ಮನೆಗೆ ಹೊರಟಿದ್ದ ಗಂಡ-ಹೆಂಡ್ತಿ, 5 ತಿಂಗಳ ಹಸುಗೂಸು ಮಾರ್ಗಮಧ್ಯೆ ಹೆಣವಾದರು!

death accident
Published on

ಚಿಕ್ಕೋಡಿ: ಐದು ತಿಂಗಳ ಹಸುಗೂಸಿನ ಜತೆ ಬೈಕ್​ನಲ್ಲಿ ಹೊರಟಿದ್ದ ದಂಪತಿ ಮಾರ್ಗಮಧ್ಯೆ ಮಗು ಸಮೇತ ದುರ್ಮರಣಕ್ಕೀಡಾದ ಘಟನೆ ಗೋಕಾಕ ತಾಲೂಕಿನ ಸಂಗನಕೇರಿ ಗ್ರಾಮದ ಬಳಿ ಸಂಭವಿಸಿದೆ.

ಸದಾಶಿವ ಗಾಣಗೇರ(35), ಇವರ ಪತ್ನಿ ಸಕ್ಕುಬಾಯಿ ಗಾಣಗೇರ(31) ಮತ್ತು 5 ತಿಂಗಳ ಹೆಣ್ಣುಮಗು ಸೃಷ್ಠಿ ಮೃತ ದುರ್ದೈವಿಗಳು. ಮೃತರು ರಾಯಭಾಗ ತಾಲೂಕಿನ ಹಿಡಕಲ್ ಗ್ರಾಮದ ನಿವಾಸಿಗಳು.

ಶನಿವಾರ ಹುಕ್ಕೇರಿಯಿಂದ ಸ್ವಗ್ರಾಮ ರಾಯಭಾಗ ತಾಲೂಕಿನ ಹಿಡಕಲ್​ಗೆ ಬೈಕ್​ನಲ್ಲಿ ಮೂವರೂ ಹೊರಟಿದ್ದರು. ಗೋಕಾಕ ತಾಲೂಕಿನ ಸಂಗನಕೇರಿ ಬಳಿ ಕಬ್ಬು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಮತ್ತು ಬೈಕ್ ಅಪಘಾತಕ್ಕೀಡಾಗಿದ್ದು, ಸ್ಥಳದಲ್ಲೇ ಅಪ್ಪ-ಅಮ್ಮ-ಮಗು ಮೃತಪಟ್ಟಿದ್ದಾರೆ.

ಅಪಘಾತದ ಭೀಕರತೆ ಕಂಡ ದಾರಿಹೋಕರು ಮತ್ತು ಸ್ಥಳೀಯರು ಬೆಚ್ಚಿಬಿದ್ದಿದ್ದು, ವಿಧಿಯಾಟಕ್ಕೆ ಹಿಡಿಶಾಪ ಹಾಕಿದ್ದಾರೆ. ಘಟಪ್ರಭಾ ಪೊಲೀಸರು ಸ್ಥಳ ಪರಿಶೀಲಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಘಟಪ್ರಭಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net