More

    ನಟ ಸಿದ್ಧಾರ್ಥ್ ಮಲ್ಹೋತ್ರಾ – ನಟಿ ಕಿಯಾರಾ ಅಡ್ವಾನಿ ಭರ್ಜರಿ ಮದುವೆ

    ಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ಕಿಯಾರಾ ಅಡ್ವಾನಿ ಮದುವೆ ರಾಜಸ್ತಾನದ ಜೈಸಲ್ಮೇರ್​ನ ಸೂರ್ಯಗಢ ಪ್ಯಾಲೇಸ್​ನಲ್ಲಿ ನಡೆಯಿತು. ಸೋಮವಾರ (ಫೆ. 6) ಅರಿಶಿನ ಕಾರ್ಯಕ್ರಮ, ಸಂಗೀತ ಕಾರ್ಯಕ್ರಮ ನಡೆದ ಬಳಿಕ ಮಂಗಳವಾರ (ಫೆ.7) ಸಿದ್ಧಾರ್ಥ್, ಕಿಯಾರಾ ಅದ್ಧೂರಿ ವಿವಾಹ ನೆರವೇರಿದೆ. ಮಧ್ಯಾಹ್ನ 2ರಿಂದ 4 ಗಂಟೆವರೆಗಿನ ಮುಹೂರ್ತದಲ್ಲಿ ಸಿದ್ಧಾರ್ಥ್, ಕಿಯಾರಾ ಹಾರ ಬದಲಿಸಿಕೊಂಡು, ಹಿಂದೂ ಸಂಪ್ರದಾಯದಂತೆ ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ್ದಾರೆ.

    ಶಾಹಿದ್ ಕಪೂರ್, ಮಲೈಕಾ ಅರೋರಾ, ಜೂಹಿ ಚಾವ್ಲಾ, ಕರಣ್ ಜೋಹರ್, ಇಶಾ ಅಂಬಾನಿ, ಮೀರಾ ರಜಪೂತ್ ಸೇರಿದಂತೆ ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಗಣ್ಯರು ಭಾಗವಹಿಸಿ ನವಜೋಡಿಗೆ ಶುಭಹಾರೈಸಿದ್ದಾರೆ. ದೆಹಲಿ ಮೂಲದ ಸಿದ್ಧಾರ್ಥ್ 2012ರಲ್ಲಿ ‘ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಬಾಲಿವುಡ್​ಗೆ ನಾಯಕನಾಗಿ ಪದಾರ್ಪಣೆ ಮಾಡಿದರೆ, 2014ರಲ್ಲಿ ರಿಲೀಸ್ ಆದ ‘ಫಗ್ಲಿ’ ಮೂಲಕ ಕಿಯಾರಾ ಎಂಟ್ರಿಯಾಗಿದ್ದರು.

    2018ರಲ್ಲಿ ಕಿಯಾರಾ ನಟಿಸಿದ್ದ ‘ಲಸ್ಟ್ ಸ್ಟೋರೀಸ್’ ಚಿತ್ರದ ವಿಶೇಷ ಪ್ರದರ್ಶನದಲ್ಲಿ ಇಬ್ಬರೂ ಪರಿಚಿತರಾಗಿದ್ದು, ಬಳಿಕ ಪ್ರೇಮಾಂಕುರವಾಗಿತ್ತು. 2021ರಲ್ಲಿ ‘ಶೇರ್​ಶಾಹ್’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. –ಏಜೆನ್ಸೀಸ್

    ಸಿನಿಮಾ ಹೀರೋಯಿನ್​ಗೆ ಹೋಲಿಸಿದ್ದಕ್ಕೆ ಪತಿಗೆ ಊಟ ಹಾಕಲ್ಲ ಎಂದ ಪತ್ನಿ!

    ರೇಸ್‌ಕೋರ್ಸ್ ರಸ್ತೆಗೆ ರೆಬೆಲ್ ಸ್ಟಾರ್​ ಅಂಬರೀಷ್ ಹೆಸರು; ಮುಖ್ಯಮಂತ್ರಿ ಬೊಮ್ಮಾಯಿ ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts