ಹದಿನೈದು ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಆಮೀರ್​ ಖಾನ್​- ಕಿರಣ್​ ರಾವ್​..!

Aamir Khan
Published on

ಮುಂಬೈ: ಬಾಲಿವುಡ್​ ತಾರಾದಂಪತಿ ಆಮೀರ್​ ಖಾನ್​ ಮತ್ತು ಕಿರಣ್​ ರಾವ್​ ಇಂದು (ಜುಲೈ 3) ಜಂಟಿ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಡಿವೋರ್ಸ್​ ಘೋಷಣೆಯೊಂದಿಗೆ 15 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದಾರೆ.

ಈ 15 ವರ್ಷಗಳು ನಾವಿಬ್ಬರು ಒಟ್ಟಿಗೆ ಜೀವಿಸಿ ಸಂತೋಷ ಮತ್ತು ನಗೆಯ ಜೀವಿತಾವಧಿಯ ಅನುಭವಗಳನ್ನು ಹಂಚಿಕೊಂಡಿದ್ದೇವೆ. ನಮ್ಮ ಸಂಬಂಧವು ನಂಬಿಕೆ, ಗೌರವ ಮತ್ತು ಪ್ರೀತಿಯಲ್ಲಿ ಮಾತ್ರ ಬೆಳೆದಿದೆ. ನಮ್ಮ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಲು ನಾವಿಬ್ಬರು ಬಯಸಿದ್ದೇವೆ. ಇನ್ನು ಮುಂದೆ ನಾವಿಬ್ಬರು ಪತಿ-ಪತ್ನಿಯಾಗಿರುವುದಿಲ್ಲ. ಆದರೆ, ನಮ್ಮ ಕುಟುಂಬಕ್ಕೆ ಸಹ ಪಾಲಕರಾಗಿ ಇರಲಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಕೆಲವು ದಿನಗಳ ಹಿಂದೆಯೇ ನಾವಿಬ್ಬರು ಬೇರೆಯಾಗುವ ಪ್ಲಾನ್​ ಆರಂಭಿಸಿದೆವು. ಈಗ ಅಂತಿಮ ನಿರ್ಧಾರಕ್ಕೆ ಬಂದಿದ್ದು, ನಾವು ಪ್ರತ್ಯೇಕವಾಗಿ ವಾಸಿಸುವ ತೀರ್ಮಾನಕ್ಕೆ ಬಂದಿದ್ದೇವೆ. ನಮ್ಮ ಮಗ ಅಜಾದ್​ಗೆ ಒಳ್ಳೆಯ ಪಾಲಕರಾಗಿಯೇ ಉಳಿಯುತ್ತೇವೆ. ಆತನ ಉತ್ತಮ ಭವಿಷ್ಯಕ್ಕೆ ನೆರವಾಗುತ್ತೇವೆ ಎಂದಿದ್ದಾರೆ.

ಚಲನಚಿತ್ರಗಳು, ಪಾನಿ ಫೌಂಡೇಶನ್ ಮತ್ತು ಇತರ ಯೋಜನೆಗಳಲ್ಲಿ ಸಹಭಾಗಿತ್ವದಲ್ಲಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ನಮ್ಮ ಸಂಬಂಧದಲ್ಲಿನ ಈ ಬದಲಾವಣೆಯನ್ನು ಅರಿತು ಬೆಂಬಲವಾಗಿ ನಿಂತ ನಮ್ಮ ಕುಟುಂಬಗಳು ಮತ್ತು ಸ್ನೇಹಿತರಿಗೆ ದೊಡ್ಡ ಧನ್ಯವಾದಗಳು ಎಂದು ಹೇಳಿದ್ದಾರೆ.

ಆಮೀರ್ ಖಾನ್ ತಮ್ಮ ಎರಡನೇ ಮಗ ಆಜಾದ್ ರಾವ್ ಖಾನ್​ರನ್ನು ಪತ್ನಿ ಕಿರಣ್ ರಾವ್ ಅವರೊಂದಿಗೆ ಡಿಸೆಂಬರ್ 5, 2011 ರಂದು ಬಾಡಿಗೆ ತಾಯ್ತನದ ಮೂಲಕ ಪಡೆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net