More

    ಈ ಚಿತ್ರಕ್ಕಾಗಿ ಹೆಚ್ಚಿನ ಸಂಭಾವನೆ ಕೇಳಿದ ‘ಸೀತಾ ರಾಮಂ’ ಖ್ಯಾತಿಯ ನಟಿ ಮೃಣಾಲ್​ ಠಾಕೂರ್?

    ಆಂಧ್ರಪ್ರದೇಶ: ತೆಲುಗು ಚಿತ್ರರಂಗದಲ್ಲಿ ‘ಸೀತಾ ರಾಮಂ’ ಚಿತ್ರದ ಮುಖೇನ ಸಿನಿಪ್ರೇಕ್ಷಕರ ಮನಗೆದ್ದ ನಟಿ ಮೃಣಾಲ್ ಠಾಕೂರ್, ಇದೀಗ ತಮ್ಮ ಹೊಸ ಚಿತ್ರಕ್ಕಾಗಿ ಹೆಚ್ಚಿನ ಸಂಭಾವನೆ ಕೇಳಿದ್ದಾರೆ ಎಂಬ ಸುದ್ದಿ ಸದ್ಯ ಟಾಲಿವುಡ್​ ಅಂಗಳದಲ್ಲಿ ಹರಿದಾಡುತ್ತಿದೆ.

    ಇದನ್ನೂ ಓದಿ: ಸಹಕಾರ ಸಂಘಗಳಲ್ಲಿ ದೀರ್ಘಕಾಲದಿಂದ ವಸೂಲಾತಿಯಾಗದ ಸಾಲ ರೈಟ್‌ಆಫ್..!

    ‘ಸೀತಾ ರಾಮಂ’ ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ಮೃಣಾಲ್ ಠಾಕೂರ್, ಅಲ್ಪ ಅವಧಿಯಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಪಡೆದುಕೊಂಡು ಎಲ್ಲರ ಗಮನಸೆಳೆದಿದ್ದಾರೆ. ಮೊದಲ ಚಿತ್ರದಲ್ಲೇ ಉತ್ತಮ ಯಶಸ್ಸನ್ನು ಪಡೆದ ಮೃಣಾಲ್​​ಗೆ ​ಹಲವಾರು ಚಿತ್ರಗಳಲ್ಲಿ ಅಭಿನಯಿಸುವ ಅವಕಾಶಗಳು ಒದಗಿ ಬಂದರೂ, ಎಲ್ಲವನ್ನು ಕೈಗೆತ್ತಿಕೊಳ್ಳದೆ ಒಳ್ಳೆಯ ಸ್ಕ್ರಿಪ್ಟ್​​ಗಳತ್ತ ಹೆಚ್ಚು ಗಮನಹರಿಸುತ್ತಿದ್ದಾರೆ.

    ಪ್ರಸ್ತುತ ತಮ್ಮ ಮುಂದಿನ ತೆಲುಗು ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಮೃಣಾಲ್, ನ್ಯಾಚುರಲ್ ಸ್ಟಾರ್​ ನಾನಿ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಮಧ್ಯೆ, ಪರಶುರಾಮ್ ಪೆಟ್ಲಾ ನಿರ್ದೇಶನದ ವಿಜಯ್ ದೇವರಕೊಂಡ ನಟನೆಯ ಚಿತ್ರಕ್ಕೂ ಇವರೇ ಹೀರೋಯಿನ್​ ಆಗಿ ನಟಿಸುತ್ತಿದ್ದಾರೆ. ಸದ್ಯ ಹೊಸ ಚಿತ್ರವೊಂದರಲ್ಲಿ ಅಭಿನಯಿಸಲು ಮೃಣಾಲ್ ಅವರು ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎಂಬ ಸುದ್ದಿ ಸದ್ಯ ಟಾಲಿವುಡ್​​ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ,(ಏಜೆನ್ಸೀಸ್).

    VIDEO | ಟೊಮ್ಯಾಟೊ ಕಾಯಲು ಬೌನ್ಸರ್ ನೇಮಿಸಿದ ತರಕಾರಿ ವ್ಯಾಪಾರಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts