

ಸೂರತ್: ಕಳೆದ ವರ್ಷಾಂತ್ಯದಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ರಾಜ್ಯ ಗೃಹ ಸಚಿವ ಹರ್ಷ್ ಸಾಂಘವಿ ಕುರಿತು ಅವಹೇಳನಕಾತಿ ಹೇಳಿಕೆ ನೀಡಿದ ಆರೋಪದ ಮೇಲೆ ಎಎಪಿ ನಾಯಕ ಗೋಪಾಲ್ ಇಟಾಲಿಯಾ ಅವರನ್ನು ಪೊಲೀಸರು ಬಂಧಿಸಿದ್ಧಾರೆ.
ಬಂಧನದ ನಂತರ ಪೊಲೀಸರು ಗೋಪಾಲ್ ಅವರನ್ನು ಸೂರತ್ ಕ್ರೈಂ ಬ್ರಾಂಚ್ ಪೊಲೀಸರು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ಧಾರೆ.
2022ರ ವರ್ಷಾಂತ್ಯದಲ್ಲಿ ನಡೆದ ವಿಧಾನಸಭೆ ಚುನಾವಣೆಯ ಪ್ರಚಾರದ ವೇಳೆ ಎಎಪಿ ಗೋಪಾಲ್ ಇಟಾಲಿಯ ಗೃಹ ಸಚಿವ ಹರ್ಷ್ ಸಾಂಘವಿ ಅವರನ್ನು ಡ್ರಗ್ಸ್ ಸಾಂಘವಿ ಎಂದು ಸಂಭೋದಿಸಿದ್ದರು.
ಈ ಕುರಿತು ಹರ್ಷ್ ಸಾಂಘವಿ ಸ್ಥಳೀಯ ಪೊಲೀಸ್ ಠಾಣೆ ದೂರು ದಾಖಲಿಸಿ್ದರು ಮತತ್ಉ ಪೊಲೀಸರು FIR ಹಾಕಿದ್ದರು.
ತಮ್ಮ ಪಕ್ಷದ ನಾಯಕನನ್ನು ಬಂಧಿಸಿರುವ ಕುರಿತು ಟ್ವೀಟ್ ಮಾಡಿರುವ ಅರವಿಂದ್ ಕೇಜ್ರಿವಾಲ್ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಎಎಪಿಯ ಸಾಧನೆಯಿಂದಾಗಿ ಭಯಗೊಂಡ ಬಿಜೆಪಿ ಗೋಪಾಲ್ ಇಟಾಲಿಯಾ ಅವರನ್ನು ಬಂಧಿಸಿದೆ ಎಂದು ಕಿಡಿಕಾರಿದ್ಧಾರೆ.
ಗುಜರಾತ್ನಲ್ಲಿ ಆಮ್ ಆದ್ಮಿ ಪಕ್ಷದ ಪ್ರದರ್ಶನದಿಂದಾಗಿ ಬಿಜೆಪಿ ಯಾವ ರೀತಿ ಭಯ ಪಡುತ್ತಿದೆ ಎಂದರೆ ಅದು ಈಗ ನಮ್ಮ ಪಕ್ಷದ ನಾಯಕನನ್ನು ಬಂಧಿಸಿದೆ. ಬಿಜೆಪಿಗೆ ಇರುವುದು ಒಂದೇ ಗುರಿ ಆಮ್ ಆದ್ಮಿ ಪಕ್ಷವನ್ನು ಹೇಗೆ ಮುಗಿಸುವುದು ಎಂಬುದರ ಬಗ್ಗೆ. ಮುಂದಿನ ದಿನಗಳಲ್ಲಿ ಒಬ್ಬೊಬ್ಬರನ್ನಾಗಿ ಜೈಲಿಗೆ ಹಾಕುತ್ತಾರೆ ಎಂದು ಆರೋಪಿಸಿದ್ದಾರೆ.
ತಮ್ಮನ್ನು ಬಂಧಿಸಿದ ಕುರಿತು ಪ್ರತಿಕ್ರಿಯಿಸಿರುವ ಗೋಪಾಲ್ ಇಟಾಲಿಯ ಬಿಜೆಪಿ ಪವಿತ್ರವಾದ ಪಕ್ಷ. ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಫಲಿತಾಂಶ ನೋಡಿದ ಮೇಲೆ ಇವರಿಗೆ ಸಹಿಸಲು ಆಗುತ್ತಿಲ್ಲ. ಭ್ರಷ್ಟ ಬಿಜೆಪಿ ಪಕ್ಷವು ಆಮ್ ಆದ್ಮಿ ಪಕ್ಷವನ್ನು ಮುಗಿಸಲು ಹೊರಟಿದೆ. ನಾವು ಇದಕ್ಕೆಲ್ಲಾ ಹೆದರುವವರಲ್ಲಾ ಹೋರಾಟದ ಮೂಲಕ ಉತ್ತರ ಕೊಡುತ್ತೇವೆ ಎಂದು ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.