ಸರಳವಾಗಿ ಸಪ್ತಪದಿ ತುಳಿದ ವಿನಾಯಕ್​ ಜೋಷಿ ಮತ್ತು ವರ್ಷಾ ಬೆಳವಾಡಿ

Egfs4phU4AAtLPh
Published on

ಬೆಂಗಳೂರು: ನಟ-ನಿರೂಪಕ ವಿನಾಯಕ್ ಜೋಷಿ ಮತ್ತು ಮಾಜಿ ಬ್ಯಾಡ್ಮಿಂಟನ್ ಆಟಗಾರ್ತಿ ವರ್ಷಾ ಬೆಳವಾಡಿ ಅವರ ಮದುವೆ ಶುಕ್ರವಾರ ಬೆಳಗ್ಗೆ ಬನಶಂಕರಿ 2ನೇ ಹಂತದಲ್ಲಿರುವ ಧರ್ಮಗಿರಿ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.

15ರಿಂದ 55 ವರ್ಷದೊಳಗಿನವರಿಗಷ್ಟೇ ಮದುವೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿತ್ತು. ಹಾಗಾಗಿ ಆಪ್ತರು, ಕುಟುಂಬಸ್ಥರು ಮತ್ತು ಕೆಲವೇ ಕೆಲವು ಸ್ನೇಹಿತರು ಮದುವೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ರಾಷ್ಟ್ರೀಯ-ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಆಡಿರುವ ಮಾಜಿ ವಿಶ್ವ ನಂ. 120 ಷಟ್ಲರ್ ವರ್ಷಾ, ಕಳೆದ ವರ್ಷವಷ್ಟೇ ನಿವೃತ್ತಿ ಹೊಂದಿದ್ದು, ಇದೀಗ ಅಕಾಡೆಮಿಯೊಂದರಲ್ಲಿ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿನಾಯಕ್ ಮತ್ತು ವರ್ಷಾ ಹಲವು ವರ್ಷಗಳ ಸ್ನೇಹಿತರಾಗಿದ್ದು, ಅವರದ್ದು ಲವ್ ಕಂ ಅರೇಂಜ್ಡ್ ಮದುವೆಯಾಗಿದೆ.

ಪ್ರಕಾಶ್ ಬೆಳವಾಡಿ- ಸುಧಾ ಬೆಳವಾಡಿ ಕುಟುಂಬಕ್ಕೆ ಸೇರಿದ ವರ್ಷಾ ಸಿನಿಮಾ ಹಿನ್ನೆಲೆಯನ್ನೂ ಹೊಂದಿದ್ದು, ತಮಿಳು ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಬಾಲ್ಯದಲ್ಲಿ ಜತೆಯಾಗಿ ಡ್ಯಾನ್ಸ್ ಮಾಡಿದ್ದ ವಿನಾಯಕ್- ವರ್ಷಾ, 25 ವರ್ಷಗಳ ಬಳಿಕ ಕಾಮನ್ ಫ್ರೆಂಡ್ ಮೂಲಕ ಮತ್ತೊಮ್ಮೆ ಭೇಟಿಯಾಗಿದ್ದರು. ನಂತರ ಅವರ ಸ್ನೇಹ- ಭೇಟಿ ಮತ್ತೆ ಮುಂದುವರಿದಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net