

ಹೈದರಾಬಾದ್: ಸಾಮಾನ್ಯವಾಗಿ ಸೆಲಬ್ರಿಟಿಗಳು ಅದರಲ್ಲೂ ಸಿನಿಮಾ ನಟ, ನಟಿಯರು ಹೈಫೈ ಜೀವನಕ್ಕೆ ಮಾರುಹೋಗಿ ಜನಸಾಮಾನ್ಯರು ಸೇರುವ ಕಡೆ ಬರುವುದಿಲ್ಲ. ಆದರೆ ಇದಕ್ಕೆ ಅಪವಾದ ಎಂಬಂತೆ ಕನ್ನಡತಿ, ಟಾಲಿವುಡ್ನ ಖ್ಯಾತ ನಟಿ ಶ್ರೀಲೀಲಾ(Sreeleela) ಸಾಮಾನ್ಯ ಯುವತಿಯಂತೆ ರಸ್ತೆ ಬದಿಯ ಟೀ ಅಂಗಡಿಯಲ್ಲಿ ಟೀ ಕುಡಿದು ಅಚ್ಚರಿ ಮೂಡಿಸಿದ್ದಾರೆ.
ಶ್ರೀಲೀಲಾ ನಟನೆ ಮತ್ತು ಹೃದಯವೈಶಾಲ್ಯತೆಯಿಂದ ಸಿನಿ ರಸಿಕರಷ್ಟೇ ಅಲ್ಲದೆ, ಜನಸಾಮಾನ್ಯರನ್ನು ಮೋಡಿ ಮಾಡಿರುವ ನಟಿ. ಅನಾಥರಿಗೆ, ದೈಹಿಕವಾಗಿ ಮತ್ತು ಮಾನಸಿಕವಾಗಿ ಅಂಗವಿಕಲರಿಗೆ ಸಾಧ್ಯವಾದಷ್ಟು ಸಹಾಯ ಮಾಡುವ ಮೂಲಕ ಆಗಾಗ್ಗೆ ಮಾನವೀಯತೆಯೇ ಎಲ್ಲಕ್ಕಿಂತ ಮುಖ್ಯ ಎಂದು ನಡೆದುಕೊಳ್ಳುತ್ತ ಇತರರಿಗೆ ಮಾದರಿಯಾಗಿ ನಿಲ್ಲುವ ನಟಿಯಾಗಿದ್ದಾರೆ.
ಇತ್ತೀಚೆಗಷ್ಟೇ ಈ ಚೆಲುವೆ ತಾನು ನಟಿಸುತ್ತಿರುವ ಚಿತ್ರದ ಶೂಟಿಂಗ್‌ಗಾಗಿ ಆಂಧ್ರಪ್ರದೇಶಕ್ಕೆ ತೆರಳಿದ್ದರು. ಆದರೆ, ಶೂಟಿಂಗ್ ಬಿಡುವಿನ ಮಧ್ಯದಲ್ಲಿ ತನ್ನ ತಾಯಿಯೊಂದಿಗೆ ರಸ್ತೆಯುದ್ದಕ್ಕೂ ಮಹಿಳೆಯೊಬ್ಬರು ನಡೆಸುತ್ತಿದ್ದ ಟೀ ಅಂಗಡಿಗೆ ತೆರಳಿ ಟೀ ಕುಡಿದು ಅಲ್ಲಿ ಸ್ವಲ್ಪ ಹೊತ್ತು ಹರಟೆ ಹೊಡೆದಿದ್ದಾರೆ.
ಅಲ್ಲಿದ್ದ ಜನರನ್ನು ನಗುಮುಖದಿಂದ ಸ್ವಾಗತಿಸಿ, ಅವರೊಂದಿಗೆ ಬೆರೆತು, ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಸಂತೋಷಪಡಿಸಿದ್ದಾಳೆ. ಖ್ಯಾತ ನಟಿಯ ಸರಳತೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನೆಟ್ಟಿಗರು 'ಸರಳತೆಗೆ ಥ್ಯಾಂಕ್ಸ್' ಎಂದು ಕೆಲವರು ಹೇಳಿದರೆ, ಇನ್ನು ಕೆಲವರು 'ಇಂಥ ಕಡೆ ಸಿಗುವ ರುಚಿ ಫೈವ್ಸ್ಟಾರ್ ಹೋಟೆಲ್ಗಳಲ್ಲಿ ಸಿಗುವುದಿಲ್ಲ' ಎಂದು ಹೇಳುತ್ತಿದ್ದಾರೆ. ಒಟ್ಟಾರೆ ಈ ವೀಡಿಯೋ ವೈರಲ್ ಆಗಿದೆ.