ ಕಾರಣ. ಈತ ಕರಿಯನಾದ್ದರಿಂದ ಹೀಗೆ ಮಾಡಲಾಗಿದೆ. ಒಂದು ವೇಳೆ ಬಿಳಿಯರು ಇಂಥದ್ದೇ ಅಪರಾಧ ಮಾಡಿದ್ದಿದ್ದರೆ ಈ ರೀತಿ ಶಿಕ್ಷೆ ಆಗುತ್ತಿತ್ತಾ? ಎಂಬುದಾಗಿ ದ ಇನ್ನೋಸೆನ್ಸ್​ ಪ್ರಾಜೆಕ್ಟ್​ ನ್ಯೂ ಆರ್ಲಿಯನ್ಸ್​ ಪ್ರಶ್ನಿಸಿದೆ. ಈ ಸಂಘಟನೆ ಅಭಿಯಾನದಿಂದಾಗಿ ಈತ ಕಡೇಪಕ್ಷ ಮೂರು ವರ್ಷ ಮುಂಚಿತವಾಗಿ ಬಿಡುಗಡೆ ಆಗುವಂತಾಗಿದೆ.

    ಇನ್ನೂ ದುರಂತದ ವಿಷಯವೆಂದರೆ ಈತ 20 ವರ್ಷಗಳ ಶಿಕ್ಷೆ ಬಳಿಕ ಬಿಡುಗಡೆಗೊಂಡು ಮನೆಗೆ ಬರುವಷ್ಟರಲ್ಲಿ ಪತ್ನಿ, ಪುತ್ರ, ತಾಯಿ ಹಾಗೂ ಇಬ್ಬರು ಸೋದರರು ಮೃತಪಟ್ಟಿದ್ದರು. 20 ವರ್ಷಗಳ ಕಾಲ ಎಲ್ಲರನ್ನೂ ಅಗಲಿ ಜೈಲಿನಲ್ಲಿದ್ದು ಹೊರಗೆ ಬಂದ ಈತ ಎಲ್ಲರೊಂದಿಗೆ ಕಾಲ ಕಳೆಯಬೇಕು ಎನ್ನುವಷ್ಟರಲ್ಲಿ ಅವರೆಲ್ಲ ಶಾಶ್ವತವಾಗಿ ಈತನನ್ನು ಅಗಲಿದ್ದಾರೆ. ಅಂದಹಾಗೆ ಈತನ ಹೆಸರು ಗೈ ಫ್ರಾಂಕ್. ಇದು ನಡೆದಿದ್ದು ಅಮೆರಿಕದಲ್ಲಿ. (ಏಜೆನ್ಸೀಸ್​)

    ಇದನ್ನೂ ಓದಿ: ಅಂಬಾರಿಯ ಕನಸು ಚೂರುಚೂರು; ಒಂದೇ ವಾರದಲ್ಲಿ 36 ಬಸ್​ಗಳಿಗೆ ಹಾನಿ, 19 ಸಿಬ್ಬಂದಿಯ ಬಂಧನ

    ಬೆಚ್ಚಿಬೀಳಿಸುವಂತಿದೆ ಬೆಂಗಳೂರಿನಲ್ಲಿ ಕರೊನಾ ಸೋಂಕಿನ ಪ್ರಮಾಣ!; ಇಂದು ಇದುವರೆಗಿನ ಗರಿಷ್ಠ ಪ್ರಕರಣ ದಾಖಲು..

    ಅತ್ಯಾಚಾರಿಗಳಿಂದ ತಪ್ಪಿಸಿಕೊಳ್ಳಲು ಮೂರನೇ ಮಹಡಿಯಿಂದ ಜಿಗಿದ ಯುವತಿ; ಇಲ್ಲಿ ಹೆಣ್ಣಿಗೆ ಹೆಣ್ಣೇ ಶತ್ರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts