ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣ ಬಳಿ ಅಸ್ಸಾಂ ಮೂಲದ ಕಾರ್ಮಿಕ ದೀಪಕ್ ಬೆಂಗರ(34) ಎಂಬಾತನನ್ನು ಕೊಲೆಗೈದ ಆರೋಪಿ ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ಕುಂಬ್ರಂಗೆ ನಿವಾಸಿ ಬಾಬು ಯಾನೆ ರುದ್ರ(68) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೋಪದ ಭರದಲ್ಲಿ ದೊಣ್ಣೆಯಿಂದ ಹೊಡೆದು ಕೊಲೆಗೈದಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಸಂಶಯದ ಆಧಾರದಲ್ಲಿ ಆತನನ್ನು ಪೊಲೀಸರು ಮಂಗಳವಾರ ವಶಕ್ಕೆ ಪಡೆದಿದ್ದರು.
ದೀಪಕ್ ಬೆಂಗರ ಬೀದಿಬದಿ, ಜನವಸತಿ ಇಲ್ಲದ ಕಟ್ಟಡದಲ್ಲಿ ಮಲಗುತ್ತಿದ್ದರಿಂದ ಆತನ ಒಡನಾಡಿಗಳ ಬಗ್ಗೆ ತಿಳಿಯದೆ ಹಂತಕನನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಕಗ್ಗಂಟಾಗಿತ್ತು. ಬಸ್ ನಿಲ್ದಾಣ ಪರಿಸರದ ಸಿಸಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದಾಗ ಆರೋಪಿಯ ಚಲನವಲನ ಕಂಡುಬಂದಿತ್ತು. ಆತನನ್ನು ಉಳ್ಳಾಲ ತಾಲೂಕಿನ ದೇರಳಕಟ್ಟೆ ಎಂಬಲ್ಲಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಒಪ್ಪಿಕೊಂಡಿದ್ದಾನೆ.
ಕೊನೆಗೂ ಬೆಳ್ತಂಗಡಿಗೆ ಇಂದಿರಾ ಕ್ಯಾಂಟೀನ್ : ಆರಂಭಕ್ಕೆ ದಿನಗಣನೆ : ಭರದಿಂದ ಸಾಗುತ್ತಿದೆ ಕಾಮಗಾರಿ