

ಮುಂಬೈ: ಬಾಲಿವುಡ್ ಬೆಡಗಿ ದೀಪಿಕಾ 35ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಅವರ ಜನ್ಮದಿನಕ್ಕೆ ಅಭಿಮಾನಿ ಬಳಗ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ನೆಚ್ಚಿನ ನಟಿಯ ಫೋಟೋಗಳನ್ನು ಶೇರ್ ಮಾಡಿಕೊಂಡು, ವಿಷ್ ಮಾಡುತ್ತಿದ್ದಾರೆ. ಅದೇ ರೀತಿ ಬಾಲಿವುಡ್ನ ಸಹೋದ್ಯೋಗಿಗಳೂ ದೀಪಿಕಾಗೆ ಶುಭಾಶಯ ರವಾನಿಸುತ್ತಿದ್ದಾರೆ. ಅದೇ ರೀತಿ ನಟಿ ಆಲಿಯಾ ಭಟ್ ಸಹ ದೀಪಿಕಾ ಬಗ್ಗೆ ವಿಶೇಷವಾದ ಬರಹದ ಮೂಲಕವೇ ಶುಭಾಶಯ ಕೋರಿದ್ದಾರೆ.
‘ಹ್ಯಾಪಿ ಬರ್ತ್ಡೇ ಡಿಪಿ! ನೀವು ಯಾವತ್ತಿದ್ದರೂ ನನ್ನ ಇನ್ಸ್ಪಿರೇಷನ್. ನಿಮ್ಮ ಸೌಂದರ್ಯ ಮತ್ತು ಶಕ್ತಿಯಿಂದಲೇ ನನ್ನೊಳಗೆ ಸ್ಫೂರ್ತಿಯಾಗಿರುತ್ತೀರಿ. ನಿಮ್ಮ ಸಾಹಸಮಯ ಪಯಣ ಹೀಗೆ ಮುಂದುವರಿಯಲಿ. ಲವ್ ಯೂ ಎಂದಿದ್ದಾರೆ.
ಅಂದಹಾಗೆ, ಇತ್ತೀಚೆಗಷ್ಟೇ ದೀಪಿಕಾ ಜತೆಗೆ ರಾಜಸ್ತಾನದ ರಣತಂಗೋರ್ನ ರಾಷ್ಟ್ರೀಯ ಉದ್ಯಾನದಲ್ಲಿ ಒಂದಷ್ಟು ಸಮಯವನ್ನು ಆಲಿಯಾ ಕಳೆದಿದ್ದರು. ಇದೀಗ ಅವರ ಜನ್ಮದಿನದ ನಿಮಿತ್ತ ಶುಭಾಶಯ ಕೋರಿದ್ದಾರೆ. ಇತ್ತ ಬಾಲಿವುಡ್ ನಟಿಯರಾದ ಕತ್ರಿನಾ ಕೈಫ್, ಸೋನಾಕ್ಷಿ ಸಿನ್ಹಾ ಸೇರಿ ಬಹುತೇಕ ನಟಿಯರು ದೀಪಿಕಾಗೆ ಶುಭಾಶಯ ತಿಳಿಸಿದ್ದಾರೆ. (ಏಜೆನ್ಸೀಸ್)