

ಬೆಂಗಳೂರು: ಜನವರಿ ಎರಡನೇ ವಾರದಲ್ಲಿ ಆಯೋಜಿಸಲಾಗಿರುವ ಪುತ್ರಿ ನಿಹಾರಿಕಾ ಆರತಕ್ಷತೆ ಕಾರ್ಯಕ್ರಮಕ್ಕೆ ಸಿಎಂ ಯಡಿಯೂರಪ್ಪ ಅವರಿಗೆ ನಟ ಹಾಗೂ ವಿಜಯವಾಣಿ ಅಂಕಣಕಾರ ರಮೇಶ್ ಅರವಿಂದ್ ದಂಪತಿ ಆಮಂತ್ರಣ ನೀಡಿ ಆಹ್ವಾನಿಸಿದರು.
ನಟ-ನಿರ್ದೇಶಕ ಮತ್ತು ರಮೇಶ್ ಅರವಿಂದ್ ಅವರ ಪುತ್ರಿ ನಿಹಾರಿಕಾ ಅವರ ವಿವಾಹ ಅಕ್ಷಯ್ ಅವರ ಜತೆಗೆ ಡಿ. 28ರಂದು ನೆರವೇರಿತ್ತು. ಬನ್ನೇರುಘಟ್ಟ ಬಳಿಯಿರುವ ಮಿರಾಯಾ ಗ್ರೀನ್ಸ್ ರೆಸಾರ್ಟ್ ನಲ್ಲಿ ಎರಡೂ ಕುಟುಂಬದವರ ಮತ್ತು ಹಿತೈಷಿಗಳ ಸಮ್ಮುಖದಲ್ಲಿ ಕೋವಿಡ್ 19 ನಿಯಮಾನುಸಾರ ಜರುಗಿತ್ತು. ಇದೀಗ ಇದೇ ಜೋಡಿಯ ಆರತಕ್ಷತೆ ಕಾರ್ಯಕ್ರಮ ಜನವರಿ ಎರಡನೇ ವಾರದಲ್ಲಿ ನಡೆಯಲಿದೆ.
ವಿವಾಹ ಕಾರ್ಯ ಕೇವಲ ಕುಟುಂಬದವರ ಸಮ್ಮುಖದಲ್ಲಿ ನೆರವೇರಿತ್ತು. ಬೆರಳೆಣಿಕೆ ಸಿನಿಮಾ ಮಂದಿ ಭಾಗವಹಿಸಿದ್ದರು. ಇದೀಗ ನಡೆಯಲಿರುವ ಆರತಕ್ಷತೆ ಕಾರ್ಯಕ್ರಮದಲ್ಲಿ ಸಿನಿಮಾರಂಗದ ಸ್ನೇಹಿತರು, ರಾಜಕೀಯ ಗಣ್ಯರು ಸೇರಿ ಹಲವರು ಭಾಗವಹಿಸಲಿದ್ದಾರೆ.