ನವದೆಹಲಿ: ಮತ್ತೊಮ್ಮೆ ಅಧಿಕಾರಕ್ಕೆ ಏರುವ ಭರವಸೆಯೊಂದಿಗೆ ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ಮಾಡಿಕೊಳ್ಳುತ್ತಿರುವ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಇಂದು (ಮಾರ್ಚ್ 24) ತನ್ನ 5ನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಕರ್ನಾಟಕದ ಉಳಿದ ನಾಲ್ಕು ಕ್ಷೇತ್ರಗಳಿಗೆ 5ನೇ ಪಟ್ಟಿಯಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಬೆಳಗಾವಿ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಚಿಕ್ಕಬಳ್ಳಾಪುರದಿಂದ ಮಾಜಿ ಸಚಿವ ಕೆ. ಸುಧಾಕರ್, ರಾಯಚೂರು (ಎಸ್ಸಿ) ಮೀಸಲು ಕ್ಷೇತ್ರದಿಂದ ಶ್ರೀ ರಾಜಾ ಅಮರೇಶ್ವರ ನಾಯಕ್ ಹಾಗೂ ಉತ್ತರ ಕನ್ನಡದಿಂದ ವಿಶ್ವೆಶ್ವರ ಹೆಗಡೆ ಕಾಗೇರಿ ಅವರಿಗೆ ಟಿಕೆಟ್ ನೀಡಲಾಗಿದೆ. ಸಂವಿಧಾನ ಬದಲಾವಣೆ ಹೇಳಿಕೆಯಿಂದ ಕಳೆದ ಕೆಲವು ದಿನಗಳಿಂದ ಭಾರಿ ಸುದ್ದಿಯಲ್ಲಿದ್ದ ಹಾಲಿ ಸಂಸದ ಅನಂತ್ಕುಮಾರ್ ಹೆಗಡೆ ಅವರಿಗೆ ಉತ್ತರ ಕನ್ನಡದ ಟಿಕೆಟ್ ಮಿಸ್ ಆಗಿದೆ.
–
BJP releases 5th list of candidates for the upcoming Lok Sabha elections.
Nityanand Rai to contest from Ujiarpur.
Giriraj Singh from Begusarai.
Ravi Shankar Prasad from Patna Sahib.
Kangana Ranaut from Mandi.
Naveen Jindal from Kurukshetra.
Sita Soren from Dumka.
Jagadish… pic.twitter.com/xQOR2BDpA0— ANI (@ANI) March 24, 2024
ನಿರೀಕ್ಷೆಯಂತೆ ಹಿಮಾಚಲ ಪ್ರದೇಶದ ಮಂಡಿ ಟಿಕೆಟ್ ಬಾಲಿವುಡ್ ನಟಿ ಕಂಗನಾ ರಾಣಾವತ್ಗೆ ನೀಡಲಾಗಿದೆ. ಈ ಹಿಂದೆ ಕಂಗನಾ ಅವರು ಶಿವಸೇನೆ ವಿರುದ್ಧ ಹೋರಾಟಕ್ಕೆ ಇಳಿದಾಗಲೇ ಕಂಗನಾ ಅವರಿಗೆ ಲೋಕಸಭಾ ಟಿಕೆಟ್ ಖಚಿತವಾಗಿತ್ತು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿಯೂ ಸಿಕ್ಕಾಪಟ್ಟೆ ಚರ್ಚೆಯಾಗಿತ್ತು. ಇದೀಗ ನಿರೀಕ್ಷೆಯಂತೆ ಕಂಗನಾಗೆ ಟಿಕೆಟ್ ನೀಡಲಾಗಿದೆ.
ಉಜಿಯಾರ್ಪುರದಿಂದ ನಿತ್ಯಾನಂದ ರೈ, ಬೇಗುಸರಾಯ್ನಿಂದ ಗಿರಿರಾಜ್ ಸಿಂಗ್, ಪಾಟ್ನಾ ಸಾಹಿಬ್ನಿಂದ ರವಿಶಂಕರ್ ಪ್ರಸಾದ್, ಕುರುಕ್ಷೇತ್ರದಿಂದ ನವೀನ್ ಜಿಂದಾಲ್, ದುಮ್ಕಾದಿಂದ ಸೀತಾ ಸೊರೆನ್, ಸಂಬಲ್ಪುರದಿಂದ ಧರ್ಮೇಂದ್ರ ಪ್ರಧಾನ್, ಬಾಲಸೋರ್ನಿಂದ ಪ್ರತಾಪ್ ಸಾರಂಗಿ, ಪುರಿಯಿಂದ ಸಂಬಿತ್ ಪಾತ್ರಾ, ಭುವನೇಶ್ವರದಿಂದ ಅರುಣ್ ಸಾರಂಗಿ, ಭುವನೇಶ್ವರದಿಂದ ಅರುಣ್ ಸಾರಂಗಿ ಕಣದಲ್ಲಿದ್ದಾರೆ.
ಸುರೇಂದ್ರನಗರದಿಂದ ಚಂದುಭಾಯ್ ಶಿಯೋಹೋರಾ, ಅಮ್ರೇಲಿಯಿಂದ ಭರತ್ ಭಾಯ್ ಸುತಾರಿಯಾ, ಜುನಾಗಢದಿಂದ ರಾಜೇಶ್ ಚುಡಾಸಮಾ, ಮೆಹ್ಸಾನಾದಿಂದ ಹರಿ ಪಟೇಲ್, ವಡೋದರಾದಿಂದ ಡಾ.ಹೇಮಂಗ್ ಜಿಶಿ, ಸಬರ್ಕಾಂತದಿಂದ ಶಭನಾ ಬೆನ್ ಬರಿಯಾ ಅವರ ಹೆಸರನ್ನು ಪಕ್ಷ ಘೋಷಿಸಿದೆ. (ಏಜೆನ್ಸೀಸ್)
ಬೇಸಿಗೆ ಅಂತ ಅತಿ ಹೆಚ್ಚು ನೀರು ಕುಡಿಯುತ್ತೀರಾ? ಆರೋಗ್ಯಕ್ಕೆ ತುಂಬಾ ಡೇಂಜರ್, ಕುಡಿಯುವ ರೀತಿ ಹೀಗಿರಲಿ…
ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗ್ತೀನಿ ಅಂದಿದ್ದ ದೇವೇಗೌಡರು ಈಗ…. ಸಿಎಂ ವ್ಯಂಗ್ಯ