ಅವರದ್ದು 20 ಸಿನಿಮಾ! ನೀನೇನು ಮಾಡಿದ್ದೀಯಾ ಇಲ್ಲಿವರೆಗೆ? ನೆಟ್ಟಿಗನಿಗೆ ಮುಖಕ್ಕೆ ಹೊಡೆದಂತೆ ಉತ್ತರಿಸಿದ ಹಾಟ್​ ಬ್ಯೂಟಿ ನಿಧಿ | Nidhhi

ವಿಜಯವಾಣಿ - 2025-04-14T185933.263
Published on

Nidhhi Agerwal: ಸೆಲೆಬ್ರಿಟಿಗಳು ಅಂದಮೇಲೆ ಒಂದಷ್ಟು ಜನ ಮೆಚ್ಚುಗೆ, ಪ್ರಶಂಸೆ, ಸಲಹೆ ನೀಡಿದರೆ, ಇನ್ನೂ ಒಂದಷ್ಟು ಮಂದಿ ಅವರ ವಿರುದ್ಧ ಟೀಕಾ ಪ್ರಹಾರ, ವ್ಯಂಗ್ಯ ಮಾತುಗಳನ್ನು ಹರಿಬಿಡುತ್ತಲೇ ಇರುತ್ತಾರೆ. ಈ ನೆಗೆಟಿವ್​ ಮಾತುಗಳು ಒಂದು ರೀತಿ ಹವ್ಯಾಸವಾಗಿಬಿಟ್ಟಿದೆ. ಅದರಲ್ಲೂ ಜಾಲತಾಣಗಳಲ್ಲಿ ಇಂತಹ ಹೇಳಿಕೆಗಳು, ಲೇವಡಿ ಮಾತುಗಳಿಗೇನು ಕಮ್ಮಿಯಿಲ್ಲ. ಪಬ್ಲಿಕ್​ ಫಿಗರ್​ ಎಂಬ ಕಾರಣಕ್ಕೆ ಅವರ ವಿರುದ್ಧ ನಾಲಿಗೆ ಹರಿಬಿಡುವ ನೆಟ್ಟಿಗರು, ಚಿತ್ರ ನಟ-ನಟಿಯರನ್ನು ತಮ್ಮಿಷ್ಟದಂತೆ ಕಟುವಾಗಿ ಟೀಕಿಸುತ್ತಾರೆ. ಈ ಟೀಕೆ, ವ್ಯಂಗ್ಯಗಳಿಗೆ ಸುಲಭವಾಗಿ ಗುರಿಯಾಗುವ ನಟಿ ತೆಲುಗು ಚಿತ್ರರಂಗದ ಹಾಟ್​ ಬ್ಯೂಟಿ ನಿಧಿ ಅಗರ್ವಾಲ್.​

ಶ್ರೀಲೀಲಾಗೆ ಹೋಲಿಕೆ

ನಿಧಿ ಅಗರ್ವಾಲ್ ಬಗ್ಗೆ ಟ್ವಿಟರ್​ನಲ್ಲಿ ಕಮೆಂಟ್​ ಮಾಡಿದ ಓರ್ವ ನೆಟ್ಟಿಗ, ಸ್ಯಾಂಡಲ್​ವುಡ್​ ನಟಿ ಶ್ರೀಲೀಲಾ ಅವರನ್ನು ನಿಧಿಯನ್ನು ಹೋಲಿಸಿ ವ್ಯಂಗ್ಯವಾಡಿದ್ದಾರೆ. 2021ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಶ್ರೀಲೀಲಾ, ಇಲ್ಲಿಯವರೆಗೆ 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ, 'ಐಸ್ಮಾರ್ಟ್ ಶಂಕರ್' ಬಿಟ್ಟರೆ ಇಲ್ಲಿಯವರೆಗೆ ನೀನು ಏನು ಮಾಡಿದ್ದೀಯಾ? ಒಟ್ಟು ಎಷ್ಟು ಸಿನಿಮಾ ಮಾಡಿರುವೆ? ಎಂದು ಲೇವಡಿ ಮಾಡಿದ್ದರು. ಸುಖಾಸುಮ್ಮನೆ ಯಾರಿಗೂ ಉತ್ತರಿಸಲು ಮುಂದಾಗದ ಈ ಚೆಲುವೆ ಇದೀಗ ಮತ್ತೊರ್ವ ನಟಿಗೆ ತನ್ನನ್ನು ಹೋಲಿಸಿ ಮಾತನಾಡಿದ್ದಕ್ಕೆ ಕೆರಳಿದ್ದಾರೆ.

ಖಡಕ್​ ಉತ್ತರ

ನೆಟ್ಟಿಗನ ಟ್ಬೀಟ್​ಗೆ ಪ್ರತಿಕ್ರಿಯಿಸಿದ ನಿಧಿ ಅಗರ್ವಾಲ್, 'ಐಸ್ಮಾರ್ಟ್ ಶಂಕರ್' ಬಳಿಕ ನಾನು ಹೀರೋ ಕಥೆ ಆಧರಿತ ಚಿತ್ರವನ್ನು ಮಾಡಿದ್ದೇನೆ. ನಾನು ತಮಿಳಿನಲ್ಲಿ ಒಟ್ಟು ಮೂರು ಸಿನಿಮಾಗಳನ್ನು ಮಾಡಿದ್ದೇನೆ. 'ಹರಿ ಹರ ವೀರ ಮಲ್ಲು' ಚಿತ್ರ ಸೇರಿದಂತೆ ಇನ್ನಷ್ಟು ಒಳ್ಳೆಯ ಕಥಾಹಂದರವುಳ್ಳ ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದೇನೆ. ನನಗೆ ಸೂಕ್ತ ಹಾಗೂ ಒಳ್ಳೆಯ ಕಥೆ ಅನಿಸಿದರೆ ಖಂಡಿತ ಆ ಸ್ಕ್ರಿಪ್ಟ್‌ಗೆ ಸಹಿ ಮಾಡ್ತೀನಿ. ಅದಕ್ಕೆಂದು ಒಂದಷ್ಟು ಕಾಲಾವಕಾಶ ಕೂಡ ತೆಗೆದುಕೊಳ್ಳುತ್ತೀನಿ. ಇಲ್ಲಿ ನನ್ನ ಮೂಲ ಉದ್ದೇಶ ಒಂದೊಳ್ಳೆ ಸಿನಿಮಾಗಳನ್ನು ಮಾಡುವುದು. ಸಾಲು ಸಾಲು ಸಿನಿಮಾಗಳನ್ನು ಮಾಡುವ ಆತುರದಲ್ಲಿ ನಾನ್ನಿಲ್ಲ. ನಾನು ಇದೇ ಇಂಡಸ್ಟ್ರಿಯಲ್ಲಿ ಉಳಿಯಲು ಬಯಸುವೆ. ಹೀಗಿರುವಾಗ ನನ್ನ ಬಗ್ಗೆ ಚಿಂತಿಸಬೇಡಿ ಸಹೋದರ" ಎಂದು ಹೇಳಿದರು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net