More

    ನಟಿ ಯಾಮಿ ಗೌತಮ್​ಗೆ ಇಡಿ ಬುಲಾವ್​! 1.5 ಕೋಟಿ ರೂ. ಫೋರೆಕ್ಸ್​ ವ್ಯವಹಾರ ಪತ್ತೆ!

    ಮುಂಬೈ : ಬಾಲಿವುಡ್​ ನಟಿ ಯಾಮಿ ಗೌತಮ್​​ಗೆ ಫಾರಿನ್​ ಎಕ್ಸ್​ಚೇಂಜ್ ವ್ಯವಹಾರದ ಸಂಬಂಧವಾಗಿ ವಿಚಾರಣೆ ನಡೆಸಲು ಎನ್​ಫೋರ್ಸ್​ಮೆಂಟ್​ ಡೈರೆಕ್ಟೊರೇಟ್​(ಇಡಿ) ಸಮ್ಮನ್ಸ್​ ನೀಡಿದೆ. ಇಡಿಯ ಮುಂಬೈ ಕಛೇರಿಗೆ ಜುಲೈ 7 ರ ಬುಧವಾರ ಹಾಜರಾಗಬೇಕೆಂಬ ಸೂಚನೆ ಬಂದಿದೆ.

    ಯಾಮಿ ಅವರ ಬ್ಯಾಂಕ್​ ಖಾತೆಯಲ್ಲಿ ಸುಮಾರು 1.5 ಕೋಟಿ ರೂ.ಗಳ ಫಾರಿನ್​ ಎಕ್ಸ್​​ಚೇಂಜ್​ ವ್ಯವಹಾರ ಕಂಡುಬಂದಿರುವ ಹಿನ್ನೆಲೆಯಲ್ಲಿ ಇಡಿ ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಫಾರಿನ್​ ಎಕ್ಸ್​ಚೇಂಜ್​ ಮ್ಯಾನೇಜ್​ಮೆಂಟ್​ ಆ್ಯಕ್ಟ್​​ನ(ಫೇಮಾ) ಉಲ್ಲಂಘನೆಯ ಆರೋಪದ ಮೇಲೆ ವಿಚಾರಣೆ ನಡೆಯುವುದು ಎನ್ನಲಾಗಿದೆ.

    ಇದನ್ನೂ ಓದಿ: ಅತ್ಯಾಚಾರ ಕೇಸ್​ ದಾಖಲಿಸಿದ್ದಕ್ಕೆ ಯುವತಿಯ ಅಣ್ಣನ ಮರ್ಮಾಂಗವನ್ನೇ ಕತ್ತರಿಸಿದ ದುಷ್ಕರ್ಮಿಗಳು!

    32 ವರ್ಷದ ಯಾಮಿ ಗೌತಮ್​ ಕಳೆದ ತಿಂಗಳಷ್ಟೇ ಚಿತ್ರ ನಿರ್ದೇಶಕ ಆದಿತ್ಯ ಧರ್​ರನ್ನು ಮದುವೆಯಾದರು. ಹಿಂದಿ ಚಿತ್ರ ‘ವಿಕ್ಕಿ ಡೋನರ್’​ನಿಂದ ಬಾಲಿವುಡ್​ ಪ್ರವೇಶಿಸಿದ ಯಾಮಿ, ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರ ಇತ್ತೀಚಿನ ಸಿನಿಮಾ ಎಂದರೆ ಪುನೀತ್​ ಖನ್ನ ಅವರ ‘ಗಿನ್ನಿ ವೆಡ್ಸ್​ ಸನ್ನಿ’. (ಏಜೆನ್ಸೀಸ್)

    ಐವರು ಎಲ್​ಇಟಿ ಉಗ್ರವಾದಿಗಳ ಅಂತ್ಯ; ಓರ್ವ ಸೈನಿಕ ಹುತಾತ್ಮ

    ಸಂಚಾರಿ ವಿಜಯ್​ ಅಪಘಾತ: ಆ ರಾತ್ರಿಯ ಘಟನಾವಳಿ ಬಿಚ್ಚಿಟ್ಟ ಬೈಕ್​ ಸವಾರ ನವೀನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts