More

  ಒನ್​ವೇಯಲ್ಲಿ ಹೋಗಬಾರದೆಂದ ಪೊಲೀಸ್​ ಅಧಿಕಾರಿ ಮೇಲೆ ಹಲ್ಲೆ ಮಾಡಿದ ಖ್ಯಾತ ನಟಿ; ವಿಡಿಯೋ ವೈರಲ್

  ಹೈದರಾಬಾದ್: ಇತ್ತೀಚಿನ ದಿನಗಳಲ್ಲಿ ನಟ, ನಟಿಯರು ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಿದ್ದು, ಹೆಚ್ಚು ಅಪಖ್ಯಾತಿಗೆ ಒಳಗಾಗುತ್ತಿದ್ದಾರೆ. ಇದೀಗ ಖ್ಯಾತ ನಟಿಯೊಬ್ಬರು ಪೊಲೀಸ್​ ಅಧಿಕಾರಿ ಮೇಲೆ ಹಲ್ಲೆ ಮಾಡಿದ್ದು ಸಾಕಷ್ಟು ಖಂಡನೆಗೆ ಗುರಿಯಾಗಿದೆ.

  ವೈರಲ್​ ಆಗಿರುವ ವಿಡಿಯೋದಲ್ಲಿ ಟಾಲಿವುಡ್​ನ ಖ್ಯಾತ ನಟಿ ಸೌಮ್ಯ ಜಾನು ಪೊಲೀಸ್​ ಹೋಮ್​ ಗಾರ್ಡ್​ ಮೇಲೆ ಹಲ್ಲೆ ನಡೆಸಿದ್ದು, ತೆಲಂಗಾಣದ ರಾಜಧಾನಿ ಹಯದರಾಬಾದಿನ ಬಂಜಾರ ಹಿಲ್ಸ್​ನಲ್ಲಿ ಈ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

  ಇದನ್ನೂ ಓದಿ: ರಾಜ್ಯಸಭಾ ಚುನಾವಣೆ; ಕಾಂಗ್ರೆಸ್​ಗೆ 3, ಬಿಜೆಪಿಗೆ 1 ಸ್ಥಾನದಲ್ಲಿ ಗೆಲುವು, ಜೆಡಿಎಸ್​ಗೆ ಮುಖಭಂಗ

  ವಯರಲ್​ ಆಗಿರುವ ವಿಡಿಯೋದಲ್ಲಿ ಜಾಗ್ವಾರ್​ ಕಾರಿನಲ್ಲಿ ಬರುವ ನಟಿಯನ್ನು ತಡೆದ ಅಧಿಕಾರಿ ಇದು ತಪ್ಪು ದಾರಿಯಾಗಿದ್ದು, ಬೇರೆ ಮಾರ್ಗದಲ್ಲಿ ಬರುವಂತೆ ಹೇಳುತ್ತಾರೆ. ಇದರಿಂದ ಕುಪಿತಗೊಂಡ ನಟಿ ಏಕಾಏಕಿ ಹೋಮ್​ಗಾರ್ಡ್​ಗೆ ಅವಾಚ್ಯ ಶಬ್ದಗಳಿಂದ ನಿಂದಿಸಲು ಶುರು ಮಾಡುತ್ತಾರೆ. ಈ ವೇಳೆ ಸ್ಥಳೀಯರು ಮಧ್ಯಪ್ರವೇಶಿಸಿದ್ದು, ನಟಿ ಅಧಿಕಾರಿಯ ಶರ್ಟ್​ ಹರಿದು ತನ್ನನ್ನು ಯಾವ ಕಾರಣಕ್ಕೆ ತಡೆದಿದ್ದು ಎಂದು ಆಕ್ರೋಶ ಹೊರಹಾಕಿದ್ದಾಳೆ. ಬಳಿಕ ಅಧಿಕಾರಿಯ ಫೋನ್​ ಕಸಿದುಕೊಂಡು ಸ್ಥಳದಿಂದ ಪರಾರಿಯಾಗಿದ್ದಾಳೆ.

  ಇತ್ತ ನಟಿ ಹಲ್ಲೆ ಮಾಡಿರುವ ಸಂಬಂಧ ಸಂತ್ರಸ್ತ ಅಧಿಕಾರಿ ಬಂಜಾರ ಹಿಲ್ಸ್​ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದ್ದು, ತಲೆಮಾರಿಸಿಕೊಂಡಿರುವ ನಟಿಗೆ ಅಧಿಕಾರಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನಟಿಯ ವಿರುದ್ಧ ನೆಟ್ಟಿಗರು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts