More

    ಆಲ್ಬಂ ಹಾಡಿನಲ್ಲಿ ರಾಗಿಣಿ; ಕನ್ನಡದ ಬಳಿಕ ಬಹುಭಾಷೆಗೆ ಡಬ್..

    ಬೆಂಗಳೂರು: ‘ತುಪ್ಪ ಬೇಕಾ ತುಪ್ಪ..’ ಐಟಂ ಹಾಡಿನಲ್ಲಿ ಮೈಚಳಿ ಬಿಟ್ಟು ಕುಣಿದಿದ್ದ ನಟಿ ರಾಗಿಣಿ ದ್ವಿವೇದಿ, ಇದೀಗ ಮೊದಲ ಬಾರಿ ಆಲ್ಬಂ ಹಾಡಿನಲ್ಲಿಯೂ ಹೆಜ್ಜೆ ಹಾಕಿದ್ದಾರೆ. ಪಕ್ಕಾ ಗ್ಲಾಮರ್ ಅವತಾರದಲ್ಲಿಯೇ ಕಾಣಿಸಿಕೊಂಡು, ಹೊಸ ಪ್ರಯತ್ನ ಮತ್ತು ಪ್ರಯೋಗವನ್ನು ಮಾಡಿದ್ದಾರೆ. ಅಂದಹಾಗೆ, ‘ಭಜರಂಗಿ’ ಮೋಹನ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿರುವುದು ಒಂದೆಡೆಯಾದರೆ, ಮುಂಬೈ ಮೂಲದ ರುದ್ರಾಕ್ಷ್ ದ್ವಿವೇದಿ ಕಾಸ್ಟೂಮ್ ವಿನ್ಯಾಸ ಮಾಡಿದ್ದಾರೆ. ವಿಶೇಷ ಏನೆಂದರೆ ರಾಗಿಣಿ ಅವರಿಗೆ ಒಟ್ಟು ನಾಲ್ಕು ಬೇರೆ ಬೇರೆ ಅವತಾರಗಳು ಈ ಹಾಡಿನಲ್ಲಿವೆ. ‘ಇಲ್ಲಿಯವರೆಗೂ ಸಿನಿಮಾ ಮಾಡುತ್ತಲೇ ಬಂದಿದ್ದೇನೆ. ಮುಂದೆಯೂ ಅದೇ ಕೆಲಸ ಇರಲಿದೆ. ಆದರೆ, ಈ ನಡುವೆ ಹೊಸತನದಲ್ಲಿ ಏನಾದರೂ ಮಾಡಬೇಕೆಂದು ಯೋಚಿಸಿದಾಗ ಆಲ್ಬಂ ಹಾಡಿನ ಅವಕಾಶ ಸಿಕ್ಕಿತು. ಅಷ್ಟೇ ಚೆನ್ನಾಗಿ ಹಾಡು ಮೂಡಿಬಂದಿದೆ.

    ಸಿನಿಮಾಗಿಂತ ಹೊಸದನ್ನು ಆಲ್ಬಂ ಹಾಡಿನಲ್ಲಿ ಪ್ರಯತ್ನಿಸಬಹುದು. ದೊಡ್ಡಬಳ್ಳಾಪುರ ಬಳಿ ಎರಡು ದಿನಗಳಲ್ಲಿ ಈ ಹಾಡಿನ ಶೂಟಿಂಗ್ ಮಾಡಲಾಗಿದೆ. ಇನ್ನೇನು ಶೀಘ್ರದಲ್ಲಿ ಶೀರ್ಷಿಕೆ ಅನಾವರಣ ಮತ್ತು ಬಿಡುಗಡೆ ದಿನಾಂಕ ಘೋಷಣೆ ಮಾಡಲಿದ್ದೇವೆ. ಕನ್ನಡದಲ್ಲಿ ಮೊದಲು ಬಿಡುಗಡೆ ಆಗಿ ಬಳಿಕ ಕೆಲ ಭಾಷೆಗಳಿಗೆ ಡಬ್ ಆಗಲಿದೆ’ ಎನ್ನುವ ರಾಗಿಣಿ, ‘ವರ್ಷದ ಬಳಿಕ ಮತ್ತೆ ಶೂಟಿಂಗ್ ಸೆಟ್​ಗೆ ಆಗಮಿಸಿದ್ದು ಖುಷಿ ನೀಡಿದೆ’ ಎಂದಿದ್ದಾರೆ.ಅಂದಹಾಗೆ, ಈಗಾಗಲೇ ಸಿನಿಮಾ ನಿರ್ವಣದಲ್ಲಿ ನಿರತರಾಗಿರುವ ಟಿ.ಆರ್. ಚಂದ್ರಶೇಖರ್, ಮೊದಲ ಬಾರಿ ಆಲ್ಬಂ ಹಾಡಿಗೆ ಬಂಡವಾಳ ಹೂಡಿದ್ದಾರೆ. ಕ್ರಿಸ್ಟಲ್ ಪಾರ್ಕ್ ಮ್ಯೂಸಿಕ್ ಚಾನೆಲ್​ನಲ್ಲಿ ಈ ಹಾಡು ಬಿಡುಗಡೆ ಆಗಲಿದೆ. ವಿ ಮನೋಹರ್ ಸಂಗೀತ, ಪ್ರೀತಮ್ ಛಾಯಾಗ್ರಹಣ, ಚೈತ್ರಾ ಹಾಡಿಗೆ ಧ್ವನಿ ನೀಡಿದ್ದಾರೆ.

    ಮಂಸೋರೆ ಮನಸೂರೆಗೊಳಿಸಿದ ಅಖಿಲಾ; ಇಂದು ನಡೆಯಿತು ನಿಶ್ಚಿತಾರ್ಥ, ಮದ್ವೆ ದಿನ ಹಾರಲಿದೆ ತಿರಂಗ!

    ಮಕ್ಕಳನ್ನೇ ಹೆಚ್ಚಾಗಿ ಕಾಡುವ ಮಾರಕ ಮೆಸ್​-ಸಿ; ಪಾಲಕರೇ ಈ ವೈದ್ಯರ ಮಾತನ್ನು ಆಲಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ..

    ಇತ್ತೀಚೆಗೆ ಕೋವಿಡ್​ನಿಂದ ಸತ್ತವರಲ್ಲಿ ಶೇ.99.2 ಮಂದಿ ಲಸಿಕೆ ಪಡೆಯದವರೇ!; ಹೀಗಾಗಿದ್ದು ಎಲ್ಲಿ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts