

ಮುಂಬೈ: ಮೇಲಿನ ಫೋಟೊ ನೋಡಿದರೆ ಮೇಲ್ನೋಟಕ್ಕೆ ಅದೊಂದು ಪ್ರತಿಮೆಯಂತೆ ಕಾಣುತ್ತದೆಯಲ್ಲವೇ? ಆದರೆ ಅದು ಪ್ರತಿಮೆಯಲ್ಲ.. ಅಲ್ಲಿರುವುದು ಒಬ್ಬ ನಟಿ. ಈ ರೀತಿ ಮೈ ಪೂರ್ತಿ ಮಣ್ಣು ಮೆತ್ತಿಕೊಂಡು ಕುಳಿತಿರುವ ನಟಿ ಯಾರು, ಏಕಾಗಿ ಹೀಗೆ ಕೂತಿದ್ದಾರೆ ಎನ್ನುವುದನ್ನು ತಿಳಿಯಲು ಮುಂದೆ ಓದಿ..
ಹೀಗೆ ಕುಳಿತಿರುವ ನಟಿ ಮತ್ತಿನ್ಯಾರೂ ಅಲ್ಲ ಊರ್ವಶಿ ರೌತೆಲಾ. ಆಕೆಗೆ ಮಡ್ ಬಾತ್ ಎಂದರೆ ತುಂಬಾ ಇಷ್ಟವಂತೆ. ಆಕೆಯ ಬ್ಯೂಟಿಯ ಸೀಕ್ರೇಟ್ ಕೂಡ ಅದೇ ಅಂತೆ. ಕರೊನಾದ ಈ ಕಾಲದಲ್ಲಿ ಈ ರೀತಿ ತಲೆಯಿಂದ ಪಾದದವರೆಗೂ ಮಡ್ ಹಚ್ಚಿಕೊಂಡು ಬಿಸಿಲಲ್ಲಿ ಕುಳಿತಿರುವ ಫೋಟೋವನ್ನು ನಟಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಊರ್ವಶಿ ಅವರ ಈ ಫೋಟೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ರೀತಿಯ ಬ್ಯೂಟಿ ಸೀಕ್ರೇಟ್ ಬಿಚ್ಚಿಟ್ಟಕ್ಕೆ ಧನ್ಯವಾದ ತಿಳಿಸಲಾರಂಭಿಸಿದ್ದಾರೆ. ಅನೇಕರು ತಾವೂ ಈ ಥೆರಪಿ ಪಾಲಿಸಿ, ಸೌಂದರ್ಯ ಹೆಚ್ಚಿಸಿಕೊಳ್ಳುವುದಾಗಿ ಹೇಳಲಾರಂಭಿಸಿದ್ದಾರೆ. (ಏಜೆನ್ಸೀಸ್)