

ಬೆಂಗಳೂರು: ತಮಿಳು ನಟರಾದ ವಿಜಯ್ ಮತ್ತು ವಿಜಯ್ ಸೇತುಪತಿ ಅಭಿನಯದ ‘ಮಾಸ್ಟರ್’ ಚಿತ್ರವನ್ನು ಜನವರಿ 13ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡವು ಕಳೆದ ವಾರ ಘೋಷಿಸಿದಾಗ ಹಲವರಿಗೆ ಆಶ್ಚರ್ಯವಾಗಿತ್ತು. ‘ಮಾಸ್ಟರ್’ ಹೇಳಿಕೇಳಿ ದೊಡ್ಡ ಬಜೆಟ್ನ, ದೊಡ್ಡ ಸ್ಟಾರ್ಗಳ ಚಿತ್ರ. ಚಿತ್ರಮಂದಿರಗಳಲ್ಲಿ ಈಗಿರುವ ಶೇ.50ರಷ್ಟು ಹಾಜರಾತಿ ಪದ್ಧತಿಯಲ್ಲಿ ಚಿತ್ರ ಬಿಡುಗಡೆ ಮಾಡಿದರೆ, ಹಾಕಿದ ದುಡ್ಡು ಬರುತ್ತದಾ ಎಂಬ ಪ್ರಶ್ನೆ ಕಾಡಿತ್ತು. ಇದೀಗ ತಮಿಳುನಾಡು ಸರ್ಕಾರವು ತಕ್ಷಣಕ್ಕೆ ಜಾರಿಗೆ ಬರುವಂತೆ, ಏಕಪರದೆಯ ಚಿತ್ರಮಂದಿರಗಳಲ್ಲಿ ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ
ಈಗಾಗಲೇ ಕನ್ನಡದಲ್ಲಿ ಹಲವು ದೊಡ್ಡ ಬಜೆಟ್ನ ಚಿತ್ರಗಳು ಬಿಡುಗಡೆಯಾಗಲು ಸಜ್ಜಾಗಿವೆ. ಈ ಪೈಕಿ ಧ್ರುವ ಅಭಿನಯದ ‘ಪೊಗರು’ ಚಿತ್ರ ಜನವರಿ 29ಕ್ಕೆ ಬಿಡುಗಡೆಯಾಗಲಿದೆ ಎಂದು ನಿರ್ವಪಕ ಗಂಗಾಧರ್ ಖಚಿತಪಡಿಸಿದ್ದಾರೆ. ದುನಿಯಾ ವಿಜಯ್ ‘ಸಲಗ’ ಚಿತ್ರ ಮಾರ್ಚ್ ನಲ್ಲಿ ಬಿಡುಗಡೆಯಾಗಲಿದೆ. ಏ. 1ಕ್ಕೆ ಪುನೀತ್ ‘ಯುವರತ್ನ’ ಏ.23ಕ್ಕೆ ಸುದೀಪ್ ‘ಕೋಟಿಗೊಬ್ಬ 3’ ಬಿಡುಗಡೆ ಆಗಲಿದೆ. ಆ ನಂತರ ಶ್ರೀಮುರಳಿ ‘ಮದಗಜ’, ಶರಣ್ ‘ಅವತಾರ್ ಪುರುಷ’, ದರ್ಶನ್ ‘ರಾಬರ್ಟ್’, ಉಪೇಂದ್ರ ‘ಬುದ್ಧಿವಂತ 2’, ರಕ್ಷಿತ್ ಶೆಟ್ಟಿ ‘777 ಚಾರ್ಲಿ’ ಚಿತ್ರಗಳು ಬಿಡುಗಡೆಯಾಗಲಿವೆ ಎಂದು ಹೇಳಲಾಗುತ್ತಿದೆ. ಇನ್ನು, ಬಹುನಿರೀಕ್ಷಿತ ‘ಕೆಜಿಎಫ್ - ಚಾಪ್ಟರ್ 2’ ಆಗಸ್ಟ್ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.