ಅಹವಾಲು ಸ್ವೀಕಾರ, ಸವಲತ್ತು ವಿತರಣೆ

hebri-1
Published on

ಹೆಬ್ರಿ: ಕುಕ್ಕೆಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರಿಂದ ಅಹವಾಲು ಸ್ವೀಕಾರ, ಜನಸಂಪರ್ಕ ಸಭೆ ಹಾಗೂ ವಿವಿಧ ಸವಲತ್ತು ವಿತರಣೆ ಬುಧವಾರ ಕುಕ್ಕೆಹಳ್ಳಿ ಮಹಾಲಿಂಗೇಶ್ವರ ಸಭಾಭವನದಲ್ಲಿ ನಡೆಯಿತು.

ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, 94ಸಿಯಲ್ಲಿ ಮನೆ ಕಟ್ಟಿದವರಿಗೆ ಹಕ್ಕು ಪತ್ರ ನೀಡಲು ಡಿಮ್ಡ್ ಫಾರೆಸ್ಟ್ ಕಾನೂನು ತೊಡಕಾಗಿದೆ. ಅರಣ್ಯ ಹಾಗೂ ಕಂದಾಯ ಇಲಾಖೆಯವರು ಶೀಘ್ರದಲ್ಲಿ ಜಂಟಿ ಸರ್ವೇ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.

ವಾರಾಹಿ ನೀರಾವರಿ ಯೋಜನೆಯಲ್ಲಿ ಶೀಘ್ರ ನೀರು ಕೊಡುವಂತೆ ಅಧಿಕಾರಿಗಳನ್ನು ಸಾರ್ವಜನಿಕರು ಒತ್ತಾಯಿಸಿದರು. ಪಂಚಾಯಿತಿ ನಿಧಿಯಿಂದ ಶಿಕ್ಷಣ, ಅಂಗವಿಕಲ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಸವಲತ್ತು ವಿತರಣೆ, ವಿಧವಾವೇತನ, ಸಂಧ್ಯಾ ಸುರಕ್ಷಾ, ಅಂಗವಿಕಲರ ಮಂಜೂರಾಗಿ ಆದೇಶ ಪತ್ರ, ಸುಕನ್ಯಾ ಸಮೃದ್ಧಿ ಭಾಗ್ಯಲಕ್ಷ್ಮೀ ಬಾಂಡ್ ವಿತರಣೆ ನಡೆಯಿತು.

ಕುಕ್ಕೆಹಳ್ಳಿ ಗ್ರಾಪಂ ಅಧ್ಯಕ್ಷ ಪುರಂದರ ಕೋಟ್ಯಾನ್, ಉಪಾಧ್ಯಕ್ಷೆ ಜಯಶ್ರೀ ಪ್ರಭಾಕರ್, ಉಡುಪಿ ನಗರ ತಹಸೀಲ್ದಾರ್ ಗುರುರಾಜ್, ಉಡುಪಿ ಇಒ ವಿಜಯ, ಪಿಡಿಒ ರಾಘವೇಂದ್ರ ಪ್ರಭು, ಗ್ರಾಪಂ ಸದಸ್ಯರು, ವಿವಿಧ ತಾಲೂಕು ಮಟ್ಟದ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net