SHOWCIALIST ಸಿದ್ದರಾಮಯ್ಯ ಮಸಾಜ್​ ಕುರ್ಚಿ ಬೆಲೆ 10 ಲಕ್ಷ ರೂ ಎಂದ ಬಿಜೆಪಿ!

s
Published on

ಬೆಂಗಳೂರು: ದೇಶವನ್ನು ಒಗ್ಗೂಡಿಸುವ 'ಭಾರತ್ ಜೋಡೋ ನ್ಯಾಯ್​ ಯಾತ್ರೆ' ನಡೆಸುತ್ತಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಧರಿಸಿದ್ದ ಬಾಬೆರಿ ಟಿ- ಶರ್ಟ್ ಸುಮಾರು 41,000 ರೂ ವೆಚ್ಚದ್ದು ಎಂದು ಎನ್ನಲಾಗಿರುವ ವಿಚಾರವಾಗಿ ಬಿಜೆಪಿ ವಾಗ್ದಾಳಿ ನಡೆಸಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಟೀಕೆ ಮಾಡಿದೆ.

ಸ್ವಾಭಿಮಾನಿ ಕನ್ನಡಿಗರ ತೆರಿಗೆ ಹಣದಲ್ಲಿ SHOWCIALIST ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜಾತ್ರೆ ಬಾಯಿ ಬಿಟ್ಟರೆ ಸಮಾಜವಾದಿ ಎಂದು ಬೊಗಳೆ ಬಿಡುವ ಸಿದ್ದರಾಮಯ್ಯನವರ ಪ್ರತಿದಿನ ಆಸೀನರಾಗುವುದು, ಬರೋಬ್ಬರಿ 10 ಲಕ್ಷ ಮೌಲ್ಯದ ಮಸಾಜ್‌ ಕುರ್ಚಿ ಕುರಿತು ಮೇಲೆ ಮಜಾ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಪ್ರತಿ ದಿನ ಮಜಾ ಉಡಾಯಿಸಲು ಹಾಗೂ ಐಷಾರಾಮಿಯಾಗಿ ಬದುಕಲು ಕನ್ನಡಿಗರ ತೆರಿಗೆ ಹಣವನ್ನು ಬಳಸುವಲ್ಲಿ ಮಜಾವಾದಿ ಮುಖ್ಯಮಂತ್ರಿ ಸದಾ ಸಿದ್ದ・ಹಸ್ತ・ರು ಎಂದು ಬಿಜೆಪಿ ಕರ್ನಾಟಕ ಟ್ಟೀಟ್ ಮಾಡಿದೆ.

ಮಸಾಜ್‌ ಕುರ್ಚಿ ಬೆಲೆಯ ಫೋಟೋವನ್ನು ಬಿಜೆಪಿ ಹಂಚಿಕೊಂಡಿದೆ. SHOWCIALIST ಸಿಎಂ, ಕನ್ನಡಿಗರ ತೆರಿಗೆ ಹಣದಲ್ಲಿ ಸಮಾಜವಾದಿಯ ಮಜವಾದಿ ಎಂದು ಟಾಂಗ್ ನೀಡಿದೆ.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 1 ಲಕ್ಷ 87 ಸಾವಿರ ಕೋಟಿ ರು. ನಷ್ಟ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆರಿಗೆ ಪಾಲು, ಅನುದಾನ ಹಂಚಿಕೆ, ಬರ ಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ಸೇರಿದಂತೆ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ನಿರಂತರ ಅನ್ಯಾಯ ಖಂಡಿಸಿ ದೆಹಲಿಯ ಜಂತರ್‌ ಮಂತರ್‌ನಲ್ಲಿ ರಾಜ್ಯ ಸರ್ಕಾರದಿಂದ ಪ್ರತಿಭಟನೆ ನಡೆಸಿದ್ದರು.

ಬರಗಾಲ ವಿಚಾರದಲ್ಲೂ ಕರ್ನಾಟಕಕ್ಕೆ ಅನ್ಯಾಯವಾಗಿದೆ. ರಾಜ್ಯ ತೀವ್ರ ಬರ ಎದುರಿಸುತ್ತಿದ್ದೇವೆ ಎಂದಿದ್ದ ಸಿದ್ದರಾಮಯ್ಯ ಅವರು ಇಂತಹ ಸಂದರ್ಭದಲ್ಲಿ ಕನ್ನಡಿಗರ ತೆರಿಗೆ ಹಣದಲ್ಲಿ ಮಜಾ ಮಾಡುತ್ತಿದ್ದಾರೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net