ರೊಮ್ಯಾಂಟಿಕ್​ ಸಿನಿಮಾದಲ್ಲಿ ಆನಂದ್​-ವೈಷ್ಣವಿ ಚೈತನ್ಯ; ಮತ್ತೊಮ್ಮೆ ಮೋಡಿ ಮಾಡಲಿದ್ಯಾ 'ಬೇಬಿ' ಜೋಡಿ?

Untitled design - 2023-10-20T213443.375
Published on

ಆಂಧ್ರಪ್ರದೇಶ: ವಿಜಯ್​ ದೇವರಕೊಂಡ ಸಹೋದರ ನಟ ಆನಂದ್ ದೇವರಕೊಂಡ ಮತ್ತು ನಟಿ ವೈಷ್ಣವಿ ಚೈತನ್ಯ ಮುಖ್ಯಭೂಮಿಕೆಯಲ್ಲಿ ಅಭಿನಯದ 'ಬೇಬಿ' ಸಿನಿಮಾ ಟಾಲಿವುಡ್​ ಅಂಗಳದಲ್ಲಿ ಭಾರೀ ಸದ್ದು ಮಾಡುವ ಮೂಲಕ ಬಾಕ್ಸ್​ಬಸ್ಟರ್​ ಚಿತ್ರವಾಗಿ ಹೊರಹೊಮ್ಮಿತು.

ಪ್ರೇಕ್ಷಕರ ಕಣ್ಣಂಚಲಿ ನೀರು ತುಂಬಿಸಿದ ಈ ಚಿತ್ರಕ್ಕೆ ಯುವಜನತೆ ಫಿದಾ ಆಗಿದ್ದರು. ಆನಂದ್​-ವೈಷ್ಣವಿ ಜೋಡಿ ಮೆಚ್ಚಿದ್ದ ಸಿನಿಪ್ರಿಯರಿಗೆ ಇದೀಗ ಮತ್ತೊಮ್ಮೆ ಈ ಜೋಡಿಯನ್ನು ಒಟ್ಟಿಗೆ ತೆರೆ ಮೇಲೆ ನೋಡುವ ಸನ್ನಿವೇಶ ಎದುರಾಗಿದೆ.

ಸಾಯಿ ರಾಜೇಶ್ ನಿರ್ದೇಶನದ ರೊಮ್ಯಾಂಟಿಕ್ ಸಿನಿಮಾ 'ಬೇಬಿ' ಸೆನ್ಸೇಷನಲ್ ಹಿಟ್ ಆಗುವುದರ ಜತೆಗೆ ಸಿನಿಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆಗಳನ್ನು ಪಡೆದುಕೊಂಡಿತ್ತು. ಇದೀಗ ಬೇಬಿ ಜೋಡಿಯನ್ನೇ ಮುಂದಿಟ್ಟುಕೊಂಡು ಮತ್ತೊಂದು ರೊಮ್ಯಾಂಟಿಕ್​ ಚಿತ್ರಕ್ಕೆ ಕೈ ಹಾಕಿರುವ ರಾಜೇಶ್, ಚಿತ್ರದ ಹೊಸ ಪೋಸ್ಟರ್​ ಕೂಡ ಅನಾವರಣಗೊಳಿಸಿದ್ದಾರೆ.

ಬೇಬಿ ಸಿನಿಮಾದಲ್ಲಿ ಇದ್ದ ತಂಡವೇ ಈ ಚಿತ್ರದಲ್ಲೂ ಇರಲಿದೆ ಎಂಬ ಹೇಳಲಾಗಿದ್ದು, ನಿರ್ದೇಶಕ ಸಾಯಿ ರಾಜೇಶ್ ತಮ್ಮ ಮುಂದಿನ ಹೆಸರಿಡದ ರೊಮ್ಯಾಂಟಿಕ್​ ಚಿತ್ರಕ್ಕೆ ಸೂಪರ್​ ಹಿಟ್​ ಜೋಡಿ ವೈಷ್ಣವಿ ಚೈತನ್ಯ ಮತ್ತು ಆನಂದ್ ದೇವರಕೊಂಡ ಅವರಿಗೆ ನಾಯಕ ಮತ್ತು ನಾಯಕಿ ಪಾತ್ರಗಳನ್ನು ನೀಡಿದ್ದಾರೆ. ಇದರ ಬೆನ್ನಲ್ಲೇ ತಯಾರಕರು ಹೊಸ ಪೋಸ್ಟರ್ ಹಂಚಿಕೊಂಡಿದ್ದು, ಶೀಘ್ರವೇ ಚಿತ್ರದ ಚಿತ್ರೀಕರಣ ಪ್ರಾರಂಭ ಎಂದು ತಿಳಿಸಿದ್ದಾರೆ.

ಹೆಸರಿಡದ ಈ ಚಿತ್ರವನ್ನು ರವಿ ನಂಬೂರಿ ನಿರ್ದೇಶಿಸಲಿದ್ದು, ಮಾಸ್ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಸಾಯಿ ರಾಜೇಶ್ ಮತ್ತು ಎಸ್‌ಕೆಎನ್ ಚಿತ್ರದ ನಿರ್ಮಾಣ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ. ತಾತ್ಕಾಲಿಕವಾಗಿ ಈ ಚಿತ್ರ 2024ರ ಏಪ್ರಿಲ್​ ಸಮಯದಲ್ಲಿ ರಿಲೀಸ್​ ಆಗಲಿದೆ ಎಂದು ನಿರೀಕ್ಷಿಸಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net