ಈ ಫೋಟೋದಲ್ಲಿರುವ ಹುಡುಗಿ ಯಾರು ಗೊತ್ತಾ? ಸೌತ್​ ಸಿನಿಮಾ ರಂಗದ ಸ್ಟಾರ್​ ನಟಿ ಈಕೆ! ಗುರುತಿಸಬಲ್ಲಿರಾ? Actress Childhood Photo

Actress Childhood Photo
Published on

Actress Childhood Photo : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್​ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್​ ಹಾಗೂ ವಾಚ್​ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಬಾಲ್ಯದಲ್ಲಿ ಹೇಗಿದ್ದರು? ಸಿನಿಮಾಗೆ ಬರುವ ಮುಂಚೆ ಹೇಗೆ ಕಾಣುತ್ತಿದ್ದರು ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.

Actress Childhood Photo 1

ಪ್ರಸ್ತುತ ನಾವೊಂದು ಫೋಟೋವನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿದ್ದೇವೆ. ಆ ಫೋಟೋವನ್ನು ನೀವು ಮೇಲೆ ನೋಡಬಹುದು. ಅದು ಶಾಲಾ ದಿನಗಳಲ್ಲಿ ಹುಡುಗಿಯರು ತೆಗೆಸಿಕೊಂಡ ಗ್ರೂಪ್ ಫೋಟೋ. ಆ ಫೋಟೋದಲ್ಲಿ ನಾವು ಗುರುತು ಮಾಡಿರುವ ಹುಡುಗಿ ಸಾಮಾನ್ಯ ಹುಡುಗಿಯಲ್ಲ. ಆಕೆ ಪ್ಯಾನ್​ ಇಂಡಿಯಾದ ಸ್ಟಾರ್​ ನಟಿ. ತನ್ನ ಸೌಂದರ್ಯದಿಂದಲೇ ಎಲ್ಲರ ಮನಸ್ಸು ಗೆದ್ದ ಚೆಲುವೆ. ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಕನ್ನಡದಲ್ಲಿ ಒಂದು ಸಿನಿಮಾನೂ ಮಾಡದಿದ್ದರೂ ಸ್ಟಾರ್​ ನಟಿಯಾಗಿರುವುದರಿಂದ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ವೈವಾಹಿಕ ಜೀನದಲ್ಲಿ ಸಾಕಷ್ಟು ಅಡೆತಡೆಗಳನ್ನು ಅನುಭವಿಸಿ, ಡಿವೋರ್ಸ್​ ಪಡೆದುಕೊಂಡು, ಇಂದು ಏಕಾಂಗಿಯಾಗಿ ಜೀವನ ನಡೆಸುತ್ತಿದ್ದಾರೆ. ಸದ್ಯ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಇದರ ನಡುವೆ, ಬೇರೊಬ್ಬರ ಪ್ರೀತಿಯಲ್ಲಿ ಬಿದ್ದಿದ್ದಾರೆ ಎಂಬ ವದಂತಿಗಳು ಕೂಡ ಆಗಾಗ ಹರಿದಾಡುತ್ತಿರುತ್ತವೆ. ವೆಬ್​ ಸರಣಿಗಳಲ್ಲೂ ನಟಿಸಿದ್ದಾರೆ. ಐಟಂ ಡ್ಯಾನ್ಸ್​ ಒಂದರಲ್ಲಿ ಸೊಂಟ ಬಳುಕಿಸಿ, ಹಲ್​ ಚಲ್​ ಎಬ್ಬಿಸಿದ್ದಾರೆ. ಇಷ್ಟೆಲ್ಲ ಸುಳಿವು ನೀಡಿದರೂ ಅವರು ಯಾರೆಂದು ಗೊತ್ತಾಗುತ್ತಿಲ್ಲವೇ? ಹಾಗಾದರೆ, ಮುಂದೆ ಓದಿ ಉತ್ತರ ಸಿಗಲಿದೆ.

ಅಂದಹಾಗೆ, ಈ ಮೇಲಿನ ಫೋಟೋದಲ್ಲಿರುವುದು ಬೇರೆ ಯಾರೂ ಅಲ್ಲ ಅವರೇ ಸ್ಟಾರ್​ ನಟಿ ಸಮಂತಾ. ಸಮಂತಾ ಕಳೆದ ಒಂದು ದಶಕಗಳಿಂದ ಸ್ಟಾರ್​ ನಾಯಕಿಯಾಗಿ ಸಿನಿಮಾ ರಂಗದಲ್ಲಿ ಮಿಂಚು ಹರಿಸುತ್ತಿದ್ದಾರೆ. ತೆಲುಗು ಹಾಗೂ ತಮಿಳು ಭಾಷೆಗಳಲ್ಲಿ ಅನೇಕ ಚಿತ್ರಗಳನ್ನು ಮಾಡಿದ್ದು, ಬಹುಭಾಷಾ ನಾಯಕಿ ಎನಿಸಿಕೊಂಡಿದ್ದಾರೆ.

Samantha

ಅಂದಹಾಗೆ, ಸಮಂತಾ ಅವರು 1987, ಏಪ್ರಿಲ್ 28ರಂದು ಚೆನೈನಲ್ಲಿ ಜನಿಸಿದರು. ತೆಲುಗು ಮತ್ತು ಮಲಯಾಳಿ ಕುಟುಂಬದಿಂದ ಬಂದ ಅವರು, ಕಾಮರ್ಸ್‌ನಲ್ಲಿ ಪದವಿ ಪಡೆದುಕೊಂಡು ಮಾಡೆಲಿಂಗ್‌ನಿಂದ ತಮ್ಮ ವೃತ್ತಿಜೀವನ ಆರಂಭಿಸಿದರು. 2010ರಲ್ಲಿ ‘ಯೇ ಮಾಯ ಚೇಸವೇ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ, ಫಿಲ್ಮ್‌ಫೇರ್‌ನ ಅತ್ಯುತ್ತಮ ಚೊಚ್ಚಲ ನಟಿ ಪ್ರಶಸ್ತಿ ಪಡೆದರು. ‘ನೀತಾನೆ ಎನ್ ಪೊನ್‌ವಸಂತಂ’ ಮತ್ತು ‘ಈಗ’ ಚಿತ್ರಗಳಿಗಾಗಿ 2012ರಲ್ಲಿ ತಮಿಳು ಮತ್ತು ತೆಲುಗು ಭಾಷೆಯಲ್ಲಿ ಅತ್ಯುತ್ತಮ ನಟಿ ಫಿಲ್ಮ್‌ಫೇರ್ ಪ್ರಶಸ್ತಿಗಳನ್ನು ಗೆದ್ದರು. ಅವರು ‘ದೂಕುಡು’, ‘ಸೀತಮ್ಮ ವಾಕಿಟ್‌ಲೋ ಸಿರಿಮಲ್ಲೆ ಚೆಟ್ಟು’ ಮತ್ತು ‘ಅತ್ತಾರಿಂಟಿಕಿ ದಾರೇದಿ’ನಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಸಮಂತಾ ನಟನೆಯ ಜೊತೆಗೆ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. 2012ರಲ್ಲಿ ‘ಪ್ರತ್ಯುಷಾ ಸಪೊರ್ಟ್’ ಎಂಬ ಎನ್‌ಜಿಒ ಸ್ಥಾಪಿಸಿ, ಮಕ್ಕಳು ಮತ್ತು ಮಹಿಳೆಯರಿಗೆ ಔಷಧಿ ಸಹಾಯವನ್ನು ಒದಗಿಸುತ್ತಾರೆ. ಆರೋಗ್ಯ ಜಾಗೃತಿಗಾಗಿ ‘ಟೇಕ್ 20 ಹೆಲ್ತ್’ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಫಿಟ್‌ನೆಸ್ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ. ‘ಟ್ರಲಾಲಾ ಮೂವಿಂಗ್ ಪಿಕ್ಚರ್ಸ್’ ಎಂಬ ತಮ್ಮ ನಿರ್ಮಾಣ ಸಂಸ್ಥೆಯಡಿ ‘ಶುಭಂ’ ಮತ್ತು ‘ಮಾ ಉಂಟಿ ಬಂಗಾರಮ್’ ಚಿತ್ರಗಳನ್ನು ನಿರ್ಮಿಸಿದ್ದಾರೆ.

Actress Samantha

ಡಿವೋರ್ಸ್​

ಸಮಂತಾ ಮತ್ತು ನಟ ನಾಗಚೈತನ್ಯ ಅಕ್ಕಿನೇನಿ 2017ರಲ್ಲಿ ವಿವಾಹವಾದರು. ಆದರೆ, 2021ರಲ್ಲಿ ದಾಂಪತ್ಯ ಜೀವನದ ವೈಯಕ್ತಿಕ ಕಾರಣಗಳಿಂದಾಗಿ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದರು. ಈ ವಿಚ್ಛೇದನವು ಸೌಹಾರ್ದಯುತವಾಗಿತ್ತು ಎಂದು ಇಬ್ಬರೂ ಸ್ಪಷ್ಟಪಡಿಸಿದ್ದಾರೆ. ಆದರೆ, ಊಹಾಪೋಹಗಳು ಮತ್ತು ಟೀಕೆಗಳಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಯಿತು. ಸಮಂತಾ 200 ಕೋಟಿ ರೂ. ಜೀವನಾಂಶವನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ, ತಮ್ಮ ಸ್ವಾವಲಂಬನೆಯನ್ನು ಒತ್ತಿಹೇಳಿದ್ದಾರೆ. ವೈಯಕ್ತಿಕ ಜೀವನದಲ್ಲಿ ಎದುರಾದ ಸವಾಲುಗಳಾದ ವಿಚ್ಛೇದನ ಮತ್ತು ಮಯೋಸೈಟಿಸ್ ಆರೋಗ್ಯ ಸಮಸ್ಯೆಯ ಹೊರತಾಗಿಯೂ, ಅವರು ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net