ಬಾಲಿವುಡ್‌ಗೆ ಸಾಯಿ ಪಲ್ಲವಿ ; ಆಮಿರ್ ಖಾನ್ ಮಗ ಜುನೈದ್ ಖಾನ್ ಜತೆ ನಟನೆ

Sai Pallavi
Published on

ರಶ್ಮಿಕಾ ಮಂದಣ್ಣ, ನಯನತಾರಾ, ಶ್ರದ್ಧಾ ಶ್ರೀನಾಥ್ ಸೇರಿ ದಕ್ಷಿಣದ ಹಲವಾರು ನಟಿಯರು ಬಾಲಿವುಡ್‌ಗೆ ಹಾರುತ್ತಿದ್ದಾರೆ. ಇದೀಗ ತಮಿಳು, ತೆಲುಗಿನಲ್ಲೂ ತಮ್ಮದೇ ಛಾಪು ಮೂಡಿಸಿರುವ ‘ಪ್ರೇಮಂ’ ಖ್ಯಾತಿಯ ಮಲಯಾಳಂ ನಟಿ ಸಾಯಿ ಪಲ್ಲವಿ ಕೂಡ ಹಿಂದಿ ಚಿತ್ರರಂಗಕ್ಕೆ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ ಎನ್ನಲಾಗಿದೆ.

ಕಳೆದ ವರ್ಷ ತೆರೆಗೆ ಬಂದ ‘ವಿರಾಟ ಪರ್ವಂ’ ಮತ್ತು ‘ಗಾರ್ಗಿ’ ಚಿತ್ರಗಳ ಬಳಿಕ ಸಾಯಿ ಪಲ್ಲವಿ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. ಸದ್ಯ ಅವರು ತಮಿಳು ನಟ ಶಿವಕಾರ್ತಿಕೇಯನ್ ಅವರ ಹೊಸ ಚಿತ್ರದಲ್ಲಿ ಬಿಜಿಯಿದ್ದು, ಅದರ ನಡುವೆಯೇ ಬಾಲಿವುಡ್‌ಗೆ ಪದಾರ್ಪಣೆ ಮಾಡಲು ತಯಾರಿ ನಡೆಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಲವ್‌ಸ್ಟೋರಿಯಾಗಿದ್ದು ಸುನೀಲ್ ಪಾಂಡೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ.

ಯಶ್ ರಾಜ್ ಫಿಲಂಸ್ ಬ್ಯಾನರ್‌ನಲ್ಲಿ ಈಗಾಗಲೇ ಒಂದು ಚಿತ್ರದಲ್ಲಿ ನಟಿಸಿರುವ ಜುನೈದ್ ಖಾನ್, ಅದರ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಅದಕ್ಕೂ ಮುನ್ನವೇ ಎರಡನೇ ಚಿತ್ರದಲ್ಲಿ ಅವಕಾಶ ಸಿಕ್ಕಿರುವ ಸಂಭ್ರಮ ಅವರದು. ಆದರೆ, ಜುನೈದ್ ಮತ್ತು ಸಾಯಿ ಪಲ್ಲವಿ ಕಾಂಬಿನೇಷನ್ ಚಿತ್ರದ ಬಗ್ಗೆ ಇದುವರೆಗೂ ಅಧಿಕೃತ ಘೋಷಣೆಯಾಗಿಲ್ಲ.
-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net