ಅಮ್ಮನೂ ಕನ್ನಡ ಕಲಿತು ಬರೆಯುವಂತೆ ಮಾಡಿದ 'ಮುಂಗಾರು ಮಳೆ' ನಟಿ ಪೂಜಾ ಗಾಂಧಿ!

Pooja Gandhi
Published on

ಬೆಂಗಳೂರು: 'ಮುಂಗಾರು ಮಳೆ ಹುಡುಗಿ' ಎಂದೇ ಕರೆಯಲ್ಪಡುವ ಉತ್ತರ ಭಾರತೀಯ ನಟಿ ಪೂಜಾ ಗಾಂಧಿ, ಇದೀಗ ಬಹುತೇಕ ಕನ್ನಡಿಗರೇ ಆಗಿಹೋಗಿದ್ದಾರೆ. ಕನ್ನಡ ಮಾತನಾಡಲು ಕಲಿತಿರುವ ಅವರು ಕನ್ನಡದಲ್ಲೇ ಬರೆಯುವುದನ್ನು ಕೂಡ ಕಲಿತಿದ್ದಾರೆ.

ನಟಿ ಪೂಜಾ ಗಾಂಧಿ ತಾವಷ್ಟೇ ಕನ್ನಡದಲ್ಲಿ ಮಾತನಾಡುವುದು, ಕನ್ನಡ ಓದುವುದು ಮಾತ್ರವಲ್ಲದೆ ಬರೆಯವುದನ್ನು ಮಾಡುತ್ತಿಲ್ಲ. ಬದಲಿಗೆ ಅವರ ತಾಯಿಗೂ ಈಗ ಅವನ್ನೆಲ್ಲ ಕಲಿಸಿದ್ದಾರೆ. ಅರ್ಥಾತ್, ಪೂಜಾ ಗಾಂಧಿ ತಾಯಿ ಜ್ಯೋತಿ ಗಾಂಧಿ ಕೂಡ ಕನ್ನಡ ಕಲಿತು ಕನ್ನಡದಲ್ಲೇ ಬರೆಯವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ.

ತಾಯಿ ಕನ್ನಡದಲ್ಲಿ ಬರೆದಿರುವ ಬರಹವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೂಜಾ ಗಾಂಧಿ, ಕನ್ನಡದ ಅಕ್ಷರಭ್ಯಾಸವಿಲ್ಲದಿದ್ದರೂ, ನನ್ನ ಕನ್ನಡ ಕಲಿಕೆಯಿಂದ ಪ್ರೇರೇಪಿತರಾಗಿ ನನ್ನ ತಾಯಿ ಜ್ಯೋತಿಗಾಂಧಿ ಬರೆದಿರುವ ಚಂದದ ಕನ್ನಡ ಅಕ್ಷರಗಳು. ಅಮ್ಮ ಹಾಟ್ಸ್ ಆಫ್' ಎಂದು ಕನ್ನಡದಲ್ಲೇ ಬರೆದು ಸಂತಸ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net