‘ಜೈ ಹನುಮಾನ್‌’ ಸೀಕ್ವೆಲ್ ರಾಕಿ ಭಾಯ್​ ಎಂಟ್ರಿ ಫಿಕ್ಸ್​​!?

yash
Published on

ಹೈದರಾಬಾದ್​: ಯುವ ನಟ ತೇಜ ಸಜ್ಜಾ ಅಭಿನಯದ ‘ಹನುಮಾನ್​’ ಸಿನಿಮಾ ಸೂಪರ್​ ಹಿಟ್​ ಆಗಿದೆ. ಕಳೆದ ವರ್ಷ ಈ ಸಿನಿಮಾದ ಟೀಸರ್​ ಬಿಡುಗಡೆ ಆದಾಗಲೇ ಜನರು ವಾವ್​ ಎಂದಿದ್ದರು. ಜನವರಿ 12ರಂದು ರಿಲೀಸ್​ ಆದ ಈ ಸಿನಿಮಾ 14 ದಿನಕ್ಕೆ ಬಾಕ್ಸ್​ ಆಫೀಸ್​ನಲ್ಲಿ 300 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತ್ತು.

ನಿರ್ದೇಶಕ ರಾಜಮೌಳಿ ಸೇರಿದಂತೆ ಎಲ್ಲಾ ಸ್ಟಾರ್ ಡೈರೆಕ್ಟರ್​ಗಳು ಕೂಡ ಸಿನಿಮಾವನ್ನು ಹೊಗಳಿದ್ದಾರೆ. ಇದೀಗ ಮತ್ತೊಂದು ಇಂಟ್ರೆಸ್ಟಿಂಗ್ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ.

ನಿರ್ದೇಶಕ ಪ್ರಶಾಂತ್ ವರ್ಮಾ ಅವರು ಈಗಾಗಲೇ ಹನುಮಾನ್ ಚಿತ್ರದ ಸೀಕ್ವೆಲ್ ಎಂದು ಘೋಷಿಸಿದ್ದಾರೆ. ‘ಜೈ ಹನುಮಾನ್‌’ ಸಿನಿಮಾದ ಕೆಲಸ ಶುರುವಾಗಿದೆ. ‘ಹನುಮಾನ್‌’ ಸಿನಿಮಾ ಮೂಲಕ ಪ್ರಶಾಂತ್‌ ವರ್ಮಾ ರಾಷ್ಟ್ರವ್ಯಾಪಿ ಜನಪ್ರಿಯರಾಗಿದ್ದಾರೆ. ಸೃಜನಶೀಲ ನಿರ್ದೇಶಕ ಪ್ರಶಾಂತ್‌ ವರ್ಮಾ ಸಿನಿಮ್ಯಾಟಿಕ್‌ ಯೂನಿವರ್ಸ್‌ ಪರಿಕಲ್ಪನೆಯಲ್ಲಿ ಮತ್ತೊಮ್ಮೆ ಮಹಾಕಾವ್ಯವನ್ನು ಪ್ರೇಕ್ಷಕರ ಎದುರು ತರುವ ಸಾಹಸಕ್ಕೆ ಮುಂದಾಗಿದ್ದಾರೆ.

ಅದರ ಭಾಗವಾಗಿ ‘ಜೈ ಹನುಮಾನ್‌’ ಸಿನಿಮಾ ಘೋಷಿಸಿದ್ದು, ದೊಡ್ಡ ಮಟ್ಟದಲ್ಲಿ ಮೂಡಿ ಬರಲಿರುವ ಈ ಸೀಕ್ವೆಲ್‌ಗಾಗಿ ನಿರ್ದೇಶಕರು ಈಗಾಗಲೇ ಸ್ಕ್ರಿಪ್ಟ್ ಸಿದ್ಧಪಡಿಸಿದ್ದಾರೆ. ಹೈದರಾಬಾದ್‌ನ ಹನುಮಾನ್‌ ದೇವಾಲಯದಲ್ಲಿ ಸ್ಕ್ರಿಪ್ಟ್ ಪೂಜೆ ನೆರವೇರಿದೆ. ಮುಂದಿನ ದಿನಗಳಲ್ಲಿ ತಾರಾ ಬಳಗ ಹಾಗೂ ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ನೀಡಲಿದ್ದಾರೆ.

‘ಜೈ ಹನುಮಾನ್‌’ ಸಿನಿಮಾ ಹಿರೋ ಪಾತ್ರಕ್ಕೆ ಸೌಂತ್ ಇಂಡಿಯನ್​ ಒಬ್ಬ ಸ್ಟಾರ್ ನಟ ಆಯ್ಕೆಯಾಗಿದ್ದಾರೆ ಸುದ್ದಿ ಭಾರಿ ವೈರಲ್​ ಆಗುತ್ತಿದೆ.

ಕಳೆದ ದಿನಗಳಿಂದ ಜೈ ಹನುಮಾನ್​ ಸಿನಿಮಾದಲ್ಲಿ ಹನುಮಂತನ ಪಾತ್ರದಲ್ಲಿ ದಗ್ಗುಬಾಟಿ ರಾಣಾ ನಟಿಸಲಿದ್ದಾರೆ ಎಂದು ಸುದ್ದಿ ವೈರಲ್​ ಆಗಿತ್ತು. ಆದರೆ ಈ ಸಿನಿಮಾ ಹಿರೋ ಆಗಿ ರಾಕಿಂಗ್​ ಸ್ಟಾರ್ ಯಶ್​ ಅವರು ನಟಿಸಲಿದ್ದಾರೆ ಎನ್ನಲಾಗ್ತಿದೆ.

ಬಿಗ್ ಬಜೆಟ್​ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್' ಯಶ್ ನಟಿಸಲಿದ್ದಾರೆ ಎಂಬ ಸುದ್ದಿ ಇನ್ನೂ ಅಧಿಕೃತವಾಗಿ ಲಭ್ಯವಾಗಿಲ್ಲ. ಶೀಘ್ರದಲ್ಲೇ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ ಎನ್ನಲಾಗುತ್ತಿದೆ. ಹನುಮಾನ್​ ಸಿನಿಮಾ ನೋಡಿದ ಜನರಿಗೆ ವಿಭಿನ್ನ ರೀತಿಯಿ ಅನುಭವ ನೀಡಿತ್ತು. ಈ ಸಿನಿಮಾ ನೋಡಿ ಸಿನಿಮಾ ನಟರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.

ರಾಕಿಂಗ್ ಸ್ಟಾರ್' ಯಶ್ ಅವರ 'ಕೆಜಿಎಫ್: ಚಾಪ್ಟರ್ 2' ಸಿನಿಮಾ ತೆರೆಕಂಡು ಭರ್ತಿ 20 ತಿಂಗಳಾಗುತ್ತಿವೆ. 2022ರ ಏಪ್ರಿಲ್ 14ರಂದು ಆ ಸಿನಿಮಾ ರಿಲೀಸ್ ಆಗಿತ್ತು. ಆನಂತರ ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಪ್ರಚಂಡ ಗೆಲುವು ಕಂಡಿದ್ದು ಎಲ್ಲರಿಗೂ ಗೊತ್ತೇ ಇದೆ. ಇದಾದ ಬಳಿಕ ಮುಂದೆ ಯಶ್ ಯಾವ ಸಿನಿಮಾ ಮಾಡ್ತಾರೆ ಅನ್ನೋ ಕುತೂಹಲ ಮಾತ್ರ ಹಾಗೇ ಇತ್ತು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಯಶ್ ಹೊಸ ಸಿನಿಮಾ ಘೋಷಣೆಗೆ ದಿನಗಣನೆ ಆರಂಭವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net