ಹಾಗೆ ಮಾಡಿದ್ದರೆ ನಾನು 30 ಸಿನಿಮಾಗಳಲ್ಲಿ ನಟಿಸುತ್ತಿದ್ದೆ: ನಟಿ ಪಾಯಲ್ ಘೋಷ್ ಅಚ್ಚರಿಯ ಹೇಳಿಕೆ

actress payal
Published on

ಮುಂಬೈ: ನಟಿ ಪಾಯಲ್ ಘೋಷ್ ನೇರನುಡಿಗೆ ಹೆಸರುವಾಸಿಯಾಗಿದ್ದಾರೆ. ಅರ್ಧ ಬರೆದ ಆತ್ಮಹತ್ಯೆಯ ಪತ್ರ ಹಾಗೂ ಯಾವುದೋ ಗುಂಪು ದಾಳಿ ಮಾಡುತ್ತದೆ ಎಂದು ಆರೋಪ ಮಾಡುವ ಮೂಲಕವಾಗಿ ಈ ಹಿಂದೆ ಸಂಚಲನ ಮೂಡಿಸಿದ್ದರು. ಈಗ ತಾವು ಎಲ್ಲರ ಜತೆ ದೇಹ ಹಂಚಿಕೊಂಡಿದ್ದರೆ 30ಕ್ಕೂ ಅಧಿಕ ಫಿಲ್ಮ್​ಗಳಿಗೆ ನಟಿಸಬಹುದಿತ್ತು ಎಂದು ನಟಿ ಪಾಯಲ್​ ಘೋಷ್​ ಶಾಕಿಂಗ್​ ಹೇಳಿಕೆ ನೀಡಿದ್ದಾರೆ.

ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಒಂದನ್ನು ಹಂಚಿಕೊಂಡಿದ್ದು, ಅದು ಸಕತ್​ ಸದ್ದು ಮಾಡುತ್ತಿದೆ. ಇಗಾಗಲೇ ಹಲವಾರು ನಟ-ನಟಿಯರು ಕಾಸ್ಟಿಂಗ್​ ಕೌಚ್​ ಕುರಿತು ಮಾತನಾಡಿದ್ದಾರೆ. ಬಾಲಿವುಡ್​ನ ಭಯಾನಕ ಅನುಭವವನ್ನು ಹಂಚಿಕೊಂಡಿದ್ದಾರೆ.

ಕರೆದವರೊಡನೆ ಹಾಸಿಗೆ ಹಂಚಿಕೊಂಡಿದ್ದರೆ ನಾನು ಇಷ್ಟೊತ್ತಿಗಾಗಲೇ 30 ಸಿನಿಮಾಗಳಲ್ಲಿ ನಟಿಸಿರುತ್ತಿದ್ದೆ ಎಂದು ಶಾಕಿಂಗ್​ ಹೇಳಿಕೆ ಕೊಟ್ಟಿರುವ ಪಾಯಲ್​ ಹಲ್​ಚಲ್​ ಸೃಷ್ಟಿಸಿದ್ದಾರೆ. ಅಂದಹಾಗೆ ಪಾಯಲ್​ ಅವರು ಬಾಲಿವುಡ್‌ನಲ್ಲಿ ಸ್ಟಾರ್‌ಡಮ್‌ ಗಿಟ್ಟಿಸಿಕೊಳ್ಳದಿದ್ದರೂ ಸಿನಿಮಾ ಅವಕಾಶಗಳು ಕಡಿಮೆ ಏನೂ ಸಿಗಲಿಲ್ಲ. ಒಟ್ಟೂ 11 ಸಿನಿಮಾಗಳಲ್ಲಿ ಪಾಯಲ್​ ನಟಿಸಿದ್ದಾರೆ. ಈಗ ಕಾಸ್ಟಿಂಗ್​ ಕೌಚ್​ ಕುರಿತು ಮಾತನಾಡಿ ಮತ್ತೆ ಮುನ್ನೆಲೆಗೆ ಬಂದಿದ್ದಾರೆ.

ತಾವು 11 ಸಿನಿಮಾಗಳಲ್ಲಿ ಮಾತ್ರ ನಟಿಸಿರುವುದಕ್ಕೆ ಕಾರಣ ನೀಡಿರುವ ನಟಿ ಪಾಯಲ್​, ಒಂದು ವೇಳೆ ನಾನು ಎಲ್ಲವನ್ನೂ ಒಪ್ಪಿಕೊಂಡು, ಇತರರೊಡನೆ ಹಾಸಿಗೆ ಹಂಚಿಕೊಂಡಿದ್ದರೆ, ಇಷ್ಟೊತ್ತಿಗಾಗಲೇ ನಾನು 30ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುತ್ತಿದ್ದೆ ಎಂದಿದ್ದಾರೆ. ಈ ಮೂಲಕ ದೊಡ್ಡ ದೊಡ್ಡ ಸಿನಿಮಾ ಆಫರ್‌ಗಳು ಬೇಕೆಂದರೆ ದೇಹ ಹಂಚಿಕೊಳ್ಳುವುದು ಅನಿವಾರ್ಯ ಎಂಬ ನಟಿಯರ ಮಾತಿಗೆ ಇನ್ನಷ್ಟು ಪುಷ್ಟಿ ತುಂಬಿದ್ದಾರೆ. ಆದರೆ ಇನ್​ಸ್ಟಾಗ್ರಾಮ್​ನಲ್ಲಿ ಅವರು ಈ ಪೋಸ್ಟ್​ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಸಕತ್​ ಸುದ್ದಿಯಾಗುತ್ತಿದ್ದಂತೆಯೇ ಅದನ್ನು ಡಿಲೀಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net