More

    VIDEO| ಬುರ್ಖಾ ತೊಟ್ಟು ಮೆಕ್ಕಾ ಮದೀನಾಗೆ ಹೊರಟ ಸಂಜನಾ ಗರ್ಲಾನಿ!

    ಬೆಂಗಳೂರು: ನಟಿ ಸಂಜನಾ ಗರ್ಲಾನಿ ಒಂದಲ್ಲ ಒಂದು ವಿಷಯಕ್ಕೆ ಸುದ್ದಿಯಲ್ಲಿರುವ ನಟಿ. ಬುರ್ಖಾ ಧರಿಸಿರುವ ವಿಡಿಯೋವನ್ನು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಂಡಿರುವ ನಟಿ ಸಂಜನಾ ಗರ್ಲಾನಿ, ಮೆಕ್ಕಾ ಮದೀನಾಗೆ ಹೊರಟಿರೋದಾಗಿ ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​​ ಆಗಿದೆ.

    ವಿಡಿಯೋದಲ್ಲಿ ಅವರು ಬುರ್ಕಾ ಹಾಕಿಕೊಂಡಿದ್ದರು. ಬುರ್ಕಾ ಹಾಕಿರುವುದಕ್ಕೂ ಅವರು ಕಾರಣ ನೀಡಿದ್ದಾರೆ. ಇದು ಅವರ ಮೊದಲ ಆಧ್ಯಾತ್ಮಿಕ ಜರ್ನಿ ಅಂತಾನೂ ಹೇಳಿಕೊಂಡಿದ್ದಾರೆ. ಬುರ್ಕಾ ಧರಿಸಿಯೇ ವಿಡಿಯೋ ಮಾಡಿರುವ ಅವರು, ಮೆಕ್ಕಾ ಮದೀನಾಗೆ ಹೊರಟಿರುವ ಕಾರಣದಿಂದಾಗಿಯೇ ತಾವು ಬುರ್ಕಾ ಧರಿಸಿರುವುದಾಗಿಯೂ ತಿಳಿಸಿದ್ದಾರೆ. ಕೆಲವರು ಸಂಜನಾ ವಿರುದ್ಧ ನೆಗೆಟಿವ್ ಹಾಗೂ ಪಾಸಿಟಿವ್​ ಕಾಮೆಂಟ್​ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಮೊದಲ ಬಾರಿಗೆ ಮಗಳ ಮುಖ ತೋರಿಸಿದ ಧ್ರುವ ಸರ್ಜಾ

    ವಿಡಿಯೋದಲ್ಲಿ ಏನಿದೆ?: ಎಲ್ಲರಿಗೂ ನಮಸ್ಕಾರ. ನನ್ನ ಪ್ರೀತಿಯ ವಂದನೆಗಳು. ಇವತ್ತು ಸಂಜನಾ ಅವರು ಬುರ್ಕಾ ಹಾಕ್ಕೊಂಡು ಏನು ಮಾಡುತ್ತಿದ್ದಾರೆ ಅಂತ ಅಂದ್ಕೊಂಡಿದ್ದೀರಾ? ನಾನು ನನ್ನ ಆಧ್ಯಾತ್ಮಿಕ ಪಯಣಕ್ಕೋಸ್ಕರ ಹಾಗೂ ಮದೀನಾಗೆ ನನ್ನ ಪರಿವಾರದ ಜೊತೆ ಹೋಗುತ್ತಿದ್ದೇನೆ. ನನ್ನ ಪಯಣದಲ್ಲಿ ನೀವು ಹಾಗೂ ನಿಮ್ಮ ಆಶೀರ್ವಾದವಿರಲಿ’ ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

    ಸಂಜನಾ ಬೆಂಗಳೂರಿನ ವೈದ್ಯ ಡಾ.ಅಜೀಜ್ ಪಾಷಾ ಎಂಬುವವರನ್ನು ಮದುವೆಯಾಗಿರುವುದು ಗೊತ್ತಿರುವ ವಿಚಾರವಾಗಿದೆ. ಸದ್ಯ ಸಂಜನಾ ಸಿನಿಮಾ ರಂಗದಿಂದ ದೂರವಿದ್ದು, ಪತಿ ಮತ್ತು ಮಗುವಿನ ಜೊತೆ ಸಮಯ ಕಳೆಯುತ್ತಿದ್ದಾರೆ.

    ಟ್ರಾಫಿಕ್‌ ಸಂಬಂಧಿತ ವಾಯುಮಾಲಿನ್ಯವು ಮೆದುಳಿನ ಕಾರ್ಯವನ್ನು ದುರ್ಬಲಗೊಳಿಸುತ್ತದೆ: ಅಧ್ಯಯನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts