ಮಾಜಿ ಗೆಳೆತಿಯನ್ನು ಕೊಂದ ಫುಟ್ಬಾಲ್ ಆಟಗಾರನಿಗೆ ಜೀವಾವಧಿ ಶಿಕ್ಷೆ!

plyer
Published on

ರೋಮ್: ತನ್ನ ಮಾಜಿ ಗೆಳತಿಯನ್ನು ಸುತ್ತಿಗೆಯಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದ ಇಟಾಲಿಯನ್ ಮಾಡೆಲ್ ಮತ್ತು ಫುಟ್ಬಾಲ್ ಆಟಗಾರನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ಮೆಟ್ರೋ ಸಂಸ್ಥೆ ವರದಿ ಮಾಡಿದೆ.

2022 ರಲ್ಲಿ ತನ್ನ ಮಾಜಿ ಗೆಳತಿ ಅಲೆಸ್ಸಾಂಡ್ರಾ ಮ್ಯಾಟ್ಯೂಜಿಯನ್ನು ಕೊಲೆ ಮಾಡಿದ್ದಕ್ಕಾಗಿ 28 ವರ್ಷ ವಯಸ್ಸಿನ ಗಿಯೋವಾನಿ ಪಡೋವಾನಿ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

2022 ಆಗಸ್ಟ್‌ನಲ್ಲಿ ಬೊಲೊಗ್ನಾದ ತನ್ನ ಮನೆಯ ಹೊರಗೆ ಬೇಸ್‌ಬಾಲ್ ಬ್ಯಾಟ್ ಮತ್ತು ಬೆಂಚ್‌ನಿಂದ ದಾಳಿ ಮಾಡಿ ಹತ್ಯೆ ಮಾಡಿದ್ದಾನೆ. ಗಿಯೋವಾನಿ ಪಡೋವಾನಿ ತನ್ನ ಮಾಜಿ ಗೆಳತಿ ಅಲೆಸ್ಸಾಂಡ್ರಾ ಮೇಲೆ ಹಲ್ಲೆ ಮಾಡುತ್ತ ವೇಳೆ ಆಕೆ ಸಹೋದರಿ ಸ್ಟೆಫಾನಿಯಾ ಅವಳೊಂದಿಗೆ ಫೋನ್​ ಮಾತನಾಡುತ್ತಿದ್ದಳು, ಇದೇ ವೇಳೆ ಬಂದ ಆರೋಪಿ ಪಾಡೋವಾನಿ ತೀವ್ರ ಹಲ್ಲೆ ಮಾಡಿದ್ದಾನೆ. ಸಹಾಯಕ್ಕಾಗಿ ಆಕೆ ಕಿರುಚಿದರು ಯಾರು ಹತ್ತಿರ ಸುಳಿಯಲಿಲ್ಲ ಎಂದು ವರದಿಯಾಗಿದೆ.

ಈ ಪ್ರಕರಣದಲ್ಲಿ ಇಟಾಲಿಯನ್ ಫುಟ್ಬಾಲ್ ಆಟಗಾರನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವೇಳೆ ಆರೋಪಿ ದಾಳಿಯ ಸಮಯದಲ್ಲಿ ನಾನು ಮಾನಸಿಕವಾಗಿ ಸದೃಢನಾಗಿರಲಿಲ್ಲ ಎಂದು ಹೇಳಿಕೊಂಡಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net