More

    ಪುಸ್ತಕಗಳಿಂದ ಇತಿಹಾಸ ಅರಿಯಲು ಸಾಧ್ಯ

    ಸೇಡಂ: ಪುಸ್ತಕಗಳ ಅಧ್ಯಯನದಿಂದ ಇತಿಹಾಸ ಅರಿಯಲು ಸಾಧ್ಯ. ಯುವ ಪೀಳಿಗೆ ಪುಸ್ತಕ ಓದಲು ಮುಂದಾಗಬೇಕು ಎಂದು ಕೊತ್ತಲ ಬಸವೇಶ್ವರ ದೇವಾಲಯದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.

    ಪಟ್ಟಣದ ಸಜ್ಜನಶೆಟ್ಟಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಸಂಸ್ಕೃತಿ ಪ್ರಕಾಶನ ಆಯೋಜಿಸಿದ ರೂಪಾದೇವಿ ಬಂಗಾರ ರಚಿತ ಮುಡಿಪು ಕಾದಂಬರಿ ಬಿಡುಗಡೆಗೊಳಿಸಿ ಮಾತನಾಡಿ, ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಮಹಿಳೆಯರ ತ್ಯಾಗ ಬಲಿದಾನದ ಕಥಾನಕ ಹೊಂದಿದ ಮುಡಿಪು ಮಹತ್ವದ ಕಾದಂಬರಿಯಾಗಿದೆ. ಮಹಿಳೆಯರಲ್ಲಿ ಸ್ವಾಭಿಮಾನ, ದೇಶಪ್ರೇಮ ಸಾಕಷ್ಟ ಇರುತ್ತದೆ. ಅಗತ್ಯ ಬಿದ್ದಾಗ ಅದನ್ನು ಪ್ರದರ್ಶಿಸುವಲ್ಲಿ ಅವರು ಹಿಂದೇಟು ಹಾಕುವುದಿಲ್ಲ. ರಜಾಕಾರರ ಜತೆ ಶಾಮೀಲಾದ ಸ್ವತ: ತನ್ನ ಗಂಡ, ಮಕ್ಕಳನ್ನೇ ಎದುರಿಸುವ ಅತ್ಯಂತ ಸೂಕ್ಮ ಕಥೆಯನ್ನು ತಾಳ್ಮೆಯಿಂದ ಕಾದಂಬರಿಗಾರ್ತಿ ರೂಪಾದೇವಿ ನಿರೂಪಣೆ ಮಾಡಿದ್ದಾರೆ ಎಂದರು.

    ಬಂಗಾರದ ತೇರು ಕವನ ಸಂಕಲನ ಬಿಡುಗಡೆ ಮಾಡಿದ ಹಾಲಪ್ಪಯ್ಯ ಮಠದ ಶ್ರೀ ಪಂಚಾಕ್ಷರ ಸ್ವಾಮೀಜಿ, ಬಂಗಾರ ವ್ಯಾಪಾರ ಮಾಡುವ ಮನೆತನದ ರೂಪಾದೇವಿ, ಬಂಗಾರದ ಮೌಲ್ಯವಿರುವ ಕವನಗಳನ್ನು ರಚಿಸಿ, ಕನ್ನಡ ಸಾಹಿತ್ಯ ಲೋಕಕ್ಕೆ ಉತ್ತಮ ಕೃತಿ ನೀಡಿದ್ದಾರೆ ಎಂದು ಬಣ್ಣಿಸಿದರು.

    ಕವನ ಸಂಕಲನವನ್ನು ಲೇಖಕಿ ಆರತಿ ಕಡಗಂಚಿ ಮತ್ತು ಕಾದಂಬರಿ ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರು ಪರಿಚಯಿಸಿದರು. ಶ್ರೀ ಶಿವಶಂಕರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಿದ್ದಪ್ಪ ತಳ್ಳಳ್ಳಿ, ಲೇಖಕಿ ರೂಪಾದೇವಿ ಬಂಗಾರ ಮಾತನಾಡಿದರು.

    ಅಮರಮ್ಮ ಪ್ರಾರ್ಥಿಸಿದರು. ಸಂಸ್ಕೃತಿ ಪ್ರಕಾಶನದ ಅಧ್ಯಕ್ಷ ಪ್ರಭಾಕರ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಚೈತ್ರಾ ಬಂಗಾರ ಸ್ವಾಗತಿಸಿದರು. ಬರಹಗಾರರ ಸಂಘದ ಅಧ್ಯಕ್ಷೆ ರುಕ್ಮಿಣಿ ಕಾಳಗಿ ನಿರೂಪಣೆ ಮಾಡಿದರು. ಈಶ್ವರಿ ಜೈಸಂತೋಷ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts