ತ್ರಿವಳಿ ರಂಗಿನಲ್ಲಿ ಮಿಂದೆದ್ದ ತ್ರಿಷಾ; ಸ್ವಾತಂತ್ರ್ಯ ದಿನಕ್ಕೆ ವಿಶೇಷ ಫೋಟೋ

EfdIqSwVAAU6JeW
Published on

ದಕ್ಷಿಣ ಭಾರತದ ಟಾಪ್​ ನಟಿಯರಲ್ಲಿ ಸ್ಥಾನಪಡೆದವರಲ್ಲಿ ನಟಿ ತ್ರಿಷಾ ಕೃಷ್ಣನ್​ ಸಹ ಮುಂಚೂಣಿಯಲ್ಲಿದ್ದಾರೆ. ಆಯ್ದುಕೊಳ್ಳುವ ಸಿನಿಮಾ ಮತ್ತು ಪಾತ್ರಗಳ ವಿಚಾರದಲ್ಲಿ ತುಂಬ ಕಟ್ಟುನಿಟ್ಟಾಗಿರುವ ತ್ರಿಷಾ, ಅಪಾರ ಪ್ರಮಾಣದ ಅಭಿಮಾನಿಗಳನ್ನೂ ಹೊಂದಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿಯೂ ಸಕ್ರಿಯರಾಗಿರುವ ತ್ರಿಷಾ, ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ವಿಶೇಷವಾದ ಫೋಟೋವೊಂದನ್ನು ಶೇರ್​ ಮಾಡಿಕೊಂಡಿದ್ದಾರೆ.

ಈಗಾಗಲೇ ಸಾಕಷ್ಟು ಸೆಲೆಬ್ರಿಟಿಗಳು ತಂತಮ್ಮ ಸೋಷಿಯಲ್​ ಮೀಡಿಯಾಗಳಲ್ಲಿ ಸ್ವಾತಂತ್ರ್ಯ ದಿನಾಚರಣೆಗೆಂದೆ ಫೋಟೋಶೂಟ್​ ಮಾಡಿಸಿಕೊಂಡು ಆ ಫೋಟೋಗಳನ್ನು ಅಪ್​ಲೋಡ್​ ಮಾಡಿ ಶುಭಕೋರಿದ್ದಾರೆ. ಇನ್ನು ಕೆಲವರು ರಾಷ್ಟ್ರಧ್ವಜದ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇವರೆಲ್ಲರ ನಡುವೆ ನಟಿ ತ್ರಿಷಾ ಕೃಷ್ಣನ್​ ವಿಭಿನ್ನವಾಗಿ ಕಾಣಿಸುತ್ತಾರೆ.

ಅಂದರೆ, ವಿವಿಧ ಸಿನಿಮಾಗಳಲ್ಲಿನ ಕಾಸ್ಟ್ಯೂಮ್​ಗಳನ್ನೇ ಬಾವುಟ ಮಾಡಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೇಸರಿ ಬಿಳಿ ಮತ್ತು ಹಸಿರು ಬಣ್ಣದ ದಿರಿಸಿನಲ್ಲಿರುವ ಮೂರು ಫೋಟೋಗಳನ್ನು ಹಾಕಿ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ. ಅಭಿಮಾನಿ ವಲಯದಿಂದಲೂ ಈ ಫೋಟೋಕ್ಕೆ ಹೆಚ್ಚಿನ ಲೈಕ್ಸ್​ಗಳು ಸಂದಾಯವಾಗುತ್ತಿದ್ದು, ಸಿನಿಮಾ ಬಗ್ಗೆಯೂ ಪ್ರಶ್ನಿಸಿದ್ದಾರೆ.

ಸದ್ಯ ತಮಿಳಿನ ಐದು ಮಲಯಾಳಂನ ಒಂದು ಸಿನಿಮಾದಲ್ಲಿ ತ್ರಿಷಾ ತೊಡಗಿಸಿಕೊಂಡಿದ್ದು, ಇನ್ನು ಕೆಲ ದಿನಗಳ ಬಳಿಕ ಶೂಟಿಂಗ್​ನಲ್ಲಿಯೂ ಭಾಗವಹಿಸಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net