More

  ತವರು ಕ್ಷೇತ್ರದಿಂದ ಕಂಗನಾ ಕಣಕ್ಕೆ: ಬಿಜೆಪಿ ಟಿಕೆಟ್ ಗಿಟ್ಟಿಸಿದ ಬೆನ್ನಲ್ಲೇ ಬಾಲಿವುಡ್​ ಫೈರ್ ಬ್ರಾಂಡ್ ಹೇಳಿದ್ದಿಷ್ಟು…

  ನವದೆಹಲಿ: ಲೋಕಸಭಾ ಚುನಾವಣೆಗಾಗಿ ಬಿಜೆಪಿ ಇಂದು (ಮಾರ್ಚ್​ 24) ಬಿಡುಗಡೆ ಮಾಡಿರುವ 5ನೇ ಪಟ್ಟಿಯಲ್ಲಿ ನಟಿ ಕಂಗನಾ ರಣಾವತ್​ಗೆ ಸ್ಥಾನ ನೀಡಲಾಗಿದೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಚುನಾವಣಾ ಅಖಾಡಕ್ಕೆ ಕಣಕ್ಕಿಳಿಯಲಿರುವ ಬಾಲಿವುಡ್​ ಬ್ಯೂಟಿ ಕಂಗನಾ, ಟಿಕೆಟ್​ ಸಿಕ್ಕ ಖುಷಿಯಲ್ಲಿ ಬಿಜೆಪಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

  ಬಿಜೆಪಿ ಪಟ್ಟಿ ಬಿಡುಗಡೆ ಮಾಡಿದ ಬೆನ್ನಲ್ಲೇ ಕಂಗನಾ ತಮ್ಮ ಎಕ್ಸ್​ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಪ್ರೀತಿಯ ಭಾರತ ಮತ್ತು ಭಾರತೀಯ ಜನತೆಯ ಪಕ್ಷ ಬಿಜೆಪಿ, ಯಾವಾಗಲು ನನ್ನ ಬೇಷರತ್​ ಬೆಂಬಲವನ್ನು ಹೊಂದಿದೆ. ಇಂದು ಬಿಜೆಪಿ ರಾಷ್ಟ್ರೀಯ ನಾಯಕತ್ವವು ನನ್ನ ಜನ್ಮ ಸ್ಥಳ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ನನಗೆ ಟಿಕೆಟ್​ ಘೋಷಣೆ ಮಾಡಿದೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಳ್ಳಲು ನನಗೆ ಗೌರವ ಮತ್ತು ತುಂಬಾ ಹರ್ಷವಿದೆ. ನಾನೊಬ್ಬ ಯೋಗ್ಯ ಕಾರ್ಯಕರ್ತೆ ಮತ್ತು ವಿಶ್ವಾಸಾರ್ಹ ಸಾರ್ವಜನಿಕ ಸೇವಕಿಯಾಗಲು ಎದುರು ನೋಡುತ್ತಿದ್ದೇನೆ. ಧನ್ಯವಾದಗಳು ಎಂದು ಕಂಗನಾ ಬರೆದುಕೊಂಡಿದ್ದಾರೆ.

  ಅಂದಹಾಗೆ ನಿರೀಕ್ಷೆಯಂತೆ ಹಿಮಾಚಲ ಪ್ರದೇಶದ ಮಂಡಿ ಟಿಕೆಟ್ ಬಾಲಿವುಡ್​ ನಟಿ ಕಂಗನಾ ರಾಣಾವತ್​ಗೆ ನೀಡಲಾಗಿದೆ. ಈ ಹಿಂದೆ ಕಂಗನಾ ಅವರು ಶಿವಸೇನೆ ವಿರುದ್ಧ ಹೋರಾಟಕ್ಕೆ ಇಳಿದಾಗಲೇ ಕಂಗನಾ ಅವರಿಗೆ ಲೋಕಸಭಾ ಟಿಕೆಟ್​ ಖಚಿತವಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಇದೀಗ ನಿರೀಕ್ಷೆಯಂತೆ ಕಂಗನಾಗೆ ಟಿಕೆಟ್​ ನೀಡಲಾಗಿದೆ.

  ಕರ್ನಾಟಕದ ಉಳಿದ ನಾಲ್ಕು ಕ್ಷೇತ್ರಗಳಿಗೆ 5ನೇ ಪಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬೆಳಗಾವಿ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ್​ ಶೆಟ್ಟರ್​, ಚಿಕ್ಕಬಳ್ಳಾಪುರದಿಂದ ಮಾಜಿ ಸಚಿವ ಕೆ. ಸುಧಾಕರ್​, ರಾಯಚೂರು (ಎಸ್​ಸಿ) ಮೀಸಲು ಕ್ಷೇತ್ರದಿಂದ ಶ್ರೀ ರಾಜಾ ಅಮರೇಶ್ವರ ನಾಯಕ್​ ಹಾಗೂ ಉತ್ತರ ಕನ್ನಡದಿಂದ ವಿಶ್ವೆಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್​ ನೀಡಲಾಗಿದೆ. ಸಂವಿಧಾನ ಬದಲಾವಣೆ ಹೇಳಿಕೆಯಿಂದ ಕಳೆದ ಕೆಲವು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದ ಹಾಲಿ ಸಂಸದ ಅನಂತ್​ಕುಮಾರ್​ ಹೆಗಡೆ ಅವರಿಗೆ ಉತ್ತರ ಕನ್ನಡದ ಟಿಕೆಟ್​ ಮಿಸ್​ ಆಗಿದೆ.

  ಉಜಿಯಾರ್ಪುರದಿಂದ ನಿತ್ಯಾನಂದ ರೈ, ಬೇಗುಸರಾಯ್ನಿಂದ ಗಿರಿರಾಜ್ ಸಿಂಗ್, ಪಾಟ್ನಾ ಸಾಹಿಬ್ನಿಂದ ರವಿಶಂಕರ್ ಪ್ರಸಾದ್, ಕುರುಕ್ಷೇತ್ರದಿಂದ ನವೀನ್ ಜಿಂದಾಲ್, ದುಮ್ಕಾದಿಂದ ಸೀತಾ ಸೊರೆನ್, ಸಂಬಲ್ಪುರದಿಂದ ಧರ್ಮೇಂದ್ರ ಪ್ರಧಾನ್, ಬಾಲಸೋರ್ನಿಂದ ಪ್ರತಾಪ್ ಸಾರಂಗಿ, ಪುರಿಯಿಂದ ಸಂಬಿತ್ ಪಾತ್ರಾ, ಭುವನೇಶ್ವರದಿಂದ ಅರುಣ್ ಸಾರಂಗಿ, ಭುವನೇಶ್ವರದಿಂದ ಅರುಣ್ ಸಾರಂಗಿ ಕಣದಲ್ಲಿದ್ದಾರೆ.

  ಸುರೇಂದ್ರನಗರದಿಂದ ಚಂದುಭಾಯ್ ಶಿಯೋಹೋರಾ, ಅಮ್ರೇಲಿಯಿಂದ ಭರತ್ ಭಾಯ್ ಸುತಾರಿಯಾ, ಜುನಾಗಢದಿಂದ ರಾಜೇಶ್ ಚುಡಾಸಮಾ, ಮೆಹ್ಸಾನಾದಿಂದ ಹರಿ ಪಟೇಲ್, ವಡೋದರಾದಿಂದ ಡಾ.ಹೇಮಂಗ್ ಜಿಶಿ, ಸಬರ್ಕಾಂತದಿಂದ ಶಭನಾ ಬೆನ್ ಬರಿಯಾ ಅವರ ಹೆಸರನ್ನು ಪಕ್ಷ ಘೋಷಿಸಿದೆ. (ಏಜೆನ್ಸೀಸ್​)

  ಬಿಜೆಪಿಯ 5ನೇ ಪಟ್ಟಿ ಬಿಡುಗಡೆ: ಬೆಳಗಾವಿಯಿಂದ​ ಶೆಟ್ಟರ್​, ಚಿಕ್ಕಬಳ್ಳಾಪುರದಿಂದ ಸುಧಾಕರ್​ ಕಣಕ್ಕೆ

  ಬೇಸಿಗೆ ಅಂತ ಅತಿ ಹೆಚ್ಚು ನೀರು ಕುಡಿಯುತ್ತೀರಾ? ಆರೋಗ್ಯಕ್ಕೆ ತುಂಬಾ ಡೇಂಜರ್​, ಕುಡಿಯುವ ರೀತಿ ಹೀಗಿರಲಿ…

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts