ಮುಂಬೈ: ಇತ್ತೀಚೆಗೆ ಜಾಗತಿಕವಾಗಿ ಬಿಡುಗಡೆಗೊಂಡು ಬ್ಲಾಕ್ಬಸ್ಟರ್ ಆಗಿ ಹೊರಹೊಮ್ಮಿದ ಶಾರೂಖ್ ನಟನೆಯ ‘ಜವಾನ್’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ಬಹುಭಾಷಾ ನಟಿ ಪ್ರಿಯಾಮಣಿ, ಇದೀಗ ತಮ್ಮ ಸಹನಟರ ಬಗ್ಗೆ ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮದುವೆ ಆಗುವುದಾಗಿ ಅಪ್ರಾಪ್ತೆ ಮೇಲೆ ದೌರ್ಜನ್ಯ; ಯುವಕನಿಗೆ 3 ವರ್ಷ ಜೈಲು
ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ ನಟಿ ಪ್ರಿಯಾಮಣಿ, ಅಮೀರ್ ನಿರ್ದೇಶನದ 2007ರ ಚಲನಚಿತ್ರ ‘ಪರುತಿವೀರನ್’ನಲ್ಲಿ ನಟ ಕಾರ್ತಿಯೊಂದಿಗೆ ನಟಿಸಿದ್ದನ್ನು ನೆನೆದು ಒಂದಷ್ಟು ವಿಚಾರಗಳನ್ನು ಹಂಚಿಕೊಂಡರು. ಈ ವೇಳೆ ಕಾರ್ತಿ ಬಗ್ಗೆ ವಿವರಿಸಿದ ನಟಿ, ಇಂದಿಗೂ ಅವರು ನನಗೆ ಉತ್ತಮ ಸ್ನೇಹಿತ ಎಂದು ಹೇಳಿದರು.
ಇದನ್ನೂ ಓದಿ: ಕಟ್ಟಡ ಮಾಲೀಕನಿಗೆ ಹ್ತಾ ನೀಡುವಂತೆ ಬೆದರಿಕೆ; ಬಿಜೆಪಿ ಮುಖಂಡನ ಲಾಕ್ ಮಾಡಿ ಜೈಲಿಗೆ ಕಳುಹಿಸಿದ ಖಾಕಿ
ನಟ ನಾಗಾರ್ಜುನ ಬಗ್ಗೆ ಕೇಳಿ ಬಂದ ಪ್ರಶ್ನೆಗೆ ಉತ್ತರಿಸಿದ ನಟಿ, ಅವರು ಆಕರ್ಷಕ ಎಂದು ಬಣ್ಣಿಸಿದರು. ತದನಂತರದಲ್ಲಿ ಕಾಲಿವುಡ್ನ ಸೂಪರ್ಸ್ಟಾರ್, ತಲೈವಾ ರಜನಿಕಾಂತ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಪ್ರಿಯಾಮಣಿ, ತಮಿಳಿನಲ್ಲಿ ‘ತಲೈವಾ’ ಎಂದರೆ ದೇವರು, ಹಾಗಾಗಿ ಅವರು ದೇವರು ಎಂದು ಹೇಳಿದರು. ನಟಿಯ ಈ ಹೇಳಿಕೆಗೆ ರಜನಿ ಫ್ಯಾನ್ಸ್ ಫಿದಾ ಆಗಿದ್ದಾರೆ,(ಏಜೆನ್ಸೀಸ್).
ವಿಶ್ವವಿಖ್ಯಾತ ಮೈಸೂರು ದಸರಾ 2023; ಸರಳ ಆಚರಣೆಗೆ ರಾಜ್ಯ ಸರ್ಕಾರ ನಿರ್ಧಾರ: ಎಚ್.ಸಿ. ಮಹದೇವಪ್ಪ