

Actress Childhood Photo : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್ ಹಾಗೂ ವಾಚ್ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಬಾಲ್ಯದಲ್ಲಿ ಹೇಗಿದ್ದರು? ಸಿನಿಮಾಗೆ ಬರುವ ಮುಂಚೆ ಹೇಗೆ ಕಾಣುತ್ತಿದ್ದರು ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.
ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋವೊಂದು ವೈರಲ್ ಆಗಿದೆ. ಆ ಫೋಟೋದಲ್ಲಿ ಮುದ್ದಾದ ಬಾಲಕಿ ಇದ್ದಾಳೆ. ಈಕೆ ಸಾಮಾನ್ಯ ಬಾಲಕಿ ಅಲ್ಲ, ಆಕೆ ಕನ್ನಡದ ನಟಿ. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ಮಿಂಚಿ, ಪಕ್ಕದ ತೆಲುಗು ಚಿತ್ರರಂಗದಲ್ಲೂ ತಮ್ಮ ಛಾಪು ಮೂಡಿಸಿರುವ ಬಹುಭಾಷ ನಟಿ.
ಈ ಫೋಟೋದಲ್ಲಿರುವುದು ಯಾರೆಂದು ಇನ್ನೂ ನಿಮಗೆ ನೆನಪಿಗೆ ಬರುತ್ತಿಲ್ಲವೇ? ಈಕೆ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ಜತೆ ನಟಿಸಿದ್ದಾರೆ. ಒಂದು ಹಾಡಂತೂ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ಶಿವಣ್ಣನ ಚಿತ್ರದಲ್ಲಿ ಗಂಡುಬೀರಿ ಪಾತ್ರದಲ್ಲಿ ನಟಿಸಿದ್ದರು. ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿಲ್ಲ. ತೆಲಗಿನಲ್ಲಿ ಒಂದು ಕಾಲದಲ್ಲಿ ಹಿಟ್ ಸಿನಿಮಾಗಳನ್ನು ನೀಡಿದ್ದ ಈ ನಟಿ ಕೊಂಚ ಬಿಡುವು ಮಾಡಿಕೊಂಡು ಮತ್ತೆ ಸಿನಿಮಾದಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ. ಇಷ್ಟೆಲ್ಲ ಸುಳಿವು ನೀಡಿದರೂ ಅವರು ಯಾರೆಂದು ಗೊತ್ತಾಗುತ್ತಿಲ್ಲವೇ? ಹಾಗಾದರೆ, ಮುಂದೆ ಉತ್ತರ ಸಿಗಲಿದೆ.
ಅಂದಹಾಗೆ, ಈ ಮೇಲಿನ ಫೋಟೋದಲ್ಲಿರುವುದು ಬೇರೆ ಯಾರೂ ಅಲ್ಲ ನಟಿ ನಭಾ ನಟೇಶ್. ಇವರು ಭಾರತೀಯ ನಟಿ ಮತ್ತು ರೂಪದರ್ಶಿ, ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಪ್ರಮುಖವಾಗಿ ಕೆಲಸ ಮಾಡುತ್ತಾರೆ. 1995, ಡಿಸೆಂಬರ್ 11ರಂದು ಕರ್ನಾಟಕದ ಶೃಂಗೇರಿಯಲ್ಲಿ ಜನಿಸಿದರು. ಉಡುಪಿಯ ಎನ್.ಎಂ.ಎ.ಎಂ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಮಾಹಿತಿ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ನಭಾ ತಮ್ಮ ವೃತ್ತಿಜೀವನವನ್ನು 2015ರಲ್ಲಿ ಕನ್ನಡ ಚಿತ್ರ "ವಜ್ರಕಾಯ"ದ ಮೂಲಕ ಆರಂಭಿಸಿದರು. ಇದರಲ್ಲಿ ಅವರ ನಟನೆಗೆ ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಮೆಚ್ಚುಗೆ ಸಿಕ್ಕಿತು. ಅದರಲ್ಲೂ ತೂಕತು ಗಡಬಡ ಲಡಕಿ ಹಾಗು ಸಿಕ್ಕಾಪಟ್ಟೆ ಜನಮನ್ನಣೆ ಗಳಿಸಿತು. ವಜ್ರಕಾಯ ಸಿನಿಮಾ ನಂತರ 2018ರಲ್ಲಿ ತೆಲುಗು ಚಿತ್ರ "ನನ್ನು ದೊಚುಕುಂದುವತೆ" ಮೂಲಕ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. 2019ರಲ್ಲಿ "ಐಸ್ಮಾರ್ಟ್ ಶಂಕರ್" ಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಗುರುತಿಸಲ್ಪಟ್ಟರು, ಇದರಿಂದ ಅವರಿಗೆ "ಐಸ್ಮಾರ್ಟ್ ಬ್ಯೂಟಿ" ಎಂಬ ಅಡ್ಡನಾಮ ಸಿಕ್ಕಿತು.
ಅಂದಹಾಗೆ, ನಭಾ ಭರತನಾಟ್ಯದಲ್ಲಿ ತರಬೇತಿ ಪಡೆದಿದ್ದಾರೆ ಮತ್ತು ಶಾಲಾ-ಕಾಲೇಜು ದಿನಗಳಲ್ಲಿ ಹಲವಾರು ಸ್ಪರ್ಧೆಗಳಲ್ಲಿ ನೃತ್ಯ ಮಾಡಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪ್ರಕಾಶ್ ಬೆಳವಾಡಿಯವರ "ಅಭಿನಯ ತರಂಗ"ದಲ್ಲಿ ನಟನಾ ತರಬೇತಿ ಪಡೆದಿದ್ದಾರೆ. ಅವರು ಇನ್ಫೋಸಿಸ್‌ನ ಮಂಗಳೂರಿನ ಕಚೇರಿಯಲ್ಲಿ ಎರಡು ವರ್ಷ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ ಮತ್ತು ಫೆಮಿನಾ ಮಿಸ್ ಇಂಡಿಯಾ 2013ರಲ್ಲಿ ಟಾಪ್ 10ರಲ್ಲಿ ಸ್ಥಾನ ಪಡೆದಿದ್ದಾರೆ. ಅವರು ಚಿತ್ರಕಲೆಯಲ್ಲಿಯೂ ಆಸಕ್ತಿಯನ್ನು ಹೊಂದಿದ್ದಾರೆ ಮತ್ತು ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಗೆದ್ದಿದ್ದಾರೆ.
ಕೆಲವು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಭುಜದ ಮೂಳೆ ಮುರಿದುಕೊಂಡಿದ್ದರಿಂದ ಸಿನಿಮಾ ಕೆಲಸದಿಂದ ಕೆಲವು ಕಾಲ ವಿರಾಮ ಪಡೆದಿದ್ದರು. ಆದರೆ, 2024ರಲ್ಲಿ ಅವರು ತೆಲುಗು ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ, "ಸ್ವಯಂಭು" ಮತ್ತು "ಹನುಮಾನ್" ನಿರ್ಮಾಪಕರ ಮಹಿಳಾಪ್ರಧಾನ ಚಿತ್ರದಂತಹ ಯೋಜನೆಗಳಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗೆ ಅವರ ಫೋಟೋಶೂಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿವೆ, ವಿಶೇಷವಾಗಿ 2023ರಲ್ಲಿ ನೇಪಾಳದ ಪೋಕ್ರಾದಲ್ಲಿ ರಜೆಯ ಸಂದರ್ಭದ ಫೋಟೋಗಳು ವೈರಲ್ ಆಗಿದ್ದವು.