More

    ಈ ಮಾದಕ ನಟಿಯ ದಾಂಪತ್ಯ ಇದ್ದಿದ್ದು ಎರಡೇ ವಾರ; ಹನಿಮೂನ್‌ನಿಂದ ವಾಪಸ್​ ಬರ್ತಿದ್ದಂತೆ ಮುರಿದು ಬಿತ್ತು ಸಂಬಂಧ

    ಮುಂಬೈ: ಮದುವೆ ಇಬ್ಬರು ಮನಸ್ಸನ್ನು ಬೆಸೆಯುವ ಬಂದವಾಗಿದೆ. ಆದರೆ ಇಂದಿನ ಯುವ ಪೀಳಿಗೆ ವಿವಾಹ ಎನ್ನುವ ಸುಂದರವಾದ ಬಂಧನದ ಅರ್ಥವನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ದೂರವಾಗುತ್ತಾರೆ.  ಹೀಗೆ  ಬಾಲಿವುಡ್​ ನಟಿಯೊಬ್ಬರ ವಿವಾಹ ಸಂಬಂಧ ಕೂಡಾ 2 ವಾರಕ್ಕೆ ಮಾತ್ರ ಸೀಮಿತವಾಗಿತ್ತು, ನಂತ್ರ ಈ ಮದುವೆ ಮುರಿದು ಬಿದ್ದಿತ್ತು.

    ಈ ಮಾದಕ ನಟಿಯ ದಾಂಪತ್ಯ ಇದ್ದಿದ್ದು ಎರಡೇ ವಾರ; ಹನಿಮೂನ್‌ನಿಂದ ವಾಪಸ್​ ಬರ್ತಿದ್ದಂತೆ ಮುರಿದು ಬಿತ್ತು ಸಂಬಂಧ

    ಮಾಡೆಲ್​ ಹಾಗೂ ನಟಿ ಪೂನಂ ಪಾಂಡೆ ಗರ್ಭಕೋಶದ ಕ್ಯಾನ್ಸರ್​ನಿಂದಾಗಿ ಫೆಬ್ರವರಿ 1ರಂದು ಮೃತಪಟ್ಟಿರುವುದಾಗಿ ಆಕೆಯ ತಂಡ ಶುಕ್ರವಾರ (ಫೆ.02) ಬೆಳಗ್ಗೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಆದರೆ ಈಕೆ ಸಾವಿನ ಸುತ್ತ ಹಲವು ಅನುಮಾನಗಳು ಎಡೆಮಾಡಿಕೊಟ್ಟಿವೆ ಎನ್ನಲಾಗಿದೆ. ಆಗಾಗ ವಿವಾದಗಳಿಂದ ಸುದ್ದಿಯಾಗುತ್ತಿದ್ದ ಪೂನಂ ಸರ್ವಿಕಲ್ ಕ್ಯಾನ್ಸರ್ ನಿಂದ ಇಹಲೋಕ ತ್ಯಜಿಸಿದ್ದು ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ನಟಿ ಸಾವಿನ ಸುದ್ದಿ ವರದಿ ಆಗುತ್ತಿದ್ದಂತೆ ಈಕೆ ಸುತ್ತ ಸುಳಿದಾಡುತ್ತಿದ್ದ ಹಲವು ವಿಚಾರಗಳಿಗೆ ಅನುಮಾನಗಳಿಗೆ ಎಡಮಾಡಿಕೊಟ್ಟಿದೆ. ಪೂನಂ ಪಾಂಡೆ ಪತಿ ಸ್ಯಾಮ್ ಬಾಂಬೆ. ಈ ಮದುವೆ ಕೆಲವು ದಿನಗಳು ಮಾತ್ರ ಉಳಿದಿತ್ತು.

    ಈ ಮಾದಕ ನಟಿಯ ದಾಂಪತ್ಯ ಇದ್ದಿದ್ದು ಎರಡೇ ವಾರ; ಹನಿಮೂನ್‌ನಿಂದ ವಾಪಸ್​ ಬರ್ತಿದ್ದಂತೆ ಮುರಿದು ಬಿತ್ತು ಸಂಬಂಧ

    ಸ್ಯಾಮ್ ಅಹ್ಮದ್ ಬಾಂಬೆ ಹಿಂದಿ ಸಿನಿಮಾ ರಂಗದ ಸೆಲೆಬ್ರಿಟಿ ನಿರ್ಮಾಪಕ. ಯುನೈಟೆಡ್ ಅರಬ್ ಎಮಿರೇಟ್ಸ್‌ನ ದುಬೈನಲ್ಲಿ ಹುಟ್ಟಿ ಬೆಳೆದವರು.  ಪೂನಂ ಪಾಂಡೆಗೂ ಮುನ್ನ ಸ್ಯಾಮ್ ಬಾಂಬೆ ಮಾಡೆಲ್ ಎಲ್ಲೆ ಅಹ್ಮದ್ ಎಂಬ ಮಾಡೆಲ್ ಒಬ್ಬರನ್ನು ವಿವಾಹವಾಗಿದ್ದರು. ಎಲ್ಲೆಯೊಂದಿಗೆ, ಸ್ಯಾಮ್‌ಗೆ ಇಬ್ಬರು ಮಕ್ಕಳಿದ್ದಾರೆ – ಮಗ ಟ್ರಾಯ್ ಬಾಂಬೆ ಮತ್ತು ಮಗಳು ಟಿಯಾ ಬಾಂಬೆ. ಈ ದಾಂಪತ್ಯ ಬಂಧ ಮುರಿದುಕೊಂಡ ಸ್ಯಾಮ್ ಬಾಂಬೆ.

    ಈ ಮಾದಕ ನಟಿಯ ದಾಂಪತ್ಯ ಇದ್ದಿದ್ದು ಎರಡೇ ವಾರ; ಹನಿಮೂನ್‌ನಿಂದ ವಾಪಸ್​ ಬರ್ತಿದ್ದಂತೆ ಮುರಿದು ಬಿತ್ತು ಸಂಬಂಧ

    ಸ್ಯಾಮ್ ಬಾಂಬೆಯನ್ನು ಪೂನಂ ಪಾಂಡೆ 2020ರ ಸೆಪ್ಟೆಂಬರ್ 10 ರಂದು ವಿವಾಹವಾಗಿದ್ದರು. ಅಂದು ಸದ್ದಿಲ್ಲದೇ ನಡೆದ ವಿವಾಹದ ಫೋಟೋಗಳು ಸಾಮಾಜಿಕ ಮಾದ್ಯಮಗಳಲ್ಲಿ ವೈರಲ್ ಆಗಿತ್ತು.  ವಿವಾದಾತ್ಮಕವಾಗಿ ಬದುಕಿದ್ದ ಪೂನಂ ಪಾಂಡೆ ದಾಂಪತ್ಯ ಬದುಕು ಬಹಳ ಅಲ್ಪಾವಧಿಯದ್ದು,ಲಾಸ್ ಏಂಜಲೀಸ್‌ನಲ್ಲಿ ಹನಿಮೂನ್‌ ಮುಗಿಸಿ ಪತಿ ಸ್ಯಾಮ್ ಬಾಂಬೆ ಜೊತೆಗೆ ಗೋವಾ ತಲುಪಿದ್ದ ಪೂನಂ ಪಾಂಡೆ ಅಲ್ಲಿ ಚಲನಚಿತ್ರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಅಲ್ಲಿ ಇಬ್ಬರ ನಡುವೆ ಸಂಘರ್ಷವೇರ್ಪಟ್ಟು ಪೂನಂ ಪಾಂಡೆ ಪೊಲೀಸ್ ದೂರು ದಾಖಲಿಸಿದರು.

    ಈ ಮಾದಕ ನಟಿಯ ದಾಂಪತ್ಯ ಇದ್ದಿದ್ದು ಎರಡೇ ವಾರ; ಹನಿಮೂನ್‌ನಿಂದ ವಾಪಸ್​ ಬರ್ತಿದ್ದಂತೆ ಮುರಿದು ಬಿತ್ತು ಸಂಬಂಧ

    ಸ್ಯಾಮ್ ಬಾಂಬೆ ದೈಹಿಕ ಹಲ್ಲೆ, ಕೌಟುಂಬಿಕ ಹಿಂಸಾಚಾರ ನಡೆಸಿದ್ದಾಗಿ ಪೂನಂ ಪಾಂಡೆ ದೂರು ದಾಖಲಿಸಿದರು. ಗೋವಾ ಪೊಲೀಸರು ಸ್ಯಾಮ್ ಬಾಂಬೆಯನ್ನು ಬಂಧಿಸಿದ್ದರು. ಮಾರನೇ ದಿನವೇ ಸ್ಯಾಮ್‌ಗೆ ಜಾಮೀನು ಸಿಕ್ಕಿತು. ಎರಡೇ ವಾರದಲ್ಲಿ ಸ್ಯಾಮ್ ಬಾಂಬೆ- ಪೂನಂ ಪಾಂಡೆ ದಾಂಪತ್ಯ ಮುರಿದುಬಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts