More

  ಮದುವೆಯ ಬಳಿಕ ಅಭಿ ಗುಡ್ ಮ್ಯಾನರ್ಸ್‌ ; ಬದಲಾಗಿದ್ದಾರಂತೆ ಅಭಿಷೇಕ್ ಅಂಬರೀಷ್

  ವಿಜಯವಾಣಿ ಸುದ್ದಿಜಾಲ ಬೆಂಗಳೂರು

  ‘ಅಮರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ನಾಯಕನಾಗಿ ಡೆಬ್ಯೂ ಮಾಡಿದ ಅಭಿಷೇಕ್ ಅಂಬರೀಷ್, ಇದೀಗ ನಾಲ್ಕು ವರ್ಷಗಳ ನಂತರ ‘ಬ್ಯಾಡ್ ಮ್ಯಾನರ್ಸ್‌’ ಮೂಲಕ ವಾಪಸ್ಸಾಗಿದ್ದಾರೆ. ದುನಿಯಾ ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್‌’ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ‘ಅವರು ಕಥೆ, ಪಾತ್ರವನ್ನು ಹಂತ ಹಂತವಾಗಿ ಕಲಾವಿದರ ತಲೆಗೆ ತುಂಬುತ್ತಾ ಹೋಗುತ್ತಾರೆ. ಹೀಗಾಗಿ ನಾವು ಆ ಪಾತ್ರವನ್ನು ಆವರಿಸಿಕೊಳ್ಳಲು ಹೆಚ್ಚು ಕಷ್ಟವಾಗಲಿಲ್ಲ. ಅಂತಹ ನಿರ್ದೇಶಕರ ಜತೆ ಕೆಲಸ ಮಾಡುವುದೇ ಖುಷಿ. ನಾನಿಲ್ಲಿ ರುದ್ರ ಎಂಬ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದೇನೆ’ ಎಂದು ಮಾಹಿತಿ ನೀಡುತ್ತಾರೆ. ಜೂನ್‌ನಲ್ಲಿ ಅವೀವಾ ಬಿದ್ದಪ್ಪ ಜತೆ ಹಸೆಮಣೆ ಏರಿದ್ದ ಅಭಿ, ‘ಮದುವೆಯ ಬಳಿಕ ಜೀವನ ಸಮತೋಲನದಿಂದ ಕೂಡಿದೆ’ ಎನ್ನುತ್ತಾರೆ.

  ಇದನ್ನೂ ಓದಿ : ಬರೋಬ್ಬರಿ 38 ಭಾಷೆಗಳಲ್ಲಿ ರಿಲೀಸ್​ ಆಗಲಿರುವ ದಕ್ಷಿಣ ಭಾರತದ ಚಿತ್ರ ಯಾವುದು ಗೊತ್ತಾ?

  ಮದುವೆಯ ಬಳಿಕ ಅಭಿ ಗುಡ್ ಮ್ಯಾನರ್ಸ್‌ ; ಬದಲಾಗಿದ್ದಾರಂತೆ ಅಭಿಷೇಕ್ ಅಂಬರೀಷ್

  ‘ಈಗ ಶಿಸ್ತು ಹೆಚ್ಚಿದೆ. ಸಮಯಕ್ಕೆ ಸರಿಯಾಗಿ ಮನೆಗೆ ಬರುತ್ತೇನೆ. ತಡರಾತ್ರಿ ಪಾರ್ಟಿ, ಓಡಾಟ, ಕಾರ್ ಡ್ರೈವ್ ಅಂತೆಲ್ಲ ಹೊರಗೆ ಓಡಾಡುವುದಿಲ್ಲ. ಜತೆಗೆ ಬೆಳಗ್ಗೆ ಬೇಗ ಏಳುತ್ತೇನೆ’ ಎಂದು ಹೇಳಿಕೊಳ್ಳುತ್ತಾರೆ.

  ಇದನ್ನೂ ಓದಿ : ಗಾಯಗೊಂಡ ಸಿಂಹದಂತೆ ಅಜಯ್​ ದೇವ್ಗನ್​ ಗರ್ಜನೆ ; ‘ಸಿಂಘಂ ಅಗೇನ್​’ ಫಸ್ಟ್​ ಲುಕ್​ ಬಿಡುಗಡೆ

  ಮದುವೆಯ ಬಳಿಕ ಅಭಿ ಗುಡ್ ಮ್ಯಾನರ್ಸ್‌ ; ಬದಲಾಗಿದ್ದಾರಂತೆ ಅಭಿಷೇಕ್ ಅಂಬರೀಷ್

  ಸಿನಿಮಾನಾ? ರಾಜಕೀಯನಾ?
  ಸಿನಿಮಾ ಮತ್ತು ರಾಜಕೀಯ ಹಿನ್ನೆಲೆ ಎರಡೂ ಇದ್ದರೂ, ಸದ್ಯ ಅಭಿಷೇಕ್ ರಾಜಕೀಯದಿಂದ ದೂರ. ‘ಒಂದು ಕಾಲು ಚಿತ್ರರಂಗ ಮತ್ತೊಂದು ಕಾಲು ರಾಜಕೀಯದಲ್ಲಿಟ್ಟು ಎರಡು ದೋಣಿಗಳಲ್ಲಿ ಸಾಗುವುದು ನನ್ನಿಂದ ಸಾಧ್ಯವಿಲ್ಲ. ಒಂದು ಮನರಂಜನಾ ಕ್ಷೇತ್ರ ಮತ್ತೊಂದು ಸೇವಾ ಕ್ಷೇತ್ರ. ಸಿನಿಮಾ ರಾಜಕೀಯಕ್ಕೆ ಒಂದು ವೇದಿಕೆಯಷ್ಟೇ. ಸಿನಿಮಾ ನೋಡಿ ಬಂದು ಜನ ಓಟ್ ಹಾಕಲ್ಲ. ಸಿನಿಮಾದಲ್ಲಿ ನಾನು ಸಿಎಂ, ಪಿಎಂ, ಅಮೆರಿಕಾ ಪ್ರಧಾನಿ ಪಾತ್ರದಲ್ಲಿ ನಟಿಸಬಹುದು. ಆದರೆ, ಒಳ್ಳೆಯ ಕೆಲಸ ಮಾಡಲಿಲ್ಲ ಅಂದರೆ ಜಿಲ್ಲಾ ಪಂಚಾಯಿತಿ ಚುನಾವಣೆಯನ್ನೂ ಗೆಲ್ಲಲಾಗುವುದಿಲ್ಲ. ಪ್ರಚಾರಕ್ಕೆ ಹೋಗುತ್ತೇನೆ, ಆದರೆ ಎಲ್ಲೂ ಸ್ಪರ್ಧಿಸುವುದಿಲ್ಲ. ಕುಟುಂಬಕ್ಕೆ ಒಬ್ಬರು ರಾಜಕೀಯದಲ್ಲಿದ್ದರೆ ಸಾಕು. ನಮ್ಮ ಇಡೀ ಕುಟುಂಬ ರಾಜಕೀಯಕ್ಕೆ ಬರಬೇಕು ಅಂತೇನಿಲ್ಲ. ಸದ್ಯಕ್ಕೆ ನಾನು ಸಿನಿಮಾದಲ್ಲಿ ಏನಾದರೂ ಸಾಧಿಸಬೇಕು ಅಂತಿಷ್ಟ ಪಡುತ್ತೇನೆ’ ಎಂದು ಹೇಳಿಕೊಳ್ಳುತ್ತಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts