

ಮುಂಬೈ : ಬಾಲಿವುಡ್ ನಟ ಆಮೀರ್ ಖಾನ್ ಅವರು ನಿನ್ನೆಯಷ್ಟೇ ತಮ್ಮ ಎರಡನೇ ಹೆಂಡತಿ ಕಿರಣ್ ರಾವ್ಗೆ ಡೈವೋರ್ಸ್ ಕೊಟ್ಟು 15 ವರ್ಷದ ದಾಂಪ್ಯಕ್ಕೆ ಅಂತ್ಯ ಹಾಡುವುದಾಗಿ ಘೋಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಗಮನಕ್ಕೆ ಬರುವ ವಿಷಯವೆಂದರೆ ಅವರ ಮೊದಲ ಮದುವೆಯೂ ಕೂಡ ಸಾಗಿದ್ದು ಹದಿನಾರೇ ವರ್ಷ!
ಆಮೀರ್ ಖಾನ್ರ ಮೊದಲನೇ ಹೆಂಡತಿ ರೀನಾ ದತ್ತ. ಅವರನ್ನು ಚಿಕ್ಕ ವಯಸ್ಸಲ್ಲೇ ಪ್ರೀತಿಸಿ ಮದುವೆಯಾಗಿದ್ದರು, ಆಮೀರ್. 1986 ರಲ್ಲಿ ವೈವಾಹಿಕ ಜೀವನ ಆರಂಭಿಸಿದ್ದ ಈ ಜೋಡಿ, 2002 ರಲ್ಲಿ ವಿಚ್ಛೇದನ ಪಡೆದು ಬೇರೆಯಾಗಿದ್ದರು. ಆಮೀರ್ - ರೀನಾಗೆ ಇಬ್ಬರು ಮಕ್ಕಳು - ಜುನೈದ್ ಖಾನ್, ಈರಾ ಖಾನ್.
ಡಿಸೆಂಬರ್ 2005 ರಲ್ಲಿ ಆಮೀರ್ ಖಾನ್ ಚಲನಚಿತ್ರ ನಿರ್ದೇಶಕಿ ಹಾಗೂ ನಿರ್ಮಾಪಕಿಯಾದ ಕಿರಣ್ ರಾವ್ರನ್ನು ವಿವಾಹವಾಗಿದರು. 56 ವರ್ಷ ವಯಸ್ಸಾಗಿರುವ ಆಮೀರ್ ಮತ್ತು 47 ವರ್ಷದ ಕಿರಣ್ ರಾವ್ಗೆ ಆಜಾದ್ ರಾವ್ ಖಾನ್ ಎಂಬ ಮಗ ಕೂಡ ಇದ್ದಾನೆ.
ಅಮರಪ್ರೇಮದ ಕಥೆ ಸಾರುವ 'ಖಯಾಮತ್ ಸೆ ಖಯಾಮತ್ ತಕ್' ಚಿತ್ರದ ಮೂಲಕ ಬಾಲಿವುಡ್ನ ಮೆಟ್ಟಿಲೇರಿದ ಆಮೀರ್ ಅವರ ಎರಡೂ ಮದುವೆಗಳು ಅರ್ಧಕ್ಕೇ ಮುರಿದಿರುವುದು ವಿಪರ್ಯಾಸ. (ಏಜೆನ್ಸೀಸ್)