ಸಿನಿಮಾ

ಬೆಂಗಳೂರಿನಲ್ಲಿ ಮಳೆ ಆರ್ಭಟ; ನೀರು ನುಗ್ಗಿ ನಟ ಜಗ್ಗೇಶ್ BMW ಕಾರು ಮುಳುಗಡೆ

ಬೆಂಗಳೂರು: ನಿನ್ನೆ ಸಂಜೆ ಸುರಿದ ಭಾರೀ ಮಳೆಯಿಂದ ಬೆಂಗಳೂರಿನಲ್ಲಿ ಸಾಕಷ್ಟು ಅವಾಂತರ ಆಗಿದೆ. ಸಾವು- ನೋವು, ಕಟ್ಟಡ ಕುಸಿತದಿಂದಾಗಿ ಜನರು ಪರದಾಟ ನಡೆಸಿದ್ದಾರೆ. ಬಿಜೆಪಿ ರಾಜ್ಯಸಭಾ ಸದಸ್ಯ ನಟ ಜಗ್ಗೇಶ್ ಅವರಿಗೂ ಅಕಾಲಿಕ ಮಳೆ ಅವಾಂತರದ ಬಿಸಿ ತಟ್ಟಿದೆ.

ನಿನ್ನೆ ಸುರಿದ ಅಕಾಲಿಕ ಮಳೆಯಿಂದಾಗಿ ನೀರು ಮನೆಗೆ ನುಗ್ಗಿ ನಟ ಜಗ್ಗೇಶ್ ಕಾರು ಮುಳುಗಡೆಯಾಗಿದೆ. ಸ್ನೇಹಿತ ಮುರುಳಿ ಮನೆ ಬಳಿ ನಿಲ್ಲಿಸಿದ್ದ ಜಗ್ಗೇಶ್ ಅವರ ಬಿಎಂಡಬ್ಯೂ5 ಕಾರು ನೀರಿನಲ್ಲಿ ಮುಳುಗಡೆಯಾಗಿದೆ. ಈ ಕುರಿತಾಗಿ ಜಗ್ಗೇಶ್​​ ಅವರು ಸೋಶಿಯಲ್​​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

 ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಬಲಗೈ ಬಂಟ ಅರೆಸ್ಟ್..!

“ನನ್ನ ಮನೆಯ ರಿಪೇರಿ ಕಾರ್ಯ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಸ್ನೇಹಿತ ಮುರಳಿ ಮನೆಯ ಸೆಲ್ಲಾರ್ ನಲ್ಲಿ ನಿಲ್ಲಿಸಿದ್ದ ನನ್ನ ಬಿಎಂಡಬ್ಯೂ5 ಕಾರು ಅಕಾಲಿಕ ಮಳೆ ನೀರಿನಲ್ಲಿ ಮುಳುಗಡೆ ಆಯಿತು. ಕೊನೆಗೂ ಹೇಗೋ ಸ್ನೇಹಿತ ಮುರಳಿ ಅವರು ಪಂಪ್ ಬಳಸಿ ನೀರು ಹೊರ ಹಾಕುವ ಕೆಲಸ ಮಾಡಿದ್ದಾರೆ. ಇಂಥ ಮಳೆ ಈ ತಿಂಗಳಲ್ಲಿ ಬಂದದ್ದು, ಆಶ್ಚರ್ಯ”.. ಎಂದು ನಟ ಟ್ವೀಟ್​​ ಮಾಡಿ ಕಾರು ನೀರಿನಲ್ಲಿ ಮುಳುಗುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಹಲವು ಭಾಗಗಳಲ್ಲಿ ಇಂದು ಮಧ್ಯಾಹ್ನ ಮೂರು ಗಂಟೆ ವೇಳೆ ಭರ್ಜರಿ ಮಳೆಯಾಗಿದ್ದು, ಕೆಲ ಭಾಗಗಳಲ್ಲಿ ಅಲ್ಲಿಕಲ್ಲು ಸಹಿತ ಮಳೆ ಸುರಿದಿದೆ. ಏಕಾಏಕಿ ಸುರಿದ ಮಳೆಯಿಂದ ವಾಹನ ಸವಾರರು ಪರದಾಟ ನಡೆಸಿದ್ದು, ಕಪ್ಪು ಕಾರ್ಮೋಡಗಳು ಕವಿದು ಭರ್ಜರಿ ಮಳೆಯಾದ ಕಾರಣ ವಾಹನ ಸವಾರರು ದಾರಿ ಕಣದೆ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸುವಂತೆ ಆಗಿತ್ತು

ಒಂದೇ ಗ್ರಾಮದ ನಾಲ್ವರು ಮಕ್ಕಳು ಕಣ್ಮರೆ..!

Latest Posts

ಲೈಫ್‌ಸ್ಟೈಲ್