More

    ಶೋ ಟಾಪರ್ ಆದ ರೂಪೇಶ್ ಶೆಟ್ಟಿ..

    ಬೆಂಗಳೂರು: ‘ಬಿಗ್ ಬಾಸ್ ಕನ್ನಡ ಓಟಿಟಿ’ಯ ಮೊದಲ ಸೀಸನ್ ಶುಕ್ರವಾರ ರಾತ್ರಿ ಅಂತ್ಯವಾಗಿದೆ. 42 ದಿನಗಳ ಕಾಲ ನಡೆದ ಈ ಮೊದಲ ಸೀಸನ್​ನ ಕೊನೆಯ ಸುತ್ತಿನಲ್ಲಿ ರೂಪೇಶ್ ಶೆಟ್ಟಿ ವಿಜೇತರಾಗಿದ್ದು, ಐದು ಲಕ್ಷ ರೂ. ಬಹುಮಾನ ಪಡೆದಿದ್ದಾರೆ. ಅಷ್ಟೇ ಅಲ್ಲ, ಸೆ. 24ರಿಂದ ಪ್ರಾರಂಭವಾಗಲಿರುವ ‘ಬಿಗ್ ಬಾಸ್ 9’ಗೆ ನೇರ ಎಂಟ್ರಿ ಪಡೆದಿದ್ದಾರೆ.

    ಕೊನೆಯ ಸುತ್ತಿಗೆ ರೂಪೇಶ್ ಶೆಟ್ಟಿ, ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್, ರಾಕೇಶ್ ಅಡಿಗ ಮತ್ತು ಸಾನಿಯಾ ಅಯ್ಯರ್ ಬಂದಿದ್ದರು. ಕಾರ್ಯಕ್ರಮವನ್ನು ನಡೆಸಿಕೊಡುವ ಸುದೀಪ್, ಈ ನಾಲ್ವರಲ್ಲಿ ರೂಪೇಶ್ ಅವರನ್ನು ವಿಜೇತರನ್ನಾಗಿ ಘೋಷಿಸಿದ್ದಾರೆ. ಇನ್ನು, ಕೊನೆಯ ಸುತ್ತಿಗೆ ಬಂದಿದ್ದ ನಾಲ್ವರೂ ಸ್ಪರ್ಧಿಗಳು ‘ಬಿಗ್ ಬಾಸ್ 9’ಕ್ಕೆ ನೇರ ಟಿಕೆಟ್ ಪಡೆದಿದ್ದಾರೆ. ಇನ್ನು, ‘ಬಿಗ್ ಬಾಸ್ 9’ರ ಮೊದಲ ಪ್ರೋಮೋ ಇತ್ತೀಚೆಗೆ ಬಿಡುಗಡೆಯಾಗಿದೆ.

    ಈ ಹಿಂದಿನ ಸೀಸನ್​ಗಳಲ್ಲಿ ಭಾಗವಹಿಸಿದ್ದ ಅನುಪಮಾ ಗೌಡ, ದೀಪಿಕಾ ದಾಸ್ ಮತ್ತು ಪ್ರಶಾಂತ್ ಸಂಬರ್ಗಿ ಸೂಟ್​ಕೇಸ್ ತೆಗೆದುಕೊಂಡು ‘ಬಿಗ್ ಬಾಸ್’ ಮನೆಗೆ ಹೊರಡುವ ದೃಶ್ಯಗಳನ್ನು ಪ್ರೋಮೋದಲ್ಲಿ ತೋರಿಸಲಾಗಿದ್ದು, ಆ ಮೂವರು ಸಹ ಇನ್ನೊಮ್ಮೆ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಇವರೆಲ್ಲರ ಜತೆಗೆ, ಇತ್ತೀಚೆಗಷ್ಟೇ ಅನಿರುದ್ಧ ಸಹ ಭಾಗವಹಿಸುತ್ತಾರೆ ಎಂಬ ಗುಸುಗುಸು ಇತ್ತು. ಆದರೆ, ‘ನಾನು ‘ಬಿಗ್ ಬಾಸ್’ಗೆ ಹೋಗುತ್ತಿಲ್ಲ’ ಎಂದು ಟ್ವೀಟ್ ಮಾಡುವ ಮೂಲಕ ಊಹಾಪೋಹಗಳಿಗೆ ಅನಿರುದ್ಧ ತೆರೆ ಎಳೆದಿದ್ದಾರೆ.

    ವಿಷ್ಣುವರ್ಧನ್​ ಜನ್ಮದಿನಂದು ‘ಯಜಮಾನೋತ್ಸವ’; ನಡೆಯಲಿದೆ ದಾಖಲೆಯ ಕಟೌಟ್​​ ಜಾತ್ರೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts