ಭಗವಂತ ಕೇಸರಿ' ಚಿತ್ರದ 2ದಿನದ ಕಲೆಕ್ಷನ್‌ 27ಕೋಟಿ ರೂ.: ಬಾಲಕೃಷ್ಣ ಸಂಭಾವನೆ ಎಷ್ಟು?

Bhagvanth Kesari
Published on

ಹೈದರಾಬಾದ್​: ತೆಲುಗು ಆಕ್ಷನ್ ಸಿನಿಮಾ 100ಕೋಟಿ ವೆಚ್ಚದ 'ಭಗವಂತ ಕೇಸರಿ' ಅ.19 ರಂದು ವಿಶ್ವದಾದ್ಯಂತ 1450 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಮೊದಲ ಎರಡು ದಿನಗಳ ಕಲೆಕ್ಷನ್‌ 27.17 ಕೋಟಿ ರೂ.ಗಳಿಸಿದೆ. ಇನ್ನು ಈ ಚಿತ್ರಕ್ಕೆ ನಟ ನಂದಮೂರಿ ಬಾಲಕೃಷ್ಣ ಸೇರಿದಂತೆ ಇತರ ಕಲಾವಿದರು ತೆಗೆದುಕೊಂಡ ಸಂಭಾವನೆ ಬಹಿರಂಗಗೊಂಡಿದ್ದು, ಎಂಥವರನ್ನೂ ಹೌಹಾರುವಂತೆ ಮಾಡಿದೆ.

ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ, ಕಾಜಲ್ ಅಗರ್ವಾಲ್, ಶ್ರೀಲೀಲಾ ಮತ್ತು ಅರ್ಜುನ್ ರಾಂಪಾಲ್ ಮತ್ತಿತರರು ಅಭಿನಯಿಸಿದ್ದಾರೆ. ಇದರಲ್ಲಿ ನಟ ಬಾಲಕೃಷ್ಣ ಅವರು ತಮ್ಮ ಪಾತ್ರಕ್ಕಾಗಿ ಬರೋಬ್ಬರಿ 20 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

ನಟಿ ಕಾಜಲ್ ಅಗರ್ವಾಲ್ ಸಹ ದಕ್ಷಿಣ ಭಾರತದ ಬೇಡಿಕೆಯ ನಟಿಯಾಗಿದ್ದು, ಚಿತ್ರದಲ್ಲಿ ಕಾತ್ಯಾಯನಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇದಕ್ಕೆ ಅವರು 2 ಕೋಟಿ ರೂ. ಪಡೆದಿದ್ದಾರೆ. ವಿಶೇಷವೆಂದರೆ ಹೀರೋಯಿನ್​ ಪಾತ್ರಕ್ಕಿಂತ ಮಗಳ ಪಾತ್ರ ನಿರ್ವಹಿಸಿರುವ ತೆಲುಗು ಚಿತ್ರರಂಗದಲ್ಲಿ ಉದಯೋನ್ಮುಖ ತಾರೆಯಾಗಿರುವ ಶ್ರೀಲೀಲಾ 2.5ಕೋಟಿ ರೂ.ಪಡೆದಿದ್ದಾರಂತೆ. ನಾಯಕಿ ಪಾತ್ರಕ್ಕೆ ಬಹುಬೇಡಿಕೆ ಇರುವ ಈಕೆ ಮಗಳ ಪಾತ್ರ ನಿರ್ವಹಿಸಿದ್ದು, ಸಂಭಾವನೆ ಏರಿಕೆಗೆ ಕಾರಣ ಎನ್ನಲಾಗಿದೆ. ಚಿತ್ರಕ್ಕೆ ಅನಿಲ್ ರವಿಪುಡಿ ನಿರ್ದೇಶಿಸಿದ್ದಾರೆ ಮತ್ತು ಶೈನ್ ಸ್ಕ್ರೀನ್ಸ್ ಬ್ಯಾನರ್ ಅಡಿಯಲ್ಲಿ ಸಾಹು ಗರಪತಿ ಮತ್ತು ಹರೀಶ್ ಪೆದ್ದಿ ನಿರ್ಮಿಸಿದ್ದಾರೆ. ಇದರಲ್ಲಿ ನಂದಮೂರಿ ಬಾಲಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಅನಿಲ್ ರವಿಪುಡಿ ನಿರ್ದೇಶಿಸಿದ್ದು, ಶೈನ್ ಸ್ಕ್ರೀನ್ಸ್ ಬ್ಯಾನರ್ ಅಡಿಯಲ್ಲಿ ಸಾಹು ಗರಪತಿ ಮತ್ತು ಹರೀಶ್ ಪೆದ್ದಿ ನಿರ್ಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net