More

    ಸಹಕಾರ ಸಂಘಗಳಲ್ಲಿ ದೀರ್ಘಕಾಲದಿಂದ ವಸೂಲಾತಿಯಾಗದ ಸಾಲ ರೈಟ್‌ಆಫ್..!

    ಮೈಸೂರು: ಸಹಕಾರ ಸಂಘಗಳು ಹಾಗೂ ಸಹಕಾರ ಬ್ಯಾಂಕ್‌ಗಳಲ್ಲಿ ದೀರ್ಘ ಕಾಲದಿಂದ (25 ವರ್ಷ ಮೇಲ್ಪಟ್ಟು) ವಸೂಲಾತಿಯಾಗದ 10 ಸಾವಿರ ರೂ. ಒಳಗಿನ ಸಾಲವನ್ನು ರೈಟ್‌ಆಫ್ (ಬರ್ಖಾಸ್ತು) ಮಾಡಲು ಅಗತ್ಯ ಕ್ರಮ ವಹಿಸಲು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ನಗರದ ಪ್ರಾದೇಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮೈಸೂರು ಪ್ರಾಂತದ ಇಲಾಖಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಮೈಸೂರು ಜಿಲ್ಲೆಯೊಂದರಲ್ಲಿಯೇ ಈ ರೀತಿ 58 ಪ್ರಕರಣಗಳು ಇವೆ. ಸಾಲದ ಮಿತಿ 10 ಸಾವಿರ ರೂ. ಒಳಗೆ ಇದ್ದರೆ, 25 ವರ್ಷಗಳಿಂದ ಸಾಲ ವಸೂಲಾತಿ ಸಾಧ್ಯವಾಗದೆ ಇದ್ದರೆ ಹಾಗೂ ಸಾಲ ಪಡೆದ ವ್ಯಕ್ತಿಯ ಹೆಸರಿನಲ್ಲಿ ಚಿರಾಸ್ತಿ ಇಲ್ಲದೆ ಇದ್ದರೆ ಅಂತಹ ಪ್ರಕರಣಗಳಲ್ಲಿ ಸಾಲವನ್ನು ರೈಟ್‌ಆಫ್ ಮಾಡಲು ಕ್ರಮ ವಹಿಸಬೇಕು. ಇದಕ್ಕೆ ಕಾನೂನಿನಲ್ಲಿಯೇ ಅವಕಾಶ ಇದೆ ಎಂದರು.

    ಆದಿವಾಸಿಗಳ ಆರ್ಥಿಕ ಪರಿಸ್ಥಿತಿ ಉತ್ತಮ ಪಡಿಸುವ ಸಲುವಾಗಿ ಸರ್ಕಾರ ಲ್ಯಾಂಪ್ಸ್ ಸಹಕಾರ ಸಂಘಗಳನ್ನು ಪ್ರಾರಂಭಿಸಿತು. ಆದರೆ, ಬಹುತೇಕ ಕಡೆಗಳಲ್ಲಿ ಈ ಸಂಘಗಳು ಉತ್ತಮವಾಗಿ ನಡೆಯುತ್ತಿಲ್ಲ. ಈ ಸಂಘಗಳ ಉನ್ನತಿಗೆ ಸರ್ಕಾರದಿಂದ ಆಗಬೇಕಾಗಿರುವ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

    ಲ್ಯಾಂಪ್ಸ್ ಸಹಕಾರ ಸಂಘದ ನಿಜವಾದ ಉದ್ದೇಶ ಈಡೇರಿಲ್ಲ. ಸಂಘದ ಸದಸ್ಯರು ಅರಣ್ಯದಲ್ಲಿ ಕಿರುಉತ್ಪನ್ನ ಸಂಗ್ರಹಿಸಿ ಮಾರಾಟ ಮಾಡುವಲ್ಲಿ ಆಗುತ್ತಿರುವ ಸಮಸ್ಯೆಗಳು, ಮಾರುಕಟ್ಟೆ ಸಮಸ್ಯೆ ಹಾಗೂ ಆರ್ಥಿಕ ಸಮಸ್ಯೆಯ ಕುರಿತು ಸರ್ಕಾರ ಗಮನ ಹರಿಸಲಿದೆ. ಹಣಕಾಸಿನ ಕೊರತೆ ಇದ್ದರೆ ಸರ್ಕಾರದಿಂದಲೇ ಸಂಘಗಳಲ್ಲಿ ಷೇರು ಬಂಡವಾಳ ಹೂಡಿಕೆ ಮಾಡಲಾಗುವುದು. ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಷೇರು ಹಣವನ್ನು ನೀಡಲು ಕ್ರಮ ವಹಿಸಲಾಗುವುದು. ಅದೇ ರೀತಿ ಮೀನುಗಾರಿಕೆ ಸಹಕಾರ ಸಂಘಗಳು, ಜನತಾ ಬಜಾರ್, ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಗಳ ಉನ್ನತಿಗೆ ವಹಿಸಬೇಕಾದ ಕ್ರಮಗಳ ಕುರಿತು ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts