

ಕೆಲಸದ ಒತ್ತಡ ಹೆಚ್ಚಾದರೆ ಏನು ಮಾಡುತ್ತೀರಾ?- ಒತ್ತಡ ನಿವಾರಣೆ ಮಾಡಿಕೊಳ್ಳುವುದಕ್ಕೆ ಒಬ್ಬೊಬ್ಬರು ಒಂದೊಂದು ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಪ್ರಿಯಾಂಕಾ ಚೋಪ್ರಾ ಕಂಡುಕೊಂಡ ಪರಿಹಾರವೇನು ಗೊತ್ತಾ? ಸ್ಕೂಬಾ ಡೈವಿಂಗ್. ಇತ್ತೀಚಿನ ದಿನಗಳಲ್ಲಿ ಸ್ಪೇನ್ನಲ್ಲಿ ‘ಸಿಟಾಡೆಲ್’ ಸರಣಿಯ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಪ್ರಿಯಾಂಕಾ, ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡಿದ್ದಾರೆ.
ಒತ್ತಡ ಕಡಿಮೆ ಮಾಡಿಕೊಳ್ಳುವ ನಿಟ್ಟಿನಲ್ಲಿ, ಅವರು ಇತ್ತೀಚೆಗೆ ತಮ್ಮ ತಂಡದವರ ಜತೆಗೆ ಸ್ಕೂಬಾ ಡೈವಿಂಗ್ಗೆ ಹೋಗಿದ್ದಾರೆ. ಸಮುದ್ರದೊಳಗೆ ಹಲವು ಸಮಯ ಕಳೆದಿದ್ದಾರೆ. ಆ ಫೋಟೋಗಳನ್ನು ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ಅದೊಂದು ಅದ್ಭುತ ಅನುಭವ ಎಂದು ಬಣ್ಣಿಸಿದ್ದಾರೆ.