Money : ಇಂದು ಹಣವಿಲ್ಲದೆ ಯಾವುದಕ್ಕೂ ಬೆಲೆ ಇಲ್ಲ ಮತ್ತು ಯಾವ ಕೆಲಸವು ಕೂಡ ನಡೆಯುವುದಿಲ್ಲ. ಇಡೀ ಜಗತ್ತು ಇಂದು ನೋಟಿನ ಮೇಲೆ ನಿಂತಿದೆ. ಎಲ್ಲವನ್ನು ಹಣದಿಂದ ಅಳೆಯುವ ಮಂದಿಯೇ ಹೆಚ್ಚು. ಅದರಲ್ಲೂ ಹಣಕ್ಕಾಗಿ ವಂಚನೆ, ಸುಲಿಗೆ ಮತ್ತು ಕೊಲೆ ಸೇರಿದಂತೆ ಅನೇಕ ಅಪರಾಧಗಳಿಗೂ ಕೆಲವರು ಇಳಿಯುತ್ತಾರೆ. ಇದೇ ಹಣದ ಕಾರಣಕ್ಕಾಗಿ ಅನೇಕರು ಜೈಲುಪಾಲಾಗಿದ್ದೂ ಇದೆ. ನಿಮ್ಮ ಬಳಿ ಹಣ ಇದ್ದರೆ ಯಾರು ಬೇಕಾದರೂ ನಿಮಗೆ ಗೌರವ ಕೊಡುತ್ತಾರೆ ಅನ್ನೋ ಮಾತುಗಳನ್ನು ಆಗಾಗ ಕೇಳುತ್ತಲೇ ಇರುತ್ತೇವೆ. ಹೀಗಾಗಿ ಸಾಕಷ್ಟು ಮಂದಿ ಹಣದ ಹಿಂದೆ ಬಿದ್ದಿದ್ದಾರೆ.
ಅಂದಹಾಗೆ ಲಕ್ಷ್ಮೀ ದೇವಿ ಎಲ್ಲರಿಗೂ ಒಲಿಯಲ್ಲ ಎಂಬುದೇ ಕಟು ವಾಸ್ತವ. ಆದರೆ, ಮನೋವಿಜ್ಞಾನದ ಪ್ರಕಾರ, ಈ ಗುಣಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳು ತಮ್ಮ ಜೀವನದಲ್ಲಿ ಹೆಚ್ಚು ಹಣವನ್ನು ಗಳಿಸುತ್ತಾರೆ. ಹಾಗಾದ್ರೆ ಆ ಗುಣಗಳು ಯಾವುವು ಎಂಬುದನ್ನು ನಾವೀಗ ತಿಳಿಯೋಣ.
ತಮಗೆ ಸಿಗುವ ಪ್ರತಿ ಅವಕಾಶದಲ್ಲೂ ಹಣ ಗಳಿಸಲು ಆಶಿಸುವವರು ಜೀವನದಲ್ಲಿ ಹೆಚ್ಚು ಸಂಪಾದನೆ ಮಾಡುತ್ತಾರೆ. ಬೇಗ ಶ್ರೀಮಂತರಾಗಬೇಕು ಎಂಬ ಗುರಿ ಇಟ್ಟುಕೊಂಡವರು ಕೂಡ ಹಣವನ್ನು ಗಳಿಸುತ್ತಾರೆ. ಏಕೆಂದರೆ, ಅವರ ಗಮನವೆಲ್ಲ ದುಡಿಮೆ ಅಥವಾ ಹಣ ಸಂಪಾದನೆ ಕಡೆ ಇರುತ್ತದೆ. ಅದೇ ರೀತಿ ಯಾರಿಗೂ ಉಪಕಾರ ಮಾಡದ ಮತ್ತು ತಮ್ಮ ಸ್ವಾರ್ಥವನ್ನು ಬಯಸುವ ವ್ಯಕ್ತಿಗಳು ಹೆಚ್ಚು ಹಣ ಸಂಪಾದಿಸುತ್ತಾರೆ.
ಇನ್ನು ಯಾರು ಹಣದ ವಿಚಾರದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ಅನುಸರಿಸುತ್ತಾರೋ ಅಂತಹ ಜನರು ಕೂಡ ಹೆಚ್ಚು ಹಣವನ್ನು ಗಳಿಸುತ್ತಾರೆ. ಹಣದ ದೃಷ್ಟಿಯಿಂದ ಪ್ರತಿಯೊಂದು ಸಮಯಕ್ಕೂ ಯಾರು ಹೆಚ್ಚು ಬೆಲೆ ನೀಡುತ್ತಾರೋ ಅಂತಹವರು ಹಣ ಮಾಡುವಲ್ಲಿ ಮುಂದಿರುತ್ತಾರೆ. ಅಲ್ಲದೆ, ಅವರು ಹಣ ಮಾಡಲು ಹೆಚ್ಚು ಸಮಯವನ್ನೇ ತೆಗೆದುಕೊಳ್ಳುವುದಿಲ್ಲ.
ಹಣಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವವರ ಬಳಿ ಹೆಚ್ಚು ಹಣವಿರುತ್ತದೆ. ಸಂಪಾದಿಸಿದ ಹಣವನ್ನು ಸರಿಯಾಗಿ ಖರ್ಚು ಮಾಡುವವರು ಮತ್ತು ಪ್ರತಿ ಒಂದು ರೂಪಾಯಿಗೂ ಬೆಲೆ ನೀಡಿ, ಉಳಿತಾಯ ಮಾಡುವವರು ಕೂಡ ಹೆಚ್ಚು ಹಣವನ್ನು ಜೀವನದಲ್ಲಿ ಸಂಪಾದಿಸುತ್ತಾರೆ ಎಂದು ಮನೋವಿಜ್ಞಾನ ಹೇಳುತ್ತದೆ.
ಈ ಜಗತ್ತಿನಲ್ಲಿ ದುಡ್ಡೇ ಮುಖ್ಯವಾದರು ಕೂಡ ಹಣದ ಹಿಂದೆ ಬಿದ್ದು ಅಮೂಲ್ಯ ಜೀವನದನ್ನು ಕಳೆದುಕೊಳ್ಳಬಾರದು. ಏಕೆಂದರೆ, ಸಂತೋಷ ಎಂಬುದು ಹಣ ಕೊಟ್ಟು ಖರೀದಿ ಮಾಡುವ ವಸ್ತುವಲ್ಲ ಎಂಬುದು ಕೂಡ ವಾಸ್ತವದ ಸಂಗತಿಯಾಗಿದೆ. ಹಣ ಗಳಿಸುವ ಆಸೆ ಇರಲಿ ಆದರೆ, ದುರಾಸೆ ಇರಕೂಡದು. ಆಸೆಯೇ ದುಃಖಕ್ಕೆ ಮೂಲ ಎನ್ನುವಂತೆ ದುರಾಸೆ ದುರಂತಕ್ಕೆ ಮೂಲವಾಗುತ್ತದೆ. (ಏಜೆನ್ಸೀಸ್)
ಸೌತ್ ಬ್ಯೂಟಿ ತ್ರಿಷಾಗೆ ತಂದೆ, ಸಹೋದರ, ಅಂಕಲ್, ಲವರ್ ಆಗಿ ನಟಿಸಿದ ಏಕೈಕ ನಟ ಇವರೇ ನೋಡಿ… Trisha