More

    ಮನೆ ಮೇಲ್ಛಾವಣಿ ಉಚಿತ ವಿದ್ಯುತ್​ ಪ್ರಯೋಜನಾ ಪಡೆಯಲು pmsuryaghar.gov.in ಅರ್ಜಿ ಸಲ್ಲಿಸಿ

    ನವದೆಹಲಿ: ಸೌರವಿದ್ಯುತ್ ಬಳಕೆಗೆ ಉತ್ತೇಜನ ನೀಡುವ ಉದ್ದೇಶ ಮತ್ತು ಸಾಮಾನ್ಯ ಜನರ ವಿದ್ಯುತ್ ಶುಲ್ಕ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ‘ ಪ್ರಧಾನ ಮಂತ್ರಿ ಸೂರ್ಯ ಘರ್​: ಮುಫ್ತ್‌ ಬಿಜ್ಲಿ ಯೋಜನಾ’ ಆರಂಭಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ತಿಳಿಸಿದ್ದಾರೆ.

    ಇದನ್ನೂ ಓದಿ:SHOWCIALIST ಸಿದ್ದರಾಮಯ್ಯ ಮಸಾಜ್​ ಕುರ್ಚಿ ಬೆಲೆ 10 ಲಕ್ಷ ರೂ ಎಂದ ಬಿಜೆಪಿ! 

    ದೇಶದಾದ್ಯಂತ ಒಂದು ಕೋಟಿ ಮನೆಗಳಿಗೆ ತಿಂಗಳಿಗೆ ತಲಾ 300 ಯೂನಿಟ್ ಉಚಿತ ವಿದ್ಯುತ್ ನೀಡುವ ಗುರಿಯನ್ನು ಹೊಂದಿದೆ.
    ಈ ಯೋಜನೆಗಾಗಿ ಒಟ್ಟು 75 ಸಾವಿರ ಕೋಟಿಗಿಂತ ಹೆಚ್ಚಿನ ಮೊತ್ತವನ್ನು ವಿನಿಯೋಗಿಸಲಾಗುತ್ತದೆ. ‘ಸುಸ್ಥಿರ ಅಭಿವೃದ್ಧಿ ಹಾಗೂ ಜನರ ಹಿತದ ದೃಷ್ಟಿಯಿಂದ ನಾವು ಈ ಯೋಜನೆಯನ್ನು ಆರಂಭಿಸುತ್ತಿದ್ದೇವೆ ಎಂದು ಮೋದಿ ತಮ್ಮ ‘ಎಕ್ಸ್’ ಖಾತೆಯಲ್ಲಿ ಬರೆದಿದ್ದಾರೆ.

    ಗಣನೀಯ ಪ್ರಮಾಣದ ಸಬ್ಸಿಡಿಯನ್ನು ಇದು ಒಳಗೊಂಡಿದೆ. ಸಬ್ಸಿಡಿ ಮೊತ್ತವನ್ನು ಯೋಜನೆಗೆ ಸೇರುವವರ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತದೆ. ಬ್ಯಾಂಕ್‌ ಸಾಲವನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತದೆ. ಈ ಮೂಲಕ ಜನರ ಮೇಲೆ ವೆಚ್ಚದ ಹೊರೆ ಬೀಳದಂತೆ ಕೇಂದ್ರ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.

    ಈ ಯೋಜನೆಯನ್ನು ತಳಮಟ್ಟದಲ್ಲಿ ಜನಪ್ರಿಯಗೊಳಿಸಲು ನಗರ ಸ್ಥಳೀಯ ಸಂಸ್ಥೆಗಳಿಗೆ ಹಾಗೂ ಪಂಚಾಯಿತಿಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ. ಈ ಯೋಜನೆಯು ಜನರ ಆದಾಯ ಹೆಚ್ಚಿಸುತ್ತದೆ, ವಿದ್ಯುತ್ ಬಿಲ್ ಮೊತ್ತವನ್ನು ತಗ್ಗಿಸುತ್ತದೆ ಹಾಗೂ ಉದ್ಯೋಗ ಸೃಷ್ಟಿಸುತ್ತದೆ ಎಂದಿದ್ದಾರೆ.

    ಇದಕ್ಕಾಗಿ pmsuryaghar.gov.in ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ. ಮತ್ತು ಇದರ ಅಡಿಯಲ್ಲಿ ಮೇಲ್ಛಾವಣಿ ಸೌರಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ..? ವಿವರಗಳನ್ನು ವೆಬ್‌ಸೈಟ್‌ನಲ್ಲಿ ಸೇರಿಸಲಾಗಿದೆ.

    ನೋಂದಾಯಿಸಲು ನೀವು ಹೀಗೆ ಮಾಡಿ:
    ಹಂತ1: ಮೊದಲು ನೀವು ಈ ಪೋರ್ಟಲ್‌ಗಳಲ್ಲಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು. 
    • ನಿಮ್ಮ ರಾಜ್ಯ ಮತ್ತು ವಿದ್ಯುತ್ ಸರಬರಾಜು ಕಂಪನಿಯನ್ನು ಆಯ್ಕೆಮಾಡಿ.
    • ನಿಮ್ಮ ವಿದ್ಯುತ್ ಸಂಪರ್ಕದ ಗ್ರಾಹಕ ಸಂಖ್ಯೆ, ಮೊಬೈಲ್ ಸಂಖ್ಯೆ, ಇ-ಮೇಲ್ ಐಡಿ ನಮೂದಿಸಿ.
    ಪೋರ್ಟಲ್‌ನಲ್ಲಿನ ನಿಯಮಗಳ ಪ್ರಕಾರ ನೋಂದಣಿಯನ್ನು ಪೂರ್ಣಗೊಳಿಸಬೇಕು.
    ಹಂತ 2: ನಂತರ ಗ್ರಾಹಕ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಮಾಡಿ. ಅಲ್ಲಿ Ruptop Solar ಗೆ ಅರ್ಜಿ ಹಾಕಿ.
    ಹಂತ 3: ಅಪ್ಲಿಕೇಶನ್ ಅನ್ನು ಪೂರ್ಣಗೊಳಿಸಿ ಮತ್ತು ಡಿಸ್ಕಮ್‌ನಿಂದ ಅನುಮೋದನೆಗಳಿಗಾಗಿ ನಿರೀಕ್ಷಿಸಿ. ಅನುಮತಿಯನ್ನು ಪಡೆದ ನಂತರ, ನಿಮ್ಮ ಡಿಸ್ಕಮ್‌ನ ನೋಂದಾಯಿತ ಮಾರಾಟಗಾರರಿಂದ ಸೌರ ಸ್ಥಾವರವನ್ನು ಸ್ಥಾಪಿಸಿ
    ಹಂತ 4: ಅನುಸ್ಥಾಪನೆ ಪೂರ್ಣಗೊಳಿಸಿದ ನಂತರ, ಪೋರ್ಟಲ್‌ನಲ್ಲಿ ವಿವರಗಳನ್ನು ಪರಿಶೀಲಿಸಿ ಮತ್ತು ನೆಟ್ ಮೀಟರ್‌ಗೆ ಅರ್ಜಿ ಸಲ್ಲಿಸಿ.
    ಹಂತ 5: ನೆಟ್ ಮೀಟರ್ ಅಳವಡಿಸಿದ ನಂತರ, ಅಧಿಕಾರಿಗಳು ಪರಿಶೀಲಿಸುತ್ತಾರೆ. ನಂತರ ಪೋರ್ಟಲ್‌ನಿಂದ ಕಮಿಷನಿಂಗ್ ಪ್ರಮಾಣಪತ್ರವನ್ನು ನೀಡಲಾಗುತ್ತದೆ.
    ಹಂತ 8: ಈ ವರದಿಯನ್ನು ಪಡೆದ ನಂತರ, ನೀವು ಪೋರ್ಟಲ್‌ನಲ್ಲಿ ನಿಮ್ಮ ಬ್ಯಾಂಕ್ ಖಾತೆಯ ವಿವರಗಳೊಂದಿಗೆ ರದ್ದುಪಡಿಸಿದ ಚೆಕ್ ಅನ್ನು ಸಲ್ಲಿಸಬೇಕು. ಸಬ್ಸಿಡಿಯನ್ನು 30 ದಿನಗಳಲ್ಲಿ ನಿಮ್ಮ ಖಾತೆಗೆ ಜಮಾ ಮಾಡಲಾಗುತ್ತದೆ.

     

    SHOWCIALIST ಸಿದ್ದರಾಮಯ್ಯ ಮಸಾಜ್​ ಕುರ್ಚಿ ಬೆಲೆ 10 ಲಕ್ಷ ರೂ ಎಂದ ಬಿಜೆಪಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts