ಬ್ಯಾಡ್ ಮ್ಯಾನರ್ಸ್‌ಗೆ ದರ್ಶನ್ ಸಾಥ್ ; ಭಾನುವಾರ ರಿಲೀಸ್​ ಆಗಲಿದೆ ಚಿತ್ರದ ಟ್ರೇಲರ್​

WhatsApp Image 2023-11-09 at 10.42.22 AM
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

‘ದುನಿಯಾ’ ಸೂರಿ ಆ್ಯಕ್ಷನ್-ಕಟ್ ಹೇಳುತ್ತಿರುವ ಅಭಿಷೇಕ್ ಅಂಬರೀಷ್, ರಚಿತಾ ರಾಮ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ‘ಬ್ಯಾಡ್ ಮ್ಯಾನರ್ಸ್’. ಈಗಾಗಲೇ ಚಿತ್ರದ ಮೂರು ಹಾಡುಗಳು ಹಾಗೂ ಟೀಸರ್ ಬಿಡುಗಡೆಯಾಗಿದ್ದು, ಅಭಿಮಾನಿಗಳ ಮೆಚ್ಚುಗೆ ಪಡೆದುಕೊಂಡಿವೆ. ಇದು ಕೆಲವು ನೈಜ ಘಟನೆಗಳಿಂದ ಸ್ಫೂರ್ತಿ ಪಡೆದಿರುವ ಸಿನಿಮಾ ಎಂದು ಈ ಹಿಂದೆ ನಿರ್ದೇಶಕ ಸೂರಿ ಹೇಳಿಕೊಂಡಿದ್ದರು. ಈ ಚಿತ್ರಕ್ಕಾಗಿ ಅಭಿಷೇಕ್ ಭರ್ಜರಿ ಕಸರತ್ತು ಮಾಡಿ, ತೂಕ ಇಳಿಸಿಕೊಂಡು ಪಾತ್ರಕ್ಕೆ ಸಿದ್ಧರಾಗಿದ್ದಾರಂತೆ. ಇದೇ ತಿಂಗಳ 24ಕ್ಕೆ ಚಿತ್ರ ತೆರೆಗೆ ಬರಲು ಸಿನಿಮಾ ರೆಡಿಯಾಗಿದೆ.

ಅದಕ್ಕೂ ಮುನ್ನ ಇದೇ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ನ.12ರಂದು ಸಂಜೆ 7 ಗಂಟೆಗೆ ಚಿತ್ರದ ಟ್ರೇಲರ್ ರಿಲೀಸ್ ಆಗಲಿದೆ. ಇತ್ತೀಚೆಗೆ ‘ಟಗರುಪಲ್ಯ’, ‘ಗರಡಿ’ ಸಿನಿಮಾಗಳ ಟ್ರೇಲರ್ ರಿಲೀಸ್ ಮಾಡಿ ಶುಭಕೋರಿದ ನಟ ದರ್ಶನ್ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಟ್ರೇಲರ್ ರಿಲೀಸ್ ಮಾಡಿ ಚಿತ್ರತಂಡಕ್ಕೆ ಸಾಥ್ ನೀಡಲಿದ್ದಾರೆ.

ಅಭಿಷೇಕ್, ರಚಿತಾ ಜತೆ ಚಿತ್ರದಲ್ಲಿ ತಾರಾ ಅನುರಾಧ, ದತ್ತಣ್ಣ, ಶರತ್ ಲೋಹಿತಾಶ್ವ, ಕುರಿ ಪ್ರತಾಪ್, ಮಿತ್ರ, ಮೋಹನ್ ಜುನೇಜ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ, ಮಾಸ್ತಿ ಸಂಭಾಷಣೆ, ರವಿವರ್ಮ ಸಾಹಸ ಸಂಯೋಜನೆ, ದೀಪು ಎಸ್. ಕುಮಾರ್ ಸಂಕಲನವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net