More

  ಅಸಹಜ ಲೈಂಗಿಕ ದೌರ್ಜನ್ಯ ಕೇಸ್: 8 ದಿನ ಸಿಐಡಿ ಕಸ್ಟಡಿಗೆ ಸೂರಜ್​ ರೇವಣ್ಣ!

  ಬೆಂಗಳೂರು: ಜೆಡಿಎಸ್‌ ಕಾರ್ಯಕರ್ತನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಪ್ರಕರಣದಲ್ಲಿ ವಿಧಾನ ಪರಿಷತ್‌ ಸದಸ್ಯ ಸೂರಜ್ ರೇವಣ್ಣ ಅವರನ್ನು 8 ದಿನ ಸಿಐಡಿ ಕಸ್ಟಡಿಗೆ ನೀಡಿ ಸೋಮವಾರ ನ್ಯಾಯಾಲಯ ಆದೇಶ ನೀಡಿದೆ. ಸದ್ಯ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಸೂರಜ್ ರೇವಣ್ಣ ಅವರನ್ನು ಜುಲೈ 1 ಸಂಜೆ 4 ರವರೆಗೆ ಸಿಐಡಿ ಕಸ್ಟಡಿಗೆ ಒಪ್ಪಿಸಿ ಜನಪ್ರತಿನಿದಿಗಳ ವಿಶೇಷ ನ್ಯಾಯಾಲಯದಿಂದ ಆದೇಶ ಪ್ರಕಟಿಸಿದೆ.

  ಇದನ್ನೂ ಓದಿ: ಜಿಮ್ ಇಲ್ಲ, ಡಯಟ್ ಇಲ್ಲ..10 ತಿಂಗಳಲ್ಲಿ 23 ಕೆಜಿ ತೂಕ ಕಳೆದುಕೊಂಡ ಉದ್ಯಮಿ.. 

  ಸರ್ಕಾರ ಈ ಪ್ರಕರಣವನ್ನು ಸಿಐಡಿ ಒಪ್ಪಿಸಿತ್ತು. ಹೊಳೆ ನರಸೀಪುರದಲ್ಲಿ ದಾಖಲಾಗಿದ್ದ ಪ್ರಕರಣವನ್ನ ಭಾನುವಾರ ಸಿಐಡಿಗೆ ವರ್ಗಾಯಿಸಿದ ಬೆನ್ನಲ್ಲೇ ಕೋರ್ಟ್​ಗೆ ಹಾಜರುಪಡಿಸಲಾಗಿತ್ತು. ಆದರೆ ಕೇಸ್​ ಸಿಐಡಿಗೆ ಅಧಿಕೃತವಾಗಿ ವರ್ಗಾವಣೆ ಆಗಿರದ ಕಾರಣ 42 ನೇ ಎಸಿಎಂಎಂ ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.

  ರೇವಣ್ಣ‌ ಪರ ವಕೀಲರು, ಆಡಿಯೋ ಸಂಬಂಧ ಆರೋಪಿ ಪೊಲೀಸ್ ಠಾಣೆಗೆ ಅವರೇ ಹೋಗಿದ್ದರು. ಈ ವೇಳೆ ಅವರನ್ನ ಬಂಧಿಸಲಾಗಿದೆ. ಅವರ ಮೊಬೈಲ್ ಫೋನ್ ಕೂಡ ವಶಕ್ಕೆ ಪಡೆದಿದ್ದಾರೆ. ದೂರುದಾರ ಹಣಕ್ಕಾಗಿ ಡಿಮಾಂಡ್ ಮಾಡಿದ್ದ ಆರೋಪದ ಬಗ್ಗೆ ಹೇಳಿಕೆ ನೀಡಲು ಹೋಗಿದ್ದಾರೆ ಬಂಧನಮಾಡಲಾಗಿದೆ ಎಂದು ತಿಳಿಸಿದರು.

  ಶಿವಕುಮಾರ್ ವಿರುದ್ಧವೂ ಸಂತ್ರಸ್ತನಿಂದ ದೂರು ದಾಖಲು!: ಇದೀಗ ಪ್ರಕರಣದಲ್ಲಿ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ದೂರು ಕೊಟ್ಟ ಶಿವಕುಮಾರ್ ವಿರುದ್ಧ ಸಂತ್ರಸ್ತ ದೂರು ಕೊಟ್ಟಿದ್ದಾನೆ. ಪ್ರಕರಣದಲ್ಲಿ ಶಿವಕುಮಾರ್ 2ನೇ ಆರೋಪಿಯಾಗಿದ್ದಾನೆ. ನನಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಶಿವಕುಮಾರ್​ಗೆ ಹೇಳಿದ್ದೆ, ದೈಹಿಕ ಹಿಂಸೆ ಆಗಿದ್ರೂ ಆತ ಆಸ್ಪತ್ರೆಗೆ ಹೋಗಲು ಬಿಟ್ಟಿರಲಿಲ್ಲ, ಆರೋಪಿ ಶಿವಕುಮಾರ್ ನನ್ನನ್ನು ಲಾಡ್ಜ್​ನಲ್ಲಿ ಕೂಡಿ ಹಾಕಿದ್ದ ಅಂತಾ ಸಂತ್ರಸ್ತ ಆರೋಪಿಸಿದ್ದಾನೆ. ಇದಿಷ್ಟೇ ಅಲ್ಲ, ಲಾಡ್ಜ್​ನಲ್ಲಿ ನನ್ನಿಂದ 1000 ಹಣ ಪಡೆದು ನನಗೆ ಊಟದ ವ್ಯವಸ್ಥೆ ಮಾಡಿದ್ದ, ಇನ್ನು ಸೂರಜ್​ ರೇವಣ್ಣ ಜೊತೆ ನನಗೆ ಫೋನ್​ನಲ್ಲಿ ಮಾತನಾಡಿಸಿದ್ದ, 2 ಕೋಟಿ ಹಣ, ಕೆಲಸ ಕೊಡಿಸುವುದಾಗಿ ಕೂಡ ಹೇಳಿದ್ರು, ನಾನು ಒಪ್ಪದಿದ್ದಾಗ ನೀನು ಯಾರ ಬಳಿಯಾದ್ರು ಬಾಯಿ ಬಿಟ್ರೆ, ನಿನ್ನನ್ನು ಮುಗಿಸುತ್ತಾರೆ ಎಂದು ಶಿವಕುಮಾರ್ ಕೊಲೆ ಬೆದರಿಕೆ ಹಾಕಿದ್ದಾರೆ. ನಂತರ ಅಲ್ಲಿಂದ ತಪ್ಪಿಸಿಕೊಂಡು ಸಂಬಂಧಿಕರ ಮನೆಗೆ ಹೋದೆ ಅಂತಾ ಸಂತ್ರಸ್ತನ ದೂರಿನಲ್ಲಿ ಉಲ್ಲೇಖವಾಗಿದೆ.

  See also  ಪ್ರೀತಿ ತೋರಿಸಿದ್ರೆ ಕೆಲಸ ಮಾಡ್ತೀನಿ, ದೂರು ಮಾಡಿದ್ರೆ ರಾಜಕೀಯ ಬಿಟ್ಟು ಮನೆಯಲ್ಲಿ ಇರ್ತೀನಿ: ಪ್ರೀತಂ ಗೌಡ

  ಸಂತ್ರಸ್ತ, ಸೂರಜ್ ಮಾತಾಡಿದ್ದು ಎನ್ನಲಾದ ಆಡಿಯೋ ಸ್ಫೋಟ!: ಸಂತ್ರಸ್ತ, ಸೂರಜ್​ ಮಾತನಾಡಿದ್ದು ಎನ್ನಲಾದ ಆಡಿಯೋವೊಂದು ವೈರಲ್​ ಆಗ್ತಿದೆ. ಆಡಿಯೋದಲ್ಲಿ ಸಂತ್ರಸ್ತನಿಗೆ ಸೂರಜ್​ ರೇವಣ್ಣ, ಹಣ, ಕೆಲಸದ ಆಮಿಷ ಒಡ್ಡಿರೋದು ಬಯಲಾಗಿದೆ.

  ಒಟ್ಟಾರೆಯಾಗಿ ಎಚ್​.ಡಿ.ರೇವಣ್ಣ ಕುಟುಂಬಕ್ಕೆ ಒಂದಲ್ಲ ಒಂದು ಸಂಕಷ್ಟಗಳು ಎದುರಾಗ್ತಾನೆ ಇದೆ. ಇದೀಗ ಸಲಿಂಗ ಕಾಮ ಆರೋಪದಲ್ಲಿ ಸೂರಜ್​ ರೇವಣ್ಣ ಕಂಬಿ ಎಣಿಸೋ ಪರಿಸ್ಥಿತಿ ಸೃಷ್ಟಿಯಾಗಿದೆ. ಇತ್ತಾ ಸೂರಜ್​ ರೇವಣ್ಣ ಪರ ದೂರು ಕೊಟ್ಟು ನಾಪತ್ತೆಯಾಗಿರೋ ಆಪ್ತ ಶಿವಕುಮಾರ್ ನಡೆ ನಿಗೂಢವಾಗಿದೆ. ಆತ ಪತ್ತೆಯಾದ ಬಳಿಕವೇ ಎಲದಕ್ಕೂ ಉತ್ತರ ಸಿಗಲಿದೆ.

  ರಾಜಕಾರಣಿಗಳು ಮಾಡಿದ ಕರ್ಮಕ್ಕೆ ತಕ್ಕ ಪಾಠ ಕಲಿಯುವ ದಿನ ಬಂದಿದೆ: ಕಾಲಜ್ಞಾನಿ ಪಂ. ಶ್ರೀ ಕಾಶಿನಾಥ್ ಮಿಶ್ರ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts