More

    ಸತ್ತೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಅಂದುಕೊಂಡಿದ್ದನ್ನು ಸಾಧಿಸಿದ ಮಾದಕ ನಟಿ; ಪೂನಂ.. ನೀನಿನ್ನು ಬದುಕಿದ್ಯಾ?ಎಂದ್ರು ಪಡ್ಡೆಹುಡುಗರು

    ಮುಂಬೈ: ಬಾಲಿವುಡ್​​ ನಟಿ ಪೂನಂ ಪಾಂಡೆ ಗರ್ಭಕೋಶದ ಕ್ಯಾನ್ಸರ್​ನಿಂದಾಗಿ ಫೆಬ್ರವರಿ 1ರಂದು ಮೃತಪಟ್ಟಿರುವುದಾಗಿ ಆಕೆಯ ತಂಡ ಶುಕ್ರವಾರ (ಫೆ.02) ಬೆಳಗ್ಗೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿತ್ತು. ಆದರೆ ಇದೀಗ ನಟಿ ಬದುಕಿದ್ದೇನೆ ಎಂದು ಸೋಶಿಯಲ್​​ ಮೀಡಿಯಾ ಮೂಲಕವಾಗಿ ಸ್ವತಃ ಹೇಳಿಕೊಂಡಿದ್ದಾರೆ.

    ನಟಿ ಹೇಳಿದ್ದೇನು?: ಹಾಯ್​ ನಾನು ಪೂನಂ ಪಾಂಡೆ. ಮೊದಲಿಗೆ ನಾನು ಎಲ್ಲರಲ್ಲಿಯೂ ಕ್ಷಮೆ ಕೇಳುತ್ತೇನೆ.  ನನ್ನ ಉದ್ದೇಶವೆ ಬೇರೆ ಆಗಿತ್ತು. ಗರ್ಭಕಂಠದ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸಲು ನಾನು ನನ್ನ ಸಾವಿನ ಸುಳ್ಳು ಸುದ್ದಿ ಹಬ್ಬಿಸ ಬೇಕಾಯ್ತು. ಇದರಿಂದ ಎಲ್ಲರಿಗೂ ನೋವಾಗಿದೆ. ನಾನು ಬದುಕಿದ್ದೇನೆ. ನನ್ನ ಸಾವಿನ ವಿಚಾರ ತಿಳಿಯುತ್ತಿದ್ದಂತೆ ಎಲ್ಲರೂ ಗರ್ಭಕಂಠದ ಕ್ಯಾನ್ಸರ್‌ ಬಗ್ಗೆ ಮಾತನಾಡಿದ್ದಾರೆ. ಆದರೆ ಈ ಮೊದಲು ಯಾರು ಗರ್ಭಕಂಠದ ಕ್ಯಾನ್ಸರ್‌ ಬಗ್ಗೆ ಮಾತನಾಡುತ್ತಿರಲಿಲ್ಲ. ನನ್ನ ಸಾವಿನ ಸುದ್ದಿ ಮೂಲಕವಾಗಿ ನಾನು ಏನು ಹಬ್ಬಿಸಬೇಕು ಅಂದುಕೊಂಡಿದ್ದೇನೊ ಅದು ನೆರವೇರಿದೆ. ಆದರೆ ಈ ವಿಚಾರವಾಗಿ ನನಗೆ ಹೆಮ್ಮೆ ಇದೆ ಎಂದು ಪೂನಂ ಪಾಂಡೆ ಹೇಳಿರುವ ವಿಡಿಯೋ ವೈರಲ್​ ಆಗಿದೆ.

    ಇನ್​ಸ್ಟಗ್ರಾಮ್​ ಮೂಲಕ ನಟಿ ಸ್ಪಷ್ಟನೆ: ನಾನು ಇಂದು ನಿಮ್ಮೆಲ್ಲರೊಂದಿಗೆ ಮಹತ್ವದ ವಿಷಯವನ್ನು ಹಂಚಿಕೊಳ್ಳಲು ಬಯಸಿದ್ದು, ನಾನು ಜೀವಂತವಾಗಿದ್ದೇನೆ. ಗರ್ಭಕಂಠದ ಕ್ಯಾನ್ಸರ್​ನಿಂದ ನಾನು ಬಳಲುತ್ತಿಲ್ಲ. ಆದರೆ, ದುರಂತವೆಂದರೆ ಈ ರೋಗವನ್ನು ಹೇಗೆ ಎದುರಿಸಬೇಕೆಂಬುದರ ಬಗ್ಗೆ ಜ್ಞಾನದ ಕೊರತೆಯಿಂದ ಸಾವಿರಾರು ಮಹಿಳೆಯರ ಜೀವವನ್ನು ಈ ರೋಗ ಬಲಿ ಪಡೆದುಕೊಂಡಿದೆ.

    ಇತರ ಕೆಲವು ಕ್ಯಾನ್ಸರ್‌ಗಳಿಗಿಂತ ಭಿನ್ನವಾಗಿ, ಗರ್ಭಕಂಠದ ಕ್ಯಾನ್ಸರ್ ಸಂಪೂರ್ಣವಾಗಿ ತಡೆಗಟ್ಟಬಲ್ಲದು. HPV ಲಸಿಕೆ ಮತ್ತು ಆರಂಭಿಕ ಪತ್ತೆ ಪರೀಕ್ಷೆಗಳು ಪ್ರಮುಖವಾಗಿದ್ದು, ಈ ಕಾಯಿಲೆಯಿಂದ ಯಾರೂ ತಮ್ಮ ಪ್ರಾಣ ಕಳೆದುಕೊಳ್ಳದಂತೆ ನೋಡಿಕೊಳ್ಳಲು ನಾವು ಎಚ್ಚರದಿಂದಿರಬೇಕು. ವಿಮರ್ಶಾತ್ಮಕ ಅರಿವಿನೊಂದಿಗೆ ಒಬ್ಬರಿಗೊಬ್ಬರು ಜಾಗೃತಿ ಮೂಡಿಸೋಣ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಹಿಳೆಯರಿಗೆ ತಿಳಿಸೋಣ ಏನು ಮಾಡಬಹುದೆಂಬುದನ್ನು ಒಟ್ಟಾಗಿ, ರೋಗದ ವಿನಾಶಕಾರಿ ಪರಿಣಾಮವನ್ನು ಕೊನೆಗೊಳಿಸಲು ಶ್ರಮಿಸೋಣ ಎಂದು ಹೇಳಿದ್ದಾರೆ.

    ನಡೆದಿದ್ದೇನು?: ಗುರುವಾರ ರಾತ್ರಿ ಪೂನಂ ಪಾಂಡೆ ಸಾವಿಗೀಡಾಗಿದ್ದಾರೆ ಎಂದು ಅವರ ತಂಡ ಮಾಧ್ಯಮಗಳಿಗೆ ಖಚಿತಪಡಿಸಿತ್ತು. ಕೊನೆಯುಸಿರೆಳೆದಾಗ ಆಕೆ ಹುಟ್ಟೂರಾದ ಉತ್ತರ ಪ್ರದೇಶದ ಕಾನ್ಪುರದಲ್ಲಿದ್ದಳು. ಆಕೆಯ ಅಂತ್ಯಕ್ರಿಯೆಯ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ತಂಡ ಮಾಹಿತಿ ನೀಡಿದೆ.ಈ ಮುಂಜಾನೆಯು ನಮಗೆ ಕಠಿಣವಾಗಿದೆ. ನಮ್ಮ ಪ್ರೀತಿಯ ಪೂನಂ ಅವರನ್ನು ಗರ್ಭಕಂಠದ ಕ್ಯಾನ್ಸರ್‌ನಿಂದ ಕಳೆದುಕೊಂಡಿದ್ದೇವೆ ಎಂದು ನಿಮಗೆ ತಿಳಿಸಲು ತುಂಬಾ ದುಃಖವಾಗಿದೆ. ಅವಳೊಂದಿಗೆ ಸಂಪರ್ಕಕ್ಕೆ ಬಂದ ಪ್ರತಿಯೊಂದು ಜೀವಂತ ರೂಪವೂ ಶುದ್ಧ ಪ್ರೀತಿ ಮತ್ತು ದಯೆಯಿಂದ ಭೇಟಿಯಾಯಿತು ಎಂದು ಪೂನಂ ಅವರ ಅಧಿಕೃತ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು.

    ಬಹಳ ಹಿಂದೆಯೇ ಆಕೆಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಆದರೆ, ಅದು ಕೊನೆಯ ಹಂತದಲ್ಲಿತ್ತು. ಪೂನಂ ಅವರು ತಮ್ಮ ತವರೂರಿನಲ್ಲಿದ್ದರು. ಅಲ್ಲಿಯೇ ಕೊನೆಯುಸಿರೆಳೆದಿದ್ದು, ಅಂತ್ಯಕ್ರಿಯೆಯು ಹೆಚ್ಚಾಗಿ ಅಲ್ಲಿಯೇ ನಡೆಯಲಿದೆ ಎಂದು ಮ್ಯಾನೇಜರ್​ ಪಾರುಲ್ ಚಾವ್ಲಾ ತಿಳಿಸಿದ್ದರು.

    ಪೂನಂ ಅವರು 2013ರ ‘ನಶಾ’ ಚಿತ್ರದ ಮೂಲಕ ತಮ್ಮ ನಟನೆಗೆ ಪದಾರ್ಪಣೆ ಮಾಡಿದರು. ಆಕೆ ಕೊನೆಯದಾಗಿ ರಿಯಾಲಿಟಿ ಶೋ ‘ಲಾಕ್ ಅಪ್’ ನಲ್ಲಿ ಕಾಣಿಸಿಕೊಂಡರು. ಇನ್ನೂ ಪೂನಂ ಪಾಂಡೆ ಬಹುಮುಖಿ ವ್ಯಕ್ತಿತ್ವ, ಮನರಂಜನಾ ಲೋಕದಲ್ಲಿ ತನ್ನ ಬೋಲ್ಡ್​ ನಟನೆಗಾಗಿ ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಅರೆಬೆತ್ತಲೆ ಅವತಾರಕ್ಕೆ ಹೆಸರುವಾಸಿಯಾಗಿದ್ದರು.

    ಇನ್ನು ಪೂನಂ ಪಾಂಡೆಯ ಸಾವಿನ ಸುದ್ದಿಯನ್ನು ಅನೇಕರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಅದರಲ್ಲೂ ಅಭಿಮಾನಿಗಳು ಪೂನಂ  ಬದುಕಿದ್ದಾರೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಸಂತೋಷ ವ್ಯಕ್ತಪಡಿಸಿದ್ದಾರೆ.

    ಈ ಮಾದಕ ನಟಿಯ ದಾಂಪತ್ಯ ಇದ್ದಿದ್ದು ಎರಡೇ ವಾರ; ಹನಿಮೂನ್‌ನಿಂದ ವಾಪಸ್​ ಬರ್ತಿದ್ದಂತೆ ಮುರಿದು ಬಿತ್ತು ಸಂಬಂಧ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts